ತಿಂಗಳಿಗೆ 16 ಲಕ್ಷ ರೂ. ಬಾಡಿಗೆ! ಮುಂಬೈನ ಜುಹುವಿನಲ್ಲಿ ಐಷಾರಾಮಿ ಫ್ಲಾಟ್ ಪಡೆದ ಅಲ್ಲು ಅರ್ಜುನ್; ಅಸಲಿ ಕಾರಣ ರಿವೀಲ್..Allu Arjun
Allu Arjun ಚಿತ್ರ Instagram
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಲ್ಲು ಅರ್ಜುನ್, ಪ್ರಸ್ತುತ ತಮ್ಮ ಮುಂಬರುವ ಚಿತ್ರ ರಾಕಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ
ಮುಂಬೈಗೆ ಭೇಟಿ ನೀಡಿದಾಗಲೆಲ್ಲಾ ಅವರ ವಾಸ್ತವ್ಯಕ್ಕಾಗಿ ಐಷಾರಾಮಿ ಫ್ಲಾಟ್ವೊಂದನ್ನು ಬಾಡಿಗೆಗೆ ಪಡೆದಿದ್ದಾರೆ
ತಿಂಗಳಿಗೆ ಬರೋಬ್ಬರಿ 16 ಲಕ್ಷ ರೂಗಳನ್ನು ಬಾಡಿಗೆ ನೀಡುತ್ತಿರುವುದಾಗಿ ವರದಿಯಾಗಿದ್ದು, ಸದ್ಯ ಎಲ್ಲೆಡೆ ಸುದ್ದಿ ವೈರಲ್ ಆಗಿದೆ
ಈ ಫ್ಲಾಟ್ ಸುಮಾರು 6,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ 5 BHK ಮನೆಯಾಗಿದೆ
Allu Arjun:ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್, ಪ್ರಸ್ತುತ ತಮ್ಮ ಮುಂಬರುವ ಚಿತ್ರ ರಾಕಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದಾಗ್ಯೂ ನಟ ಕೆಲಸಕ್ಕಾಗಿ ಮುಂಬೈಗೆ ಭೇಟಿ ನೀಡಿದಾಗಲೆಲ್ಲಾ ಅವರ ವಾಸ್ತವ್ಯಕ್ಕಾಗಿ ಐಷಾರಾಮಿ ಫ್ಲಾಟ್ವೊಂದನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ನಟ ಮುಂಬೈನ ಅತ್ಯಂತ ಪ್ರತಿಷ್ಠಿತ ಪ್ರದೇಶವಾದ ಜುಹುವಿನಲ್ಲಿ ಅಪಾರ್ಟ್ಮೆಂಟ್ನ್ನು ಬಾಡಿಗೆಗೆ ಪಡೆದಿದ್ದಾರೆ. ಆದಾಗ್ಯೂ, ತಿಂಗಳಿಗೆ ಬರೋಬ್ಬರಿ 16 ಲಕ್ಷ ರೂಗಳನ್ನು ಬಾಡಿಗೆ ನೀಡಿದ್ದಾರೆ. ಈ ಬೆಳವಣಿಗೆಯು ಅವರು ಶೀಘ್ರದಲ್ಲಿಯೇ ಬಾಲಿವುಡ್ಗೆ ಪಾದಾರ್ಪಣೆ ಮಾಡುತ್ತಾರೆಯೇ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ.
ಇಷ್ಟೆಲ್ಲಾ ಸುದ್ದಿ ಇದ್ದರೂ, ಅಲ್ಲು ಅರ್ಜುನ್ ಹೈದರಾಬಾದ್ ಬಿಟ್ಟು ಬರುತ್ತಿಲ್ಲ. ಬದಲಾಗಿ ಎರಡೂ ಪ್ರದೇಶಗಳಲ್ಲಿ ಸಮಯವನ್ನು ಕಳೆಯುತ್ತಿದ್ದಾರೆ. ಏಕೆಂದರೆ, ಅವರು ರಾಕಾ ಚಿತ್ರದಲ್ಲಿ ಮತ್ತು ಲೋಕೇಶ್ ಕನಕರಾಜ್ ಅವರೊಂದಿಗೆ ಇನ್ನೊಂದು ಚಿತ್ರದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ.
ಆದಾಗ್ಯೂ, ಮುಂಬೈನಲ್ಲಿ ಹಲವಾರು ಚಿತ್ರೀಕರಣಗಳು ನಡೆಯುವ ಸಾಧ್ಯತೆಯಿರುವುದರಿಂದ, ಈ ನಗರದಲ್ಲಿ ಮನೆಯನ್ನು ಹೊಂದುವುದರಿಂದ ಅವರಿಗೆ ಕೆಲಸದ ಬದ್ಧತೆನ್ನು ಸುಲಭವಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಈ ಫ್ಲಾಟ್ ಸುಮಾರು 6,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ 5 BHK ಮನೆಯಾಗಿದ್ದು, ಮನಯಿಂದಲೇ ಕೂತು ಸಮುದ್ರ ನೋಟವನ್ನು ವೀಕ್ಷಿಸಬಹುದು. ಆದಾಗ್ಯೂ, ಇದರಲ್ಲಿ ಖಾಸಗಿ ಪ್ಲಂಜ್ ಪೂಲ್ ಮತ್ತು ನಾಲ್ಕು ಕಾರುಗಳಿಗೆ ಪಾರ್ಕಿಂಗ್ ಸಹ ಹೊಂದಿದೆ.
ಈ ಆಸ್ತಿಯ ಒಟ್ಟು ಅಂದಾಜು ಮೌಲ್ಯ ಸುಮಾರು 25 ಕೋಟಿ ರೂ ಆಗಿದ್ದು, ಮೂರು ವರ್ಷಗಳಿಗೆ ಲೀಜ್ಗೆ ಹಾಕಿಕೊಳ್ಳಲಾಗಿದೆ. ಆದಾಗ್ಯೂ, ಅಲ್ಲು ಅರ್ಜುನ್ ಅವರ ಪತ್ನಿ ಅಲ್ಲು ಸ್ನೇಹ ರೆಡ್ಡಿ ಕೂಡಾ ತಮ್ಮ ಹೊಸ ಮನೆಯ ಒಳಾಂಗಣವನ್ನು ಪರಿಶೀಲಿಸಿದ್ದಾರೆ.
ಅವರ ಮಕ್ಕಳಾದ ಅಲ್ಲು ಅಯಾನ್ ಮತ್ತು ಅಲ್ಲು ಅರ್ಹ ರಜೆಯ ಸಮಯದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯಲು ಇದು ಸೂಕ್ತವಾದ ಶಾಂತವಾದ ವಾತಾವರಣವನ್ನು ಸೃಷ್ಟಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ದಕ್ಷಿಣದ ತಾರೆಗಳು ಈಗ ಕೇವಲ ಪ್ರಾದೇಶಿಕ ನಟರಾಗಿ ಉಳಿದಿಲ್ಲ. ಮುಂಬೈನಲ್ಲಿ ಅವರು ಪಾವತಿಸುತ್ತಿರುವ ಲಕ್ಷಾಂತರ ರೂಪಾಯಿ ಬಾಡಿಗೆ ಅಥವಾ ಕೋಟ್ಯಂತರ ರೂಪಾಯಿ ಹೂಡಿಕೆಯು ಇಂಡಿಯನ್ ಸಿನೆಮಾ ರಂಗದಲ್ಲಿ "ಸೌತ್ ಇಂಡಿಯನ್ ಪವರ್" ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ (ಏಜೆನ್ಸೀಸ್).