ರಾಮ್ ಜಗತ್ತಿಗೆ ಸಂಯುಕ್ತಾ ಎಂಟ್ರಿ : ಟಾಲಿವುಡ್ ನಟನ ಚೊಚ್ಚಲ ನಿರ್ದೇಶನಕ್ಕೆ ನಾಯಕಿಯಾದ ‘ಗಾಳಿಪಟ’ ನಟಿ

ಸಂಯುಕ್ತಾ
ಸಂಯುಕ್ತಾ
Published on

ಪ್ರಮುಖ ಮುಖ್ಯಾಂಶಗಳು

  • ರಾಮ್ ಪೊತಿನೇನಿ ಹೊಸ ಸಾಹಸಕ್ಕೆ ಜೋಡಿಯಾದ ಗಾಳಿಪಟ 2 ನಟಿ
  • ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ, ಪಾಂಡಿಚೇರಿ ಸುತ್ತಮುತ್ತ ಶೂಟಿಂಗ್​
  • ಸಂಯುಕ್ತಾ ಹುಟ್ಟುಹಬ್ಬಕ್ಕೆ ಪಾತ್ರದ ಫಸ್ಟ್ ಲುಕ್ ರಿವೀಲ್​
ತೆಲುಗು ನಟ ರಾಮ್ ಪೊತಿನೇನಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ನಟನೆ ಜತೆಗೆ ಮೊದಲ ಬಾರಿಗೆ ನಿರ್ದೇಶನಕ್ಕೆ ಮುಂದಾಗುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಸಿನಿಮಾ ಘೋಷಿಸಿದ್ದ ಅವರು, ಸದ್ದಿಲ್ಲದೇ ಶೂಟಿಂಗ್ ಆರಂಭಿಸಿದ್ದಾರೆ. ಈಗಾಗಲೇ ಪಾಂಡಿಚೇರಿ ಸೇರಿ ವಿವಿಧೆಡೆ ಶೂಟಿಂಗ್ ನಡೆಸಲಾಗಿದೆ. ಇನ್ನು ಚಿತ್ರದಲ್ಲಿ ರಾಮ್‌ಗೆ ನಾಯಕಿ ಯಾರು? ಎಂಬ ಪ್ರಶ್ನೆ ಟಾಲಿವುಡ್‌ನಲ್ಲಿ ಕೇಳಿಬರುತ್ತಿತ್ತು. ಇದೀಗ ಚಿತ್ರತಂಡ ಉತ್ತರ ನೀಡಿದ್ದು, ಕನ್ನಡದ ‘ಗಾಳಿಪಟ 2’ ಸೇರಿ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಮಿಂಚಿರುವ ಸಂಯುಕ್ತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಅವರು 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಸಂಯುಕ್ತಾಗೆ ಉಡುಗೊರೆ ನೀಡಿದೆ. ಈಗಾಗಲೇ ನಟಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಪಾತ್ರದ ಕುರಿತು ಸುಳಿವು ಬಿಟ್ಟುಕೊಟ್ಟಿಲ್ಲ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರವಾಗಿದ್ದು, ಹೀಗಾಗಿ ಅವರು ಯಾವ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವಿದೆ. ಸಂಯುಕ್ತಾ ಸದ್ಯ ಹಿಂದಿ, ತೆಲುಗು, ತಮಿಳಿನ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ‘ಸ್ಲಂಡಾಗ್ : 33 ಟೆಂಪಲ್ ರೋಡ್’, ‘ಸ್ವಯಂಭು’ ರಿಲೀಸ್‌ಗೆ ಸಿದ್ಧವಾಗಿವೆ. ಜತೆಗೆ ಹಿಂದಿಯ ‘ಮಹಾರಾಗಿಣಿ: ಕ್ವೀನ್ ಆ್ ಕ್ವೀನ್ಸ್’, ತಮಿಳಿನ ‘ಬೆಂಜ್’, ತೆಲುಗಿನ ‘ದ ಬ್ಲ್ಯಾಕ್ ಗೋಲ್ಡ್’ನಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net