ಅಲ್ಲು-ಅಟ್ಲೀ ಕಾಂಬಿನೇಷನ್​ ಸಿನಿಮಾದ ಫಸ್ಟ್​ ಪೋಸ್ಟರ್​ ಔಟ್; ಕುತೂಹಲ ಕೆರಳಿಸಿದ ವಿಕಾರವಾದ ಮೃಗದ ಕೈ!..Atlee

Atlee-Allu Arjun
Atlee-Allu Arjun
Published on

ಪ್ರಮುಖ ಮುಖ್ಯಾಂಶಗಳು

  • ಅಟ್ಲೀ ಮತ್ತು ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್​ ಕಾಂಬಿನೇಷನ್​ ಸಿನಿಮಾದ ಪೋಸ್ಟರ್​ ರಿವೀಲ್​
  • ವಿಚಿತ್ರ ಮೃಗದ ಪವರ್‌ಫುಲ್ ಕೈ ಇರುವ ಪೋಸ್ಟರ್​ ಹಂಚಿಕೊಂಡ ಅಟ್ಲಿ, ಸಿನಿಮಾದ ಒಳಗುಟ್ಟೇನು?
  • ಏಪ್ರಿಲ್ 8 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದ ಅಧಿಕೃತ ಶೀರ್ಷಿಕೆ ಬಿಡುಗಡೆ
ತೆರಿ, ರಾಜಾ-ರಾಣಿ, ಮೆರ್ಸೆಲ್​, ಬಿಗಿಲ್​ ಹೀಗೆ ಪ್ರತಿಯೊಂದು ಹಿಟ್​​ ಸಿನಿಮಾಗಳನ್ನೇ ಕೊಟ್ಟ ಅಟ್ಲೀ ಕುಮಾರ್​​​​(Atlee Kumar) ಹಾಗೂ ಟಾಲಿವುಡ್​ ಸ್ಟಾರ್​ ಆದ ಅಲ್ಲು ಅರ್ಜುನ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ 'AA22xA6'  ಸಿನಿಮಾ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. 
ಪುಷ್ಪ-2 ಸಿನಿಮಾ ನಂತರ ಯಾವುದೇ ಸಿನಿಮಾಗಳಲ್ಲಿ ನಟನೆಗೆ ಒಪ್ಪಿಕೊಳ್ಳದ ನಟ ಅಲ್ಲು ಅರ್ಜುನ್ ತಮಿಳು ನಿರ್ದೇಶಕ ಅಟ್ಲೀ ಕತೆಗೆ ತಲೆ ಬಾಗಿದ್ದಾರೆ. ಸಿನಿಮಾದ ಮೊದಲ ಪೋಸ್ಟರ್​​ ಅನ್ನು ಸನ್​ ಪಿಕ್ಚರ್ಸ್​ ಹಂಚಿಕೊಂಡಿದೆ. ಸದ್ಯ 'AA22xA6' ಈಗ ಸಿನಿರಂಗದಲ್ಲಿ ಕುತೂಹಲ ಕೆರಳಿಸಿದೆ. ಚಿತ್ರದ ಅಧಿಕೃತ ಶೀರ್ಷಿಕೆಯನ್ನು ಏಪ್ರಿಲ್ 8 ರಂದು ಬೆಳಿಗ್ಗೆ 11 ಗಂಟೆಗೆ ಘೋಷಣೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಅಟ್ಲೀ ಪೋಸ್ಟರ್​ನಲ್ಲಿ ಏನಿದೆ? 

ಸನ್​ ಪಿಕ್ಚರ್ಸ್​ ಹಂಚಿಕೊಂಡಿರುವ ಪೋಸ್ಟರ್​ನಲ್ಲಿ ​ವಿಚಿತ್ರ ಮೃಗದ ಪವರ್‌ಫುಲ್ ಕೈ ಇದೆ. ಇದು ಸಿನಿಮಾದಲ್ಲಿನ ಫ್ಯಾಂಟಸಿ ಅಂಶದ ಬಗ್ಗೆ ನೀಡುತ್ತಿರುವ ಮಾಹಿತಿ ಎಂದು ಊಹಿಸಲಾಗಿದೆ. ಈ ಪೋಸ್ಟ್​ಗೆ "ಬ್ರೇಸ್ ಫಾರ್ ದಿ ಬ್ಲಾಸ್ಟ್"  ಎಂಬ  ಶೀರ್ಷಿಕೆ ಕೊಟ್ಟು  ಪೋಸ್ಟರ್ ಹಂಚಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯಾರೆಲ್ಲ ಸಿನಿಮಾದಲ್ಲಿದ್ದಾರೆ?

ದೀಪಿಕಾ ಪಡುಕೋಣೆ ಅವರು ಅಟ್ಲೀ ನಿರ್ದೇಶನದ ಜವಾನ್​ ಸಿನಿಮಾದಲ್ಲಿ ನಟಿಸಿದ್ದರು. ಮೊದಲ ಬಾರಿಗೆ ದೀಪಿಕಾರ ಜೊತೆಗೆ ಅಲ್ಲು ಅರ್ಜುನ್​ ನಟಿಸಲಿದ್ದಾರೆ. ಇದರಲ್ಲಿ ಅವರಿಗೆ ವಿಶೇಷ ಪಾತ್ರ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ರಶ್ಮಿಕಾ ಮಂದಣ್ಣ ಅವರು ಸಹ ಈ ಸಿನಿಮಾದಲ್ಲಿರಲಿದ್ದು, ಇದರಲ್ಲಿ ಅವರದ್ದು ಖಳನಾಯಕಿ ಪಾತ್ರ ಎಂದು ಹೇಳಲಾಗುತ್ತಿದೆ. ರಮ್ಯಾ ಕೃಷ್ಣ, ಕೃತಿ ಶೆಟ್ಟಿ ಬಣ್ಣ ಹಚ್ಚಲಿದ್ದಾರೆ. 
ಹಾಲಿವುಡ್​  ರೀತಿ ಸಿನಿಮಾ ಮೇಕಿಂಗ್​
ಈ ಸಿನಿಮಾವು ಹಾಲಿವುಡ್​ನ ಗಾರ್ಡಿಯನ್ಸ್​ ಆಫ್​ ದಿ ಗ್ಯಾಲಕ್ಸಿ ಸಿನಿಮಾ ಮಾದರಿ ಇರಲಿದೆ ಎನ್ನಲಾಗುತ್ತಿದೆ. ಬೃಹತ್​ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದರ ವಿನ್ಯಾಸ ಮತ್ತು ಕತೆ ವಿಭಿನ್ನ ಲೋಕದಲ್ಲಿ ಸಾಗಲಿದೆ ಎನ್ನಲಾಗುತ್ತಿದೆ. ಅವತಾರ್​ 2 ಸಿನಿಮಾ ಮಾದರಿ ದೃಶ್ಯ ವೈಭವ ಇರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಿಗ್ ಬಜೆಟ್ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net