ಈ ದೇಶದಲ್ಲಿ ಪ್ರತಿದಿನ 1.5 ಕೋಟಿ ರೂ. ಖರ್ಚು! ಜೂ. ಎನ್​ಟಿಆರ್-ರುಕ್ಕು 'ಡ್ರ್ಯಾಗನ್​' ಬಗ್ಗೆ ನಿರ್ಮಾಪಕ ಓಪನ್ ಟಾಕ್​ ​

ಜೂ. ಎನ್​ಟಿಆರ್​ ಮತ್ತು ರುಕ್ಮಿಣಿ ವಸಂತ್ ಅವರ 'ಡ್ರ್ಯಾಗನ್​' ಸಿನಿಮಾ
ಜೂ. ಎನ್​ಟಿಆರ್​ ಮತ್ತು ರುಕ್ಮಿಣಿ ವಸಂತ್ ಅವರ 'ಡ್ರ್ಯಾಗನ್​' ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • ಜೂ. ಎನ್​ಟಿಆರ್​ ಮತ್ತು ರುಕ್ಮಿಣಿ ವಸಂತ್ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ 'ಡ್ರ್ಯಾಗನ್​'
  • ಒಂದು ಸೀನ್​ ಶೂಟಿಂಗ್​ಗಾಗಿ ಜಾರ್ಡನ್​ ದೇಶದಲ್ಲಿ ಚಿತ್ರತಂಡ
  • ಖರ್ಚಿನ ಬಗ್ಗೆ ಮಾಹಿತಿ ಹಂಚಿಕೊಂಡ ಚಿತ್ರದ ನಿರ್ಮಾಪಕ
ಹೈದರಾಬಾದ್​: ಕೆಜಿಎಫ್​ ಖ್ಯಾತಿಯ ಸ್ಟಾರ್​ ನಿರ್ದೇಶಕ ಪ್ರಶಾಂತ್ ನೀಲ್​ ನಿರ್ದೇಶನದ, ಜೂ. ಎನ್​ಟಿಆರ್​ ಮತ್ತು ಕನ್ನಡದ ಬೆಡಗಿ ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್​ 'ಡ್ರ್ಯಾಗನ್' (Dragon) ಚಿತ್ರದ ಬಗ್ಗೆ ಹೊಸ ಮಾಹಿತಿಯೊಂದು ಲಭಿಸಿದೆ.
ಇತ್ತೀಚೆಗಷ್ಟೇ, ಚಿತ್ರದ ಒಂದು ಸೀನ್​ ಶೂಟಿಂಗ್​ಗೆಂದು ಚಿತ್ರತಂಡ ಜಾರ್ಡನ್​ ದೇಶಕ್ಕೆ ಹಾರಿತ್ತು. ಆ್ಯಕ್ಷನ್-ಥ್ರಿಲ್ಲರ್​​ ಕಥಾಹಂದರದ ಈ ತೆಲುಗು ಸಿನಿಮಾವನ್ನು ಭಾರೀ ಬಜೆಟ್​ನಲ್ಲಿ ನಿರ್ಮಿಸಲಾಗುತ್ತಿದೆ ಎಂಬ ಸಂಗತಿ ಸಿನಿಪ್ರಿಯರಿಗೆ ಗೊತ್ತೇ ಇದೆ. ಆದರೆ, ಚಿತ್ರದ ಬಗ್ಗೆ ಹೊಸ ಮಾಹಿತಿಗಳನ್ನು ಪಡೆಯಲು ನಟನ ಅಭಿಮಾನಿಗಳು ಎಂದಿನಂತೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಅಂತೆಯೇ, ನಿರ್ಮಾಪಕರು ಜಾರ್ಡನ್ ದೇಶದಲ್ಲಿ ಒಂದು ಸೀನ್ ಚಿತ್ರೀಕರಣಕ್ಕೆ ತಗುಲಿದ ಖರ್ಚಿನ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.
ನಿರ್ಮಾಪಕರಾದ ನವೀನ್ ಯೆರ್ನೇನಿ ಮಾತನಾಡಿ, ಜಾರ್ಡನ್ ದೇಶದಲ್ಲಿ ಚಿತ್ರೀಕರಣ ಮಾಡಬೇಕೆಂದು ನಾವು ಮುಂಚಿತವಾಗಿಯೇ ಪ್ಲ್ಯಾನ್​ ಹಾಕಿಕೊಂಡಿದ್ದೆವು. ಆ ಶೆಡ್ಯೂಲ್ ಪ್ರಕಾರವೇ, ಭವ್ಯ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ಆದರೆ, ಇಲ್ಲಿ ಒಂದು ದಿನದ ಶೂಟಿಂಗ್​ಗೆ ನಮಗೆ 1.5 ಕೋಟಿ ರೂ. ಖರ್ಚಾಗಿದೆ ಎಂದರು. ಎಷ್ಟು ದಿನಗಳಿಗೆ ಎಂಬುದನ್ನು ಅವರು ಉಲ್ಲೇಖಿಸಲಿಲ್ಲ.
ಇನ್ನು ಟಿಕೆಟ್​ ಬಿಗ್​ ಬಜೆಟ್ ಚಿತ್ರಗಳ ಟಿಕೆಟ್ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ನವೀನ್ ಯೆರ್ನೇನಿ, 'ಪೆಡ್ಡಿ' ಮತ್ತು ಇತರ ಪ್ಯಾನ್-ಇಂಡಿಯನ್ ಸಿನಿಮಾಗಳು, ಬೃಹತ್ ಗಾತ್ರದ ಬಜೆಟ್​ನಲ್ಲಿ ತಯಾರಾಗಿರುತ್ತವೆ. ಈ ಕಾರಣದಿಂದಾಗಿ, ಟಿಕೆಟ್ ಬೆಲೆಯಲ್ಲಿ ಹೆಚ್ಚಳದ ಅಗತ್ಯವಿರುತ್ತದೆ. ಆದರೆ, ಸಾಧಾರಣ ಚಿತ್ರಗಳಿಗೆ ಅದರ ಅಗತ್ಯ ಇರುವುದಿಲ್ಲ ಎಂದು ಹೇಳಿದರು.
ಚಿತ್ರದಲ್ಲಿ ಜೂ.ಎನ್​ಟಿಆರ್​, ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಬಾಲಿವುಡ್​ ನಟ ಅನಿಲ್ ಕಪೂರ್ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್​ನಡಿ ನಿರ್ಮಿಸಲಾಗುತ್ತಿದೆ. ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳು ಮೂಡಿದ್ದು, ಯಾವಾಗ ತೆರೆಗೆ ಬರಲಿದೆ ಎಂಬ ಪ್ರಶ್ನೆಗಳು ಸದ್ಯ ಚಿತ್ರಪ್ರೇಮಿಗಳಲ್ಲಿ ಕಾಡುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net