ಕಾಜಲ್ ಈಗ ಬರ್ಕ್ಲಿ; ನೋ ಸ್ಮೋಕಿಂಗ್ ಹುಡುಗಿಯ ಮೊದಲ ಚಿತ್ರ

girl
Published on

ಬೆಂಗಳೂರು: ‘ಧೂಮಪಾನ ನಿಷೇಧ ಕುರಿತ ಜಾಹೀರಾತಿನಲ್ಲಿ ನಟಿಸಿದ್ದ ಪುಟಾಣಿ ಹೆಣ್ಣುಮಗು ಇದೀಗ ನಮ್ಮ ಚಿತ್ರದ ನಾಯಕಿ ...’- ಎರಡು ವರ್ಷಗಳ ಹಿಂದೆ ಪ್ರಾರಂಭವಾದ ‘ಕಾಜಲ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಸಿಮ್ರನ್ ನಾಟೇಕರ್ ಎಂಬ ಯುವತಿಯನ್ನು ಪರಿಚಯಿಸುತ್ತಾ ಈ ಮಾತು ಹೇಳಿದ್ದರು ನಿರ್ದೇಶಕ ಸುಮಂತ್ ಕ್ರಾಂತಿ. ಹೀಗೆ ಶುರುವಾದ ಚಿತ್ರ ಕಾರಣಾಂತರಗಳಿಂದ ಸ್ವಲ್ಪ ತಡವಾಗಿತ್ತು. ಈಗ ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ.

‘ನೋ ಸ್ಮೋಕಿಂಗ್’ ಹುಡುಗಿ ಸಿಮ್ರನ್ ಅಭಿನಯದ ಈ ಚಿತ್ರದ ಹೆಸರನ್ನು ಬದಲಾಯಿಸಿದ್ದು, ಇದೀಗ ಚಿತ್ರಕ್ಕೆ ‘ಬರ್ಕ್ಲಿ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ‘ಕರಿಯ’, ‘ಗಣಪ’, ‘ಕರಿಯ 2’ ಮುಂತಾದ ಸಿನಿಮಾಗಳನ್ನು ನಿರ್ವಿುಸಿದ್ದ ಆನೇಕಲ್ ಬಾಲರಾಜ್, ‘ರ್ಬಕ್ಲಿ’ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಅವರ ಮಗ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಚಿತ್ರೀಕರಣೋತ್ತರ ಕೆಲಸಗಳಲ್ಲಿ ತಂಡ ನಿರತವಾಗಿದೆ. ಇನ್ನುಳಿದಂತೆ ಬಹುಭಾಷಾ ನಟ ಚರಣ್ ರಾಜ್, ಶೃತಿ, ಬಲ ರಾಜವಾಡಿ, ಬುಲೆಟ್ ಪ್ರಕಾಶ್ ಸೇರಿ ಹಲವರಿದ್ದಾರೆ. ಚೇತನ್ ಕುಮಾರ್, ಅಭಿ ಚಿತ್ರದ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್, ಎನ್.ಎಂ.ಸೂರಿ ಛಾಯಾಗ್ರಹಣ, ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net