'ಮಹಿಳೆಯರನ್ನು ಕೀಳಾಗಿ ತೋರಿಸುವ ದೃಶ್ಯಕ್ಕೆ ಬೆಂಬಲ ಕೊಡಲ್ಲ, ಐಟಂ ಹಾಡುಗಳಲ್ಲಿ ನಟಿಸಲ್ಲ': ನಟ ಸಿದ್ಧಾರ್ಥ್.. Siddharth

Siddharth item songs statement
Siddharth item songs statement
Published on

ಪ್ರಮುಖ ಮುಖ್ಯಾಂಶಗಳು

  • ಒಬ್ಬ ಮಹಿಳೆಯ ಸುತ್ತ 40 ಮಂದಿ ಪುರುಷರು ಕುಣಿಯುವ ಐಟಂ ಸಾಂಗಿನಲ್ಲಿ ನಾನು ನಟಿಸಲ್ಲ
  • ಆಪರೇಷನ್ ಸಫೇದ್ ಸಾಗರ್ ವೆಬ್​ಸೀರಿಸ್​​ನಲ್ಲಿ ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಆಗಿ ಸಿದ್ಧಾರ್ಥ್​ ಮಿಂಚಿಂಗ್
  • ಮಹಿಳೆಯರನ್ನು ಕೀಳಾಗಿ ತೋರಿಸುವ ಯಾವುದೇ ದೃಶ್ಯಗಳಿಗೆ ನಾನು ಬೆಂಬಲ ಕೊಡಲ್ಲ ಎಂದ ಸಿದ್ಧಾರ್ಥ್
ACTOR SIDDHARTH REVEALS HIS PRINCIPLES ON ROLES, MISOGYNY IN CINEMA RP: ಇತ್ತೀಚೆಗೆ ಒಟಿಟಿಯಲ್ಲಿ ರಿಲೀಸ್​ ಆದ ಆಪರೇಷನ್ ಸಫೇದ್ ಸಾಗರ್ ವೆಬ್​ಸೀರಿಸ್​​ಗೆ ಪ್ರಚಾರದ ಭಾಗವಾಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ನಟ ಸಿದ್ಧಾರ್ಥ್​,

ಮಹಿಳೆಯರನ್ನು ಕೀಳಾಗಿ ತೋರಿಸುವ ಐಟಂ ಸಾಂಗ್​ಗಳಲ್ಲಿ ನಾನು ನಟಿಸಲ್ಲ. ಬೆಂಬಲವೂ ನೀಡೋದಿಲ್ಲ ಎಂದಿರುವುದು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ನಟ ಸಿದ್ಧಾರ್ಥ್, ನಟನಾಗಿ ಎಷ್ಟು ಜನಪ್ರಿಯವೋ ಅಷ್ಟೇ ವಿವಾದಗಳ ಮೂಲಕವೂ ಚಿರಪರಿಚಿತರು. ಆಪರೇಷನ್ ಸಫೇದ್​ ಸಾಗರ್ ವೆಬ್​ಸೀರಿಸ್​ನಲ್ಲಿ

ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರದ ಬಗ್ಗೆ ಮಾತನಾಡಿದ ಅವರು,

ಅಹೂಜಾ ಸರ್ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಿರುವುದು ನನಗೆ ದೊಡ್ಡ ಸೌಭಾಗ್ಯ ಮತ್ತು ಆಶೀರ್ವಾದ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿದ್ಧಾರ್ಥ್​ ಹೇಳಿದ್ದೇನು?

ಸಾಮಾನ್ಯವಾಗಿ ಪ್ರತಿ ಸಿನಿಮಾದಲ್ಲಿ ಐಟಂ ಹಾಡುಗಳು ಖಾಯಂ ಆಗಿ ಇರುತ್ತವೆ. ಆದರೆ ಸಿದ್ಧಾರ್ಥ್​ ಸಿನಿಮಾಗಳಲ್ಲಿ ಅಂತಹ ಹಾಡುಗಳು ಕಾಣಿಸುವುದಿಲ್ಲ. ಅಂತಹ ಹಾಡುಗಳಿಂದ ತಾವು ದೂರವಿರಲು ಕಾರಣವೇನು ಎಂಬ ಪ್ರಶ್ನೆಗೆ ನಟ ಉತ್ತರ ಕೊಟ್ಟಿದ್ದು ಹೀಗೆ. 'ಒಬ್ಬ ಮಹಿಳೆಯ ಸುತ್ತ 40 ಮಂದಿ ಪುರುಷರು ಸೇರಿಕೊಂಡು ಇಷ್ಟಬಂದಂತೆ ಕುಣಿದು, ಮನಬಂದಂತೆ ವರ್ತಿಸುವ ಐಟಂ ಹಾಡುಗಳಲ್ಲಿ ನಾನು ಎಂದಿಗೂ ನಟಿಸಿಲ್ಲ, ಮುಂದೆಯೂ ನಟಿಸುವುದಿಲ್ಲ. ಮಹಿಳೆಯರನ್ನು ಕೀಳಾಗಿ ತೋರಿಸುವ ಯಾವುದೇ ದೃಶ್ಯಗಳಿಗೆ ನಾನು ಬೆಂಬಲ ನೀಡೋದು ಇಲ್ಲ' ಎಂದು ಹೇಳಿದ್ದಾರೆ.
'ಎಂದಿಗೂ ನಾಯಕನ ಪಾತ್ರವನ್ನೇ ಮಾಡಬೇಕು ಎನ್ನು ಕಟ್ಟಳೆಯನ್ನು ನಾನು ಹಾಕಿಕೊಂಡಿಲ್ಲ. ನಾನು ತರಹೇವಾರಿ ಪಾತ್ರದಲ್ಲಿ ನಟಿಸಲು ಬಯಸುತ್ತೇನೆ. ನಾಯಕನ ಪಾತ್ರಗಳೇ ಕೆಟ್ಟ ಗುಣಗಳನ್ನು ಹೊಂದಿದ್ದು, ಅಂಥವರನ್ನು ರೋಲ್ ಮಾಡೆಲ್‌ಗಳಾಗಿ ಬಿಂಬಿಸುವ ಕಥೆಗಳನ್ನು ತಾನು ಆಯ್ಕೆ ಮಾಡಿಕೊಳ್ಳುವುದಿಲ್ಲ' ಸಿದ್ಧಾರ್ಥ್ ಮಾಹಿತಿ ಹಂಚಿಕೊಂಡರು.
'ನನಗೆ ನನ್ನ ಪಾತ್ರದ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ನೀಡೊದು ಇಷ್ಟವಿಲ್ಲ. ಚಿತ್ರದ ಕೊನೆಯಲ್ಲಿ ಭೀಕರವಾಗಿ ಅಂತ್ಯಗೊಳ್ಳುವ ನೆಗೆಟಿವ್ ಅಥವಾ ವಿಲನ್ ಪಾತ್ರಗಳಲ್ಲಿ ನಟಿಸಲು ಕೂಡ ತಾನು ಸಿದ್ಧನಿದ್ದೇನೆ, ಆದರೆ ಕೆಟ್ಟದ್ದೇ ಗೆಲ್ಲುವಂತೆ ತೋರಿಸುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿನಿರಂಗದಲ್ಲಿ ಕೇವಲ ಇಮೇಜ್‌ಗಾಗಿ ಅಲ್ಲದೆ ಜವಾಬ್ದಾರಿಯುತವಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ' ಎಂದು ಸಿದ್ಧಾರ್ಥ್ ಹೇಳಿದರು.

ಸಿನಿಮಾ ಪಾತ್ರದ ಬಗ್ಗೆ ಸಿದ್ಧಾರ್ಥ್ ಹೇಳಿದ್ದಿಷ್ಟು

1999 ರ ಕಾರ್ಗಿಲ್ ಯುದ್ಧದ ಹುತಾತ್ಮರಾದ, ಮೃದು ಸ್ವಭಾವದ ಸ್ಕ್ವಾಡ್ರನ್ ಲೀಡರ್ ಅಜಯ್ ಅಹೂಜಾ ಅವರ ಪಾತ್ರದಲ್ಲಿ 'ಆಪರೇಷನ್ ಸಫೇದ್ ಸಾಗರ್' ಸರಣಿಯಲ್ಲಿ ನಟಿಸಿರುವ ಅವರು, 'ಅಹುಜಾ ಸರ್ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಿರುವುದು ನನಗೆ ದೊಡ್ಡ ಸೌಭಾಗ್ಯ ಮತ್ತು ಆಶೀರ್ವಾದ. ಈ ಪ್ರಾಜೆಕ್ಟ್‌ಗೆ ಒಪ್ಪಿಕೊಳ್ಳಲು ಎರಡು ಕಾರಣಗಳಿದ್ದವು; ಒಂದು, ವಾಯುಪಡೆಯು ಇದರ ಹಿಂದೆ ಇತ್ತು. 27 ವರ್ಷಗಳ ಹಿಂದಿನ ಈ ಕಾರ್ಯಾಚರಣೆಗೆ ಸೂಕ್ತ ಗೌರವ ಸಲ್ಲಿಸಲು ಅವರು ನಮಗೆ ಅನುಮತಿ ಮತ್ತು ಸಂಪನ್ಮೂಲಗಳನ್ನು ನೀಡಿದರು. ಎರಡನೆಯದು ಹಾಗೂ ಅತ್ಯಂತ ಮುಖ್ಯವಾದ ಸಂಗತಿಯೆಂದರೆ, ಅಲ್ಕಾ ಮೇಡಮ್ ಇದಕ್ಕೆ ಒಪ್ಪಿಗೆ ನೀಡಿದರು. ಇದು ನನಗೆ ಸೈನಿಕನ ಕಥೆಯಷ್ಟೇ ಮನುಷ್ಯನ ಕಥೆಯೂ ಹೌದು' ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ಆದರೆ ಸಿದ್ಧಾರ್ಥ್ ಅವರ ಈ ಹೇಳಿಕೆಗಳ ಮೇಲೆ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಸಿದ್ಧಾರ್ಥ್ ಅವರನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಎರಡು-ಮೂರು ಮದುವೆಯಾದರೆ, ಅದು ಮಹಿಳೆಯನ್ನು ಅವಮಾನಿಸಿದಂತೆ ಆಗುವುದಿಲ್ಲವೇ. ನೀತಿ ಪಾಠ ಮಾಡಬೇಡಿ ಎಂದು ಟೀಕೆ ಮಾಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net