ಆಮೀರ್ ಖಾನ್ ಕೈಯಲ್ಲಿ ಮೂರು ಸಿನಿಮಾ!

Ameer
Published on

ಬಾಲಿವುಡ್​ನ ‘ಮಿಸ್ಟರ್ ಫರ್ಫೆಕ್ಷನಿಸ್ಟ್’ ಎಂದೇ ಕರೆಸಿಕೊಳ್ಳುವ ನಟ ಆಮೀರ್ ಖಾನ್, ಒಂದು ಸಿನಿಮಾ ಒಪ್ಪಿಕೊಂಡರೆ ಆ ಚಿತ್ರ ಮುಗಿಯುವವರೆಗೂ ಬೇರೆ ಸಿನಿಮಾ ಒಪ್ಪಿಕೊಳ್ಳು ವುದಿಲ್ಲ. ಇದು ಅವರೇ ಹಲವು ವರ್ಷಗಳಿಂದ ರೂಢಿಸಿಕೊಂಡಿರುವ ಪದ್ಧತಿ. ಆದರೆ, ಇದೀಗ ಏಕಕಾಲದಲ್ಲಿ 3 ಸಿನಿಮಾಗಳಿಗೆ ಆಮೀರ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ! ಹೌದು, ಈ ಹಿಂದೆಯೇ ಸುದ್ದಿಯಾದಂತೆ ಟಿ-ಸಿರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಬಯೋಪಿಕ್ ‘ಮೊಘಲ್’ ಚಿತ್ರದಲ್ಲಿ ಆಮೀರ್ ನಟಿಸಲಿದ್ದಾರಂತೆ.

ಇದರ ಜತೆಗೆ 2018ರಲ್ಲಿ ಸ್ಪಾನಿಷ್ ಭಾಷೆಯಲ್ಲಿ ತೆರೆಕಂಡಿದ್ದ ‘ಚಾಂಪಿಯನ್’ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗುತ್ತಿದ್ದು, ಬಾಸ್ಕೆಟ್ ಬಾಲ್ ಕೋಚ್ ಆಗಿ ಆಮೀರ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ರೋಚಕ ಎಳೆಯಿರುವ ಬಯೋಪಿಕ್​ವೊಂದರಲ್ಲಿಯೂ ಆಮೀರ್ ನಾಯಕನಾಗಲಿದ್ದು, ಖ್ಯಾತ ನಿರ್ದೇಶಕರೇ ಆ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರಂತೆ. ಹೀಗೆ ಮೂರು ಸಿನಿಮಾಗಳು ಆಮೀರ್ ಅವರನ್ನು ಸುತ್ತಿಕೊಂಡಿದ್ದು, ಮುಂದಿನ ದಿನಗಳಲ್ಲಿ ಒಂದೊಂದೆ ಸಿನಿಮಾ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net