20ರ ದಶಕದಲ್ಲಿ ತೆಲುಗು ಅಂಗಳದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ನಟಿ ಪ್ರತ್ಯುಷಾ ಸಾವಿನ ಪ್ರಕರಣ ಇಡೀ ಟಾಲಿವುಡ್ ಮಾತ್ರವಲ್ಲದೆ ತೆಲುಗು ರಾಜ್ಯಗಳಲ್ಲಿಯೂ ಭಾರೀ ಸಂಚಲನ ಸೃಷ್ಟಿಸಿತು. ಟಾಲಿವುಡ್ ಉದ್ಯಮದಲ್ಲಿ ಅನೇಕ ಸಿನಿಮಾಗಳನ್ನು ಮಾಡಿ, ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದ ಪ್ರತ್ಯುಷಾ, ಸಿದ್ಧಾರ್ಥ್ ರೆಡ್ಡಿಯೊಂದಿಗೆ ಪ್ರೀತಿಯಲ್ಲಿದ್ದರು. ಫೆಬ್ರವರಿ 23, 2002ರಂದು, ಪ್ರತ್ಯುಷಾ ಮತ್ತು ಅವರ ಗೆಳೆಯ ಸಿದ್ಧಾರ್ಥ ರೆಡ್ಡಿ ತಮ್ಮ ಮನೆಯವರು ಪ್ರೀತಿಯನ್ನು ಒಪ್ಪದ ಕಾರಣ, ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಮುಂದಾದರು. ಈ ವೇಳೆ, ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ನಟಿ ಸಾವನ್ನಪ್ಪಿದರೆ, ಸಿದ್ಧಾರ್ಥ್ ಪ್ರಾಣಪಾಯದಿಂದ ಪಾರಾದರು.