ದಸರಾಗೆ ನಾಗೇಶ್ವರ್ ಎಂಟ್ರಿ; ರವಿತೇಜ ಅಭಿನಯದ ಚಿತ್ರದ ಮೊದಲ ಹಾಡು ರಿಲೀಸ್

tnr
Published on

ಟಾಲಿವುಡ್ ನಟ ರವಿತೇಜ ಅಭಿನಯದ ‘ಟೈಗರ್ ನಾಗೇಶ್ವರ್ ರಾವ್’ 70ರ ದಶಕದ ಹೈದರಾಬಾದ್‌ನ ಸ್ಟುವರ್ಟ್‌ಪುರಂ ಹಳ್ಳಿಯ ಕುಖ್ಯಾತ ಕಳ್ಳನ ಜೀವನಾಧಾರಿತ ಚಿತ್ರ. ಇತ್ತೀಚೆಗಷ್ಟೆ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ.

‘ಏಕ್ ದಮ್ ಏಕ್ ದಮ್’ ಎಂದು ಸಾಗುವ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಜಿ.ವಿ ಪ್ರಕಾಶ್ ಸಂಗೀತದ ಹಾಡಿಗೆ ಸಂತೋಷ್ ವಿಶ್ವರತ್ನ ಕನ್ನಡ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸಿ ಹಾಡಿದ್ದಾರೆ. ಇದೊಂದು ರೊಮ್ಯಾಂಟಿಕ್ ಪೆಪ್ಪಿ ಸಾಂಗ್ ಆಗಿದ್ದು, ರವಿತೇಜ ಹಾಗೂ ನೂಪುರ್ ಸನನ್ ಹೆಜ್ಜೆ ಹಾಕಿದ್ದಾರೆ. ಈ ಪಾತ್ರಕ್ಕಾಗಿ ರವಿತೇಜ ಲುಕ್ ಹಾಗೂ ಬಾಡಿ ಲಾಂಗ್ವೇಜ್ ಬದಲಿಸಿಕೊಂಡಿರುವುದು ವಿಶೇಷ. ಇನ್ನು ನೂಪುರ್ ಸನನ್ ಹಾಗೂ ಗಾಯತ್ರಿ ಭಾರಧ್ವಾಜ್ ರವಿತೇಜಗೆ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ವಂಶಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ‘ಕಾರ್ತಿಕೇಯ 2’, ‘ದಿ ಕಾಶ್ಮೀರಿ ೈಲ್ಸ್’ ಖ್ಯಾತಿಯ ಅಭಿಷೇಕ್ ಅಗರ್ವಾಲ್ ಚಿತ್ರವನ್ನು ನಿರ್ಮಿಸಿದ್ದಾರೆ. ಉಳಿದಂತೆ ಆರ್. ಮದಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ ಚಿತ್ರಕ್ಕಿರಲಿದೆ. ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 20ಕ್ಕೆ ‘ಟೈಗರ್ ನಾಗೇಶ್ವರ್ ರಾವ್’ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net