Aishwarya Lekshmi - ಮೊದಲು ಸೋಲು ನಂತರ ಟ್ರೋಲು!

Aishwarya Lekshmi
Aishwarya Lekshmi
Published on
Aishwarya Lekshmi -
ಒಂದು ಸಿನಿಮಾ ಒಬ್ಬ ನಟ ಅಥವಾ ನಟಿ ಅಥವಾ ತಂತ್ರಜ್ಞನ ಜೀವನವನ್ನೇ ಬದಲಿಸಿಬಿಡುತ್ತದೆ. ಜೀರೋಯಿಂದ ಹೀರೋ ಆಗಿಬಿಡಬಹುದು ಅಥವಾ ಹೀರೋಯಿಂದ ಜೀರೋ ಕೂಡ ಆಗಬಹುದು. ಈಗೇಕೆ ಈ ವಿಷಯ ಅಂದರೆ, ಅದಕ್ಕೆ ಕಾರಣ ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ "ಪೊನ್ನಿಯಿನ್​ ಸೆಲ್ವನ್​', "ಗಟ್ಟಾ ಕುಸ್ತಿ' ಸರಣಿಗಳ ಖ್ಯಾತಿಯ ನಟಿ ಐಶ್ವರ್ಯಾ ಲಕ್ಷ್ಮೀ. ಹೌದು, "ಕಿಂಗ್​ ಆಫ್​ ಕೋಠಾ' (2023) ಚಿತ್ರದಲ್ಲಿ ಅವರು ಮಾಲಿವುಡ್​ ಸ್ಟಾರ್​ ದುಲ್ಕರ್​ ಸಲ್ಮಾನ್​ಗೆ ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಬಾಕ್ಸಾಫಿಸಿನಲ್ಲಿ ಮಕಾಡೆ ಮಲಗಿತ್ತು. ಹಾಗೇ ಐಶ್ವರ್ಯಾ ನಟಿಸಿದ್ದ ತಾರಾ ಪಾತ್ರ ಸೇರಿ, ಇಡೀ ಚಿತ್ರತಂಡವನ್ನು ಆನ್​ಲೈನ್​ ಟ್ರೋಲ್​ಗಳು ಟಾರ್ಗೆಟ್​ ಮಾಡಿಕೊಂಡರು. ಈ ಮೂರು ವರ್ಷಗಳಲ್ಲಿ ಐಶ್ವರ್ಯಾ ಆರು ಚಿತ್ರಗಳಲ್ಲಿ ನಟಿಸಿದ್ದರೂ "ಕಿಂಗ್​ ಆಫ್​ ಕೋಠಾ' ಸೋಲು ಮತ್ತು ಟ್ರೋಲಿನ ಹೊಡೆತದಿಂದ ಚೇತರಿಸಿಕೊಳ್ಳಲು ಆಗಿಲ್ಲವಂತೆ. ಇತ್ತೀಚೆಗಷ್ಟೆ ಈ ಬಗ್ಗೆ ಮೌನ ಮುರಿದಿರುವ ಅವರು, ""ಕಿಂಗ್​ ಆಫ್​ ಕೋಠಾ' ಸೋಲಿನ ಬಳಿಕ ನನಗೆ ಮಲಯಾಳಂನಲ್ಲಿ ಅವಕಾಶಗಳು ಕಡಿಮೆಯಾದವು. ನನ್ನನ್ನೂ ಸೇರಿ ಇಡೀ ತಂಡವನ್ನು ಟ್ರೋಲ್​ ಮಾಡಲಾಯಿತು. ಬೇರೆ ಚಿತ್ರಗಳ ಶೂಟಿಂಗ್​ ಸಮಯದಲ್ಲಿ ತಂಡದ ಸದಸ್ಯರೇ ಜೋಕ್​ ಮಾಡಲಾರಂಭಿಸಿದರು. ಇದು ನನ್ನ ಮೇಲೆ ಅದೆಷ್ಟು ಪರಿಣಾಮ ಬೀರಿತೆಂದರೆ, ಒಂದು ಮೊಬೈಲ್​ ಕಂಪನಿಯ ಓಣಂ ಹಬ್ಬದ ಜಾಹೀರಾತಿನಲ್ಲಿ ದುಲ್ಕರ್​ ಸಲ್ಮಾನ್​ ಮತ್ತು ನನ್ನನ್ನು ಚಿತ್ರೀಕರಿಸಲು ಮುಂದಾದರು. ಆದರೆ, ಇದು ಪ್ರಚಾರಕ್ಕಿಂತ ಹೆಚ್ಚಾಗಿ ಟ್ರೋಲ್​ ಆಗುತ್ತದೆ ಅಂತ ಹೊರನಡೆದೆ. ನನಗೆ ಸಿಕ್ಕಿರುವ ತೀವ್ರ ಪ್ರತಿಕ್ರಿಯೆಗಳಿಂದಾಗಿ ನನಗೆ ದುಲ್ಕರ್​ ಜತೆ ನಟಿಸಲು ಭಯವಾಗುತ್ತದೆ' ಎಂದು ಹೇಳಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net