

ಟಾಲಿವುಡ್ನ ಬಿಜಿ ನಟಿಯರ ಪೈಕಿ ಕೃತಿ ಶೆಟ್ಟಿಗೆ ಮೊದಲ ಸ್ಥಾನವಂತೆ. ಕಳೆದ ವರ್ಷ ಆಕೆಯ ಮೊದಲ ಚಿತ್ರ "ಉಪ್ಪೆನಾ' ಹಿಟ್ ಆಗಿದ್ದೇ ಆಗಿದ್ದು, ಆ ನಂತರ ಆಕೆಗೆ ಅವಕಾಶಗಳು ಕ್ರಮೇಣ ಹೆಚ್ಚಾಗಿವೆ. ಸಿನಿಮಾದಲ್ಲಿ ಅದೆಷ್ಟು ಬಿಜಿ ಎಂದರೆ, ಬೇರೆ ಯಾವುದರ ಬಗ್ಗೆಯೂ ಯೋಚನೆಯೇ ಇಲ್ಲ ಎಂದು ಸ್ವತ ಕೃತಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೊಂದು ಸಮಾರಂಭದಲ್ಲಿ ಕೃತಿ ಮತ್ತು ಮಾಧ್ಯಮದವರ ಮುಖಾಮುಖಿಯಾಗಿದರು. ಈ ಸಂದರ್ಭದಲ್ಲಿ ಕೃತಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಇದರಲ್ಲಿ ಪ್ರೀತಿ, ಮದುವೆಯ ಪ್ರಶ್ನೆಗಳೂ ಇವೆ. ಈ ಬಗ್ಗೆ ಮಾತನಾಡಿರುವ ಕೃತಿ, ಮದುವೆ ಮತ್ತು ಪ್ರೀತಿಯ ಬಗ್ಗೆ ಯೋಚಿಸುವಷ್ಟೂ ಈಗ ಸಮಯವಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಗಮನವೇನಿದ್ದರೂ ಸಿನಿಮಾ ಮತ್ತು ಅಭಿನಯದ ಬಗ್ಗೆಯೇ ಹೊರತು, ಬೇರೆ ಯಾವುದರ ಬಗ್ಗೆಯೂ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ಈ ವರ್ಷ, ಕೃತಿ ಅಭಿನಯದ "ಬಂಗಾರಾಜು' ಬಿಡುಗಡೆಯಾಗಿದೆ. ಅದಲ್ಲದೆ "ಆ ಅಮ್ಮಾಯಿ ಗುರಿಂಚು ಮೀಕು ಚಪ್ಪಾಲಿ', "ದಿ ವಾರಿಯರ್', "ಮಚ್ಚೇರ್ಲ ನಿಯೋಜಕವರ್ಗಂ' ಮುಂತಾದ ಚಿತ್ರಗಳಲ್ಲಿ ಕೃತಿ ನಟಿಸುತ್ತಿದ್ದು, ಆ ಎಲ್ಲ ಚಿತ್ರಗಳು ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.