ತಿರುಪತಿಯಲ್ಲಿ ಹಸೆಮಣೆ ಏರಿದ ಜಯ ಜಾನಕಿ ನಾಯಕ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್; ಬಾಳ ಸಂಗಾತಿ ಕಾವ್ಯಾ ರೆಡ್ಡಿ ಯಾರು?..Sai Sreenivas

Bellamkonda Sai Sreenivas Wedding
Bellamkonda Sai Sreenivas Wedding
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್ 29 ರಂದು ರಾತ್ರಿ 11:13 ರ ಶುಭ ಮುಹೂರ್ತದಲ್ಲಿ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಮದುವೆ
  • 'ಜೀಲಕರ ಬೆಲ್ಲ' ಶಾಸ್ತ್ರದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್​ ಸ್ಟಾರ್​​
  • ತೆಲಂಗಾಣ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಶುಭ ಹಾರೈಸಿದರು
Bellamkonda Sai Sreenivas Wedding: ಜಯ ಜಾನಕಿ ನಾಯಕ ಸಿನಿಮಾ ಮೂಲಕ ಬಾಯ್​ಫ್ರೆಂಡ್​ ಎಂದರೆ ಹೀಗೆ ಇರಬೇಕು ಎನಿಸುವಂತೆ ನಟಿಸಿದ್ದ ನಾಯಕ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ತಿರುಪತಿಯಲ್ಲಿ ಕಾವ್ಯಾ ರೆಡ್ಡಿಯವರಿಗೆ ಬಾಳಾ ಸಂಗಾತಿಯಾಗಿದ್ದಾರೆ. 
ಏಪ್ರಿಲ್ 29 ರಂದು ತಡರಾತ್ರಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಕಾವ್ಯ ರೆಡ್ಡಿ ಅವರೊಂದಿಗೆ ವಿವಾಹವಾದರು. ಅತ್ಯಂತ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆದ ಈ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.
ನನ್ನ ಜೀವನವನ್ನು ಪಾಸಿಟಿವಿಟಿ ಮತ್ತು ನಗುವಿನೊಂದಿಗೆ ತುಂಬಿದ್ದಕ್ಕೆ ಧನ್ಯವಾದಗಳು ಎಂದು ಕಾವ್ಯಾ ರೆಡ್ಡಿಯವರ ಫೋಟೋ ಹಂಚಿಕೊಂಡು  ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್  ಭಾವುಕ ಪೋಸ್ಟ್​ ಹಂಚಿಕೊಂಡಿದ್ದರು. 

ಮೇ1ರಂದು ರಿಸೆಪ್ಷನ್

ಏಪ್ರಿಲ್​  5 ರಂದು ಹೈದರಾಬಾದ್‌ನಲ್ಲಿ  ಸಾಯಿ ಶ್ರೀನಿವಾಸ್​ ಮತ್ತು ಕಾವ್ಯ ರೆಡ್ಡಿ  ನಿಶ್ಚಿತಾರ್ಥ ನಡೆದಿತ್ತು. ಮೇ 1 ರಂದು ಹೈದರಾಬಾದ್‌ನಲ್ಲಿ ಅದ್ದೂರಿ ರಿಸೆಪ್ಷನ್ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸಿನಿಮಾ ನಟ ಮತ್ತು ನಟಿಯರು ಆಗಮಿಸುವ ನಿರೀಕ್ಷೆ ಇದೆ. 

ಯಾರು ಈ ಸಾಯಿ ಶ್ರೀನಿವಾಸ್

ಬಾಡಿಗಾರ್ಡ್​, ಕಾಂಚನ 2 ಮತ್ತು ಅಲ್ಲುಡು ಸೀನುನಂತಹ ಹಿಟ್ ಸಿನಿಮಾಗಳನ್ನು ತೆಲುಗು ಚಿತ್ರರಂಗಕ್ಕೆ ಕೊಟ್ಟ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಅವರ ಪುತ್ರನೇ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್. ಸದ್ಯ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್  'ಟೈಸನ್ ನಾಯ್ಡು' ಮತ್ತು 'ಹೈಂದವ' ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಜಯ ಜಾನಕಿ ನಾಯಕ, ರಾಕ್ಷಸುಡು, ಅಲ್ಲುಡು ಅದರ್ಸ್​, ಸ್ಪೀಡುನ್ನೋಡು, ಸೀತಾ, ಕಿಷ್ಕಿಂದಾಪುರಿ, ಛತ್ರಪತಿ, ಕವಚಂ, ಇವರ ಹಿಟ್​ ಸಿನಿಮಾಗಳಾಗಿವೆ

ಕಾವ್ಯಾ ರೆಡ್ಡಿ ಯಾರು?

ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್​ ಕೈ ಹಿಡಿದ ಕಾವ್ಯ ರೆಡ್ಡಿ  ವಕೀಲರ ಮಗಳು ಎಂದಷ್ಟೇ ತಿಳಿದು ಬಂದಿದೆ. ಆದರೆ ಅವರು ಯಾರು, ಯಾವ ಹಿನ್ನಲೆ ಉಳ್ಳವರು ಎನ್ನುವುದು ಇನ್ನು ಬೆಳಕಿಗೆ ಬಂದಿಲ್ಲ. ಇಬ್ಬರ ಎಂಗೇಜ್​ ಮೆಂಟ್​​ ನಂತರ ಹಂಚಿಕೊಂಡಿರುವ ಕ್ಲೋಸೆಸ್ಟ್​ ಫೋಟೋಗಳಿಂದಾಗಿ ಮದುವೆ ಆಗಲಿದ್ದಾರೆ ಎನ್ನುವುದು ಬೆಳಕಿಗೆ ಬಂದಿತ್ತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net