ಈ ಕುರಿತು ಮಾತನಾಡಿದ ಪೃಥ್ವಿರಾಜ್, 'ಪುಷ್ಪ' ರಿಲೀಸ್ಗೂ ಬಹಳ ಹಿಂದೆಯೇ ನಮ್ಮ ಸಿನಿಮಾ ಶುರುವಾಗಿತ್ತು. ನಾವು ಈ ಕಥೆಯನ್ನು ಸ್ವಲ್ಪ ಸಮಯದ ಹಿಂದೆಯೇ ಪ್ರಾರಂಭಿಸಿದ್ದೆವು. ಚಿತ್ರದ ಕಥೆಯು ಜಿ.ಆರ್. ಇಂದುಗೋಪಾಲನ್ ಬರೆದ 'ವಿಲಾಯತ್ ಬುದ್ಧ' ಕಾದಂಬರಿಯನ್ನು ಆಧರಿಸಿದೆ. ಕಥೆಯನ್ನು ಮೊದಲು ತನಗೆ ಹೇಳಿದ್ದು ಅಯ್ಯಪ್ಪನಮ್ ಕೋಶಿಯುಮ್ ಖ್ಯಾತಿಯ ಸಾಚಿ ಅವರು. ಆದರೆ, ಅವರ ಹಠಾತ್ ನಿಧನದಿಂದ ನಮ್ಮ ಪ್ರಾಜೆಕ್ಟ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ನಮ್ಮ ಚಿತ್ರವನ್ನು ಅವರೊಂದಿಗೆ ಹೋಲಿಸಬೇಡಿ" ಎಂದು ಹೇಳಿದರು,(ಏಜೆನ್ಸೀಸ್).