ತೆಲುಗು ನಾಯಕನ 'ಧಮ್ಕಿ' ... ಪ್ಯಾನ್​ ಇಂಡಿಯಾ ಚಿತ್ರದಲ್ಲಿ ವಿಶ್ವಕ್​, ನಿವೇತಾ

Dhamki Vishwak Sen (2)
Published on

ಬೆಂಗಳೂರು: 'ಪುಷ್ಪ', 'ಕೆಜಿಎಫ್​​', 'ಆರ್​ಆರ್​ಆರ್​' ಮತ್ತು 'ಕಾರ್ತಿಕೇಯ 2' ಚಿತ್ರಗಳ ಯಶಸ್ಸು ದಕ್ಷಿಣದ ಕಲಾವಿದರನ್ನು ಪ್ಯಾನ್​ ಇಂಡಿಯಾದತ್ತ ಗಮನ ಹರಿಸುವಂತೆ ಮಾಡಿವೆ. ಹೀಗಾಗಿಯೇ ಚಿತ್ರರಂಗದ ಮಂದಿಯನ್ನು ಕೇವಲ ಒಂದು ಭಾಷೆಗೆ, ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗದೇ ದೊಡ್ಡ ಮಟ್ಟದಲ್ಲಿ ಯೋಚಿಸುವಂತೆ ಮಾಡಿದೆ.

ಇದೇ ನಿಟ್ಟಿನಲ್ಲಿ ಯೋಚಿಸಿರುವ ನಟ, ನಿರ್ದೇಶಕ ವಿಶ್ವಕ್​ ಸೇನ್​ ಪ್ಯಾನ್​ ಇಂಡಿಯಾ ಸಿನಿಮಾದೊಂದಿಗೆ ರೆಡಿಯಾಗುತ್ತಿದ್ದಾರೆ. 'ಲಕ್​ನುಮಾ ದಾಸ್​', 'ಹಿಟ್​', 'ಪಾಗಲ್​' ಚಿತ್ರಗಳ ನಟ ವಿಶ್ವಕ್​ ಸೇನ್​ ಅವರೇ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ 'ಧಮ್ಕಿ' ಚಿತ್ರ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.

'ಪಾಗಲ್​' ಚಿತ್ರದಲ್ಲಿ ವಿಶ್ವಕ್​ಗೆ ನಾಯಕಿಯಾಗಿದ್ದ ನಿವೇತಾ ಪೇತುರಾಜ್​ "ಧಮ್ಕಿ' ಚಿತ್ರದಲ್ಲೂ ಅವರಿಗೆ ಜೋಡಿಯಾಗಿದ್ದು, ಈಗಾಗಲೇ ಶೇಕಡಾ 95ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ಕ್ಲೈಮ್ಯಾಕ್ಸ್​ ಚಿತ್ರೀಕರಣಕ್ಕಾಗಿ ಹೈದರಾಬಾದ್​ನ ಸಾರಥಿ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್​ ಹಾಕಲಾಗಿದ್ದು, ಕೊನೆಯ ಹಂತದ ಶೂಟಿಂಗ್​ ನಡೆಯುತ್ತಿದೆ. ಆದಷ್ಟು ಬೇಗ ಚಿತ್ರೀಕರಣ ಪೂರ್ಣಗೊಳಿಸಿ, ದೀಪಾವಳಿ ಹಬ್ಬಕ್ಕೆ ಮೊದಲ ನೋಟ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು.

ವಿಶ್ವಕ್​ ಸೇನ್​, ನಿವೇತಾ ಪೇತುರಾಜ್​ ಜತೆಗೆ ರಾವ್​ ರಮೇಶ್​, ಹೈಪರ್​ ಆದಿ, ರೋಹಿಣಿ, ಪೃಥ್ವಿರಾಜ್​ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net