ಮುಂಬೈ: ಕಳೆದ ಬುಧವಾರ ಬೃಹನ್ ಮುಂಬೈ ಮಹಾನಗರ ಪಾಲಿಕೆಯವರು ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಮನೆ ಅತಿಕ್ರಮವಾಗಿ ನಿರ್ಮಾಣವಾಗಿದೆ ಎಂದು ಮನೆಯನ್ನು ಭಾಗಶಃ ಒಡೆದು ಹಾಕಿದ್ದರು. ಅರ್ಧಂಬರ್ಧ ಒಡೆದು ಹಾಕಿರುವ ಮನೆಯನ್ನು ಯಾವುದೇ ಕಾರಣಕ್ಕೂ ಕಟ್ಟಿಸುವುದಿಲ್ಲ, ಅದನ್ನು ಸಾಂಕೇತಿಕವಾಗಿ ಹಾಗೆಯೇ ಬಿಡುತ್ತೇನೆ ಎಂದು ಕಂಗನಾ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮಗಾಗಿರುವ ನಷ್ಟವನ್ನು ಭರಿಸಬೇಕು ಎಂದು ಮಹಾನಗರ ಪಾಲಿಕೆಯ ವಿರುದ್ಧ ಎರಡು ಕೋಟಿ ದಾವೆ ಹೂಡಿದ್ದಾರೆ. ಈ ಮಧ್ಯೆ, ಮಹಾನಗರ ಪಾಲಿಕೆಯವರು ತಮ್ಮ ಮನೆಯನ್ನು ಹೇಗೆ ಒಡೆದಿದ್ದಾರೆ ಎಂದು ಫೋಟೋಗಳ ಸಮೇತ ವಿವರಿಸಿದ್ದಾರೆ. ಹೇಗಿದ್ದ ಮನೆ, ಹೇಗಾಯಿತು ಎಂದು ಕೆಲವು ಉದಾಹರಣೆಗಳನ್ನು ಹಂಚಿಕೊಂಡಿದ್ದಾರೆ. ಮನೆ ಈಗ ಹೇಗಿದೆ ಎಂಬುದನ್ನು ನೀವೇ ನೋಡಿ ...
ಕೃಪೆ: ಕಂಗನಾ ಟ್ವಿಟರ್ ಖಾತೆ