‘ಧೈರ್ಯಂ ಸರ್ವತ್ರ ಸಾಧನಂ’; ಇದು ಪ್ರೇಕ್ಷಕರು ನೀಡಿದ ಶೀರ್ಷಿಕೆ!

Dhairyam
Published on

ಬೆಂಗಳೂರು: ‘ಡಿಎಸ್​ಎಸ್’ ಅಕ್ಷರ ಬಳಸಿಕೊಂಡು ಚಿತ್ರಕ್ಕೆ ಶೀರ್ಷಿಕೆ ನೀಡಿ ಎಂದು ಹೊಸಬರ ತಂಡವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾಪ್ರೇಮಿಗಳಿಗೆ ಸವಾಲೆಸಿದಿತ್ತು. ಅದರಂತೆ ಚಿತ್ರದುರ್ಗದ ಶಿಕ್ಷಕ ರಜನಿಕಾಂತ್ ‘ಡಿಎಸ್​ಎಸ್’ಗೆ ‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ಹೆಸರನ್ನು ಸೂಚಿಸಿ ಬಹುಮಾನ ರೂಪದಲ್ಲಿ 10 ಸಾವಿರ ನಗದು ಮತ್ತು ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

ಒಟ್ಟು 5774 ಮಂದಿ ಬಗೆ ಬಗೆಯ ಹೆಸರುಗಳನ್ನು ಸೂಚಿಸಿದ್ದರು. ಆ ಪೈಕಿ ಚಿತ್ರದ ಸ್ಕ್ರಿಪ್ಟ್ ಪೂಜೆ ಸಮಯದಲ್ಲಿ ಮಂಗಳಮುಖಿಯೊಬ್ಬರ ಕಡೆಯಿಂದ ಲಕ್ಕಿ ಡ್ರಾ ಮೂಲಕ ಚೀಟಿ ತೆಗೆಸಲಾಗಿತ್ತು. ಅದರಲ್ಲಿ 60ನೇ ಕ್ರಮ ಸಂಖ್ಯೆಯ ರಜನಿಕಾಂತ್ ಸರಿಯಾದ ಉತ್ತರ ನೀಡಿದ್ದಾರೆ. ನೈಜ ಘಟನೆ ಆಧರಿಸಿ ಸಿದ್ಧವಾಗುತ್ತಿರುವ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರವನ್ನು ಎ.ಆರ್. ಸಾಯಿರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಎ.ಪಿ.ಪೊ›ಡಕ್ಷನ್ ಬ್ಯಾನರ್​ನಲ್ಲಿ ಆನಂದ್ ಬಾಬು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net