Box Office Films: ಭಾರತೀಯ ಚಿತ್ರೋದ್ಯಮದಲ್ಲಿ ಸಾವಿರ ಕೋಟಿ ರೂ. ಕ್ಲಬ್ಗೆ ಸೇರುವುದು ಈಗ ದೊಡ್ಡ ಮೈಲಿಗಲ್ಲು ಎಂಬುದು ಕೇವಲ ಚಿತ್ರರಂಗ ಮಾತ್ರವಲ್ಲ, ಸಿನಿಪ್ರೇಮಿಗಳಿಗೂ ಗೊತ್ತಿರುವ ಸಂಗತಿ. ರಿಲೀಸ್ ಆದ ಮೊದಲ ವಾರ ಚಿತ್ರಮಂದಿರಗಳಲ್ಲಿ ಉಳಿದು ಪ್ರದರ್ಶನ ಕಾಣುವುದೇ ಸಾಹಸವಾಗಿರುವ ಸಮಯದಲ್ಲಿ, ಅದೇ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು 1000 ಕೋಟಿ ರೂ. ಗಳಿಕೆ ಕಾಣುವುದಂತು ಸಾಧನೆಯೇ. ಈ ಸಾಲಿಗೆ ಇತ್ತೀಚೆಗಷ್ಟೇ ಬಿಡುಗಡೆಯಾದ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಕೂಡ ಹೊಸದಾಗಿ ಸೇರ್ಪಡೆಗೊಂಡಿದೆ.
ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಅತೀ ವೇಗವಾಗಿ 1000 ಕೋಟಿ ಕ್ಲಬ್ಗೆ ಸೇರಿಸಿರುವ ಸಿನಿ ಪ್ರೇಮಿಗಳಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿರುವ ರಾಮಾಯಣ ಚಿತ್ರತಂಡ, ಈ ಪ್ರೀತಿ, ಪ್ರೋತ್ಸಾಹವನ್ನು ಹೀಗೆ ಮುಂದುವರೆಸಿ ಎಂದು ಮನವಿ ಮಾಡಿದೆ. ಮತ್ತೊಂದೆಡೆ, ಸಾವಿರ ಕೋಟಿ ಕ್ಲಬ್ ಸೇರಿರುವ ದಾಖಲೆಯ ಪಟ್ಟಿಯಲ್ಲಿ ಭಾರತದ ಹಲವಾರು ಸಿನಿಮಾಗಳಿವೆ. ಅಲ್ಲು ಅರ್ಜುನ್, ರಣವೀರ್ ಸಿಂಗ್, ರಣಬೀರ್ ಕಪೂರ್, ಪ್ರಭಾಸ್, ಯಶ್ ಸೇರಿದಂತೆ ಆಯಾ ಭಾಷೆಯ ಸ್ಟಾರ್ ನಟರ ಬ್ಲಾಕ್ಬಸ್ಟರ್ ಚಿತ್ರಗಳೇ ಈ ಪಟ್ಟಿಯಲ್ಲಿವೆ.
ವಿಶ್ವಾದ್ಯಂತ 1,000 ಕೋಟಿ ರೂ. ಗಳಿಸಿರುವ ಸಿನಿಮಾಗಳ ಪಟ್ಟಿಗೆ ಇದೀಗ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಕೂಡ ಸೇರ್ಪಡೆಯಾಗಿದೆ. ಅತಿ ವೇಗವಾಗಿ ಸಾವಿರ ಕೋಟಿ ರೂ. ಕಲೆಕ್ಷನ್ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ಪುಷ್ಪ 2’ ಮತ್ತು ‘ಧುರಂಧರ್ 2’ ಮೊದಲ ಸ್ಥಾನದಲ್ಲಿದ್ದರೆ, ‘ರಾಮಾಯಣ’ ಎರಡನೇ ಸ್ಥಾನವನ್ನು ಅಲಂಕರಿಸಿದೆ.
ಅಲ್ಲು ಅರ್ಜುನ್ ಅಭಿನಯದ ಹಾಗೂ ಸುಕುಮಾರ್ ನಿರ್ದೇಶನದ ‘ಪುಷ್ಪ 2: ದಿ ರೂಲ್’ 2024ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿತು. ಬಿಡುಗಡೆಯಾದ ಕೇವಲ ಏಳು ದಿನಗಳಲ್ಲಿ ವಿಶ್ವಾದ್ಯಂತ 1,000 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ ಒಟ್ಟು 1,742 ಕೋಟಿ ರೂಪಾಯಿ ಗಳಿಸಿದೆ.
ಇದೇ ದಾಖಲೆಯನ್ನು ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2: ದಿ ರಿವೆಂಜ್’ ಕೂಡ ಸರಿಗಟ್ಟಿದೆ. 2026ರಲ್ಲಿ ಬಿಡುಗಡೆಯಾದ ಈ ಸಿನಿಮಾ ಏಳು ದಿನಗಳಲ್ಲೇ ಸಾವಿರ ಕೋಟಿ ರೂಪಾಯಿ ಗಳಿಸಿದ್ದು, ಒಟ್ಟು 1,813 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಅತಿ ವೇಗವಾಗಿ ಸಾವಿರ ಕೋಟಿ ಗಳಿಸಿದ ಬಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಈ ಸಿನಿಮಾ 10 ದಿನಗಳಲ್ಲಿ ಸಾವಿರ ಕೋಟಿ ಗಳಿಸಿ, ಒಟ್ಟು 1,788 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ ಹಾಗೂ ರಾಜಮೌಳಿ ನಿರ್ದೇಶನದ ಈ ಸಿನಿಮಾ 16 ದಿನಗಳಲ್ಲಿ ಸಾವಿರ ಕೋಟಿ ಗಡಿ ದಾಟಿ, ಒಟ್ಟು 1,230 ಕೋಟಿ ರೂಪಾಯಿ ಕಲೆಕ್ಷನ್ ಕಂಡಿದೆ.
ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾ 18 ದಿನಗಳಲ್ಲಿ ಸಾವಿರ ಕೋಟಿ ರೂ. ಗಳಿಸಿದ್ದು, ಒಟ್ಟು 1,245 ಕೋಟಿ ರೂಪಾಯಿ ಬಾಚಿಕೊಂಡಿತು.
ಬಾಲಿವುಡ್ನ ಕಿಂಗ್ ಖಾನ್, ನಟ ಶಾರುಖ್ ಖಾನ್ ಅಭಿನಯದ ಈ ಸಿನಿಮಾ 18 ದಿನಗಳಲ್ಲಿ ಸಾವಿರ ಕೋಟಿ ಕ್ಲಬ್ ಸೇರಿ, ಒಟ್ಟು 1,160 ಕೋಟಿ ರೂಪಾಯಿ ಗಳಿಸಿದೆ.
ಶಾರುಖ್ ಖಾನ್ ಅಭಿನಯದ ಈ ಸಿನಿಮಾ 27 ದಿನಗಳಲ್ಲಿ ವಿಶ್ವಾದ್ಯಂತ ಸಾವಿರ ಕೋಟಿ ರೂಪಾಯಿ ಗಳಿಕೆಯ ಗಡಿ ದಾಟಿದೆ.
ಇದಲ್ಲದೆ, ಆಮಿರ್ ಖಾನ್ ಅಭಿನಯದ ‘ದಂಗಲ್’ ಮತ್ತು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾಗಳೂ ಸಾವಿರ ಕೋಟಿ ರೂಪಾಯಿ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿವೆ. ಒಟ್ಟಾರೆ, ಭಾರತೀಯ ಸಿನಿಮಾಗಳ ಜಾಗತಿಕ ಮಾರುಕಟ್ಟೆ ವಿಸ್ತರಿಸುತ್ತಿದ್ದು, ಸಾವಿರ ಕೋಟಿ ಗಳಿಕೆಯ ದಾಖಲೆ ಈಗ ಹಲವು ಚಿತ್ರಗಳ ನಡುವಿನ ಪೈಪೋಟಿಗೆ ಸಾಕ್ಷಿಯಾಗಿದೆ. ಈ ಸಾಲಿಗೆ ರಜಿನಿಕಾಂತ್ ಅಭಿನಯದ ಜೈಲರ್ 2 ಚಿತ್ರವು ಸೇರುವ ಹಂತದಲ್ಲಿತ್ತು. ಆದ್ರೆ, ಚಿತ್ರತಂಡ 800 ಕೋಟಿ ರೂ. ಗಳಿಕೆ ಇರುವಾಗಲೇ ಒಟಿಟಿ ಡೀಲ್ ಮಾಡಿಕೊಂಡಿದ್ದು ಆ ಕನಸನ್ನು ನುಚ್ಚುನೂರು ಮಾಡಿತು,(ಏಜೆನ್ಸೀಸ್).