ಒಂದು ಕಾಲದಲ್ಲಿ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ಕೆಲಸ ಮಾಡುತ್ತಿದ್ದ ಈ ತೆಲುಗಿನ ಬ್ಯೂಟಿ, ವೃತ್ತಿಜೀವನದ ಆರಂಭದಲ್ಲಿ ಬಣ್ಣ ತಾರತಮ್ಯ, ದೇಹವನ್ನು ಅಣಕಿಸುವುದು ಸೇರಿದಂತೆ ಒಂದಷ್ಟು ಕಠಿಣ ಸವಾಲುಗಳನ್ನು ಚಿತ್ರರಂಗದಲ್ಲಿ ಎದುರಿಸಿದ್ದಾಗಿ ಹೇಳಿದ್ದಾರೆ. ನನ್ನ ಮೈಬಣ್ಣ ಅಷ್ಟು ಬಿಳಿಯಾಗಿರಲಿಲ್ಲ. ಆದರೆ, ನೈಸರ್ಗಿಕ ಬಣ್ಣಕ್ಕಿಂತ ಹೆಚ್ಚು ಬಿಳಿಯಾಗಿ ಕಾಣುವಂತೆ ಮಾಡಲು, ಚಿತ್ರತಂಡ ನನ್ನ ಮುಖಕ್ಕೆ ಮಾತ್ರವಲ್ಲ, ದೇಹದ ಭಾಗ ಎಲ್ಲೆಲ್ಲಿ ಕಾಣಿಸುತ್ತೋ, ಅಲ್ಲಿಗೆಲ್ಲ ಮೇಕಪ್ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು ಎಂದಿದ್ದಾರೆ.