'ಅವನಿಗೆ ಒಬ್ಬಿಬ್ಬರ ಜತೆಯಲ್ಲ...' ನಟಿ ಪ್ರಿಯಾ ಭವಾನಿ ಓಪನ್ ​ಟಾಕ್;​ ಯುವಜನತೆಗೆ ಕಿವಿಮಾತು | Priya Bhavani

ನಟಿ ಪ್ರಿಯಾ ಭವಾನಿ
ನಟಿ ಪ್ರಿಯಾ ಭವಾನಿ
Published on

ಪ್ರಮುಖ ಮುಖ್ಯಾಂಶಗಳು

  • ತಮ್ಮ ಪ್ರಿಯಕರನೊಂದಿಗೆ ಲವ್​ ಬ್ರೇಕಪ್​ ವಿಚಾರಕ್ಕೆ ನಟಿ ಪ್ರತಿಕ್ರಿಯೆ
  • ಹರಿದಾಡುತ್ತಿರುವ ವದಂತಿ ಕುರಿತು ತೆಲುಗು ನಟಿ ಪ್ರಿಯಾ ಭವಾನಿ ಓಪನ್ ಟಾಕ್​
  • ಅವನೇ ನನ್ನ ಫಸ್ಟ್​ ಅಂಡ್​ ಲಾಸ್ಟ್​ ಬಾಯ್​ಫ್ರೆಂಡ್​ ಎಂದ ನಟಿ
ಹೈದರಾಬಾದ್​: ಸಾಮಾನ್ಯವಾಗಿ ನಟಿಮಣಿಯರು ತಮ್ಮ ಪ್ರೀತಿ-ಪ್ರೇಮ ಸಂಬಂಧಗಳ ಕುರಿತು ಬಹಿರಂಗವಾಗಿ ಎಲ್ಲಿಯೂ ಮಾತನಾಡಲು ಬಯಸುವುದಿಲ್ಲ. ಅದರಲ್ಲೂ, ಮಾಧ್ಯಮಗಳ ಮುಂದೆಯಂತು ತುಟಿ ಬಿಚ್ಚುವುದೇ ಇಲ್ಲ. ಆದರೆ, ಹರಿದಾಡುವ ಕೆಲವೊಂದು ವದಂತಿಗಳು, ವಿಚಾರಗಳು ಸತ್ಯಕ್ಕೆ ಹತ್ತಿರವಾಗಿದ್ದರೆ, ಹಲವು ಸುಳ್ಳಾಗಿರುತ್ತವೆ. ಇದರಲ್ಲಿ ಯಾವುದೇ ಸುದ್ದಿ ತಮಗೆ ಸಂಬಂಧಿಸಿದ್ದರೆ, ಅದಕ್ಕೆ ಇಷ್ಟವಿರಲಿ, ಇಲ್ಲದಿರಲಿ ಕೆಲವೊಮ್ಮೆ ಸ್ಪಷ್ಟತೆ ಕೊಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಇದು ಕಲಾವಿದರ ಬಾಳಲ್ಲಿ ತೀರ ಸಾಮಾನ್ಯವೇ ಸರಿ. ಆದರೆ, ಸ್ಟಾರ್ ನಟಿಯರ ವಿಚಾರದಲ್ಲಿ ಸ್ವಲ್ಪ ಹೆಚ್ಚು. ಹರಿದಾಡುವ ವದಂತಿಗಳ ಬಗ್ಗೆ ಕೆಲವೇ ಕೆಲವು ಹೀರೋಯಿನ್​ಗಳು ಮಾತ್ರ ತಮ್ಮ ನೇರ ಸ್ವಭಾವದಿಂದ ಖಡಕ್​ ಹಾಗೂ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಉತ್ತರಿಸುತ್ತಾರೆ. ಈ ಸಾಲಿನಲ್ಲಿ ತೆಲುಗು ಚಿತ್ರರಂಗದ ಸುಂದರಿ ಪ್ರಿಯಾ ಭವಾನಿ ಶಂಕರ್ ಕೂಡ ಒಬ್ಬರು. ಇತ್ತೀಚೆಗೆ, ತಮ್ಮ ಪ್ರೇಮ ಸಂಬಂಧ ಕುರಿತು ಹರಿದಾಡುತ್ತಿರುವ ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಶಾಕಿಂಗ್ ಹೇಳಿಕೆಗಳನ್ನೇ ನೀಡಿದ್ದಾರೆ.

ಬ್ರೇಕಪ್​ ವಿಚಾರಕ್ಕೆ ಪ್ರತಿಕ್ರಿಯೆ...

ಟಾಲಿವುಡ್​ನಲ್ಲಿ ಒಂದಷ್ಟು ಚಿತ್ರಗಳಿಂದ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಪ್ರಿಯಾ, ಕಳೆದ ಹತ್ತು ವರ್ಷಗಳಿಂದ ರಾಜ್‌ವೆಲ್ ಎಂಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿದ್ದರು. ಇತ್ತೀಚೆಗಷ್ಟೇ, ಇವರಿಬ್ಬರ ಮಧ್ಯೆ ಒಂದಷ್ಟು ಮನಸ್ತಾಪ ಉಂಟಾಗಿ, ಸದ್ಯ ದೂರ ಉಳಿದಿದ್ದಾರೆ ಎಂಬ ಸುದ್ದಿಗ ಸದ್ಯ ಟಾಲಿವುಡ್​ ಅಂಗಳದಲ್ಲಿ ಚರ್ಚೆಯಾಗುತ್ತಿವೆ. ಈ ವದಂತಿಗಳು ತೀವ್ರವಾದ ಬೆನ್ನಲ್ಲೇ ನಟಿ ಕಡೆಗೂ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾ, "ರಾಜ್ ನನ್ನ ಕಾಲೇಜಿನ ಸ್ನೇಹಿತ. ಅವನು ನನ್ನ ಫಸ್ಟ್​ ಅಂಡ್​ ಲಾಸ್ಟ್​ ಬಾಯ್​ಫ್ರೆಂಡ್​. ಆದರೆ, ಅವನನ್ನು ಪ್ರೀತಿಸುವ ಮೊದಲೇ ಆತನಿಗೆ ಕಾಲೇಜು ದಿನಗಳಲ್ಲಿ ಒಬ್ಬರಲ್ಲ, ಇಬ್ಬರಲ್ಲ ಅನೇಕ ಹುಡುಗಿಯರ ಜತೆ ಸಂಬಂಧವಿತ್ತು, ಅವನು ಸಾಕಷ್ಟು ಜನರೊಂದಿಗೆ ಡೇಟಿಂಗ್ ಮಾಡುತ್ತಿದ್ದ" ಎಂದು ಬಹಿರಂಗವಾಗಿ ಹೇಳಿದ್ದಾರೆ.

ಯುವಜನತೆಗೆ ಕಿವಿಮಾತು

ಇಂದಿನ ಯುವಜನತೆಗೆ ಒಂದು ಮಹತ್ವದ ಸಲಹೆಯನ್ನು ನೀಡಿದ ನಟಿ, "ನಿಮಗೆ ಯಾವುದೋ ಒಂದು ಸಂಬಂಧ ಸರಿಯಿಲ್ಲ ಎನಿಸಿದರೆ ಅಥವಾ ಅದು ಉಸಿರುಗಟ್ಟಿಸುತ್ತಿದೆ ಎಂದು ಭಾವಿಸಿದರೆ, ತಕ್ಷಣವೇ ಬ್ರೇಕ್ ಅಪ್ ಮಾಡಿಕೊಳ್ಳುವ ಮೂಲಕ ಹೊರಬನ್ನಿ" ಎಂದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net