ಕಳೆದ ಕೆಲವು ದಿನಗಳಿಂದ 'ಜೈ ಹನುಮಾನ್' ಚಿತ್ರದಲ್ಲಿ ತೇಜ ಸಜ್ಜ ನಟಿಸುತ್ತಿಲ್ಲ, ಅವರು ಈ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ತೇಜ ಸಜ್ಜ ಅವರ ಪಿಆರ್ ತಂಡ, "ತೇಜ ಸಜ್ಜ ಅವರ ಮುಂಬರುವ ಚಿತ್ರಗಳ ಬಗ್ಗೆ ಹರಿದಾಡುತ್ತಿರುವ ಎಲ್ಲಾ ಊಹಾಪೋಹಗಳು ಸುಳ್ಳು. ಜೈ ಹನುಮಾನ್ ಚಿತ್ರದ ವಿಷಯದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಹಳೆಯ ಯೋಜನೆಯಂತೆಯೇ ತೇಜ ಈ ಚಿತ್ರದ ಭಾಗವಾಗಿದ್ದಾರೆ. ಇಂತಹ ಆಧಾರರಹಿತ ವದಂತಿಗಳನ್ನು ನಂಬಬೇಡಿ," ಎಂದು ಅಧಿಕೃತವಾಗಿ ತಿಳಿಸಿದೆ.