

ಬೇಡಿಕೆಗಳು - ಚಿತ್ರ ನಿರ್ವಪಕರಿಗೆ 2017-18ನೇ ಸಾಲಿನಿಂದ ಬಾಕಿಯಿರುವ ಸಹಾಯಧನ ಬಿಡುಗಡೆ - ಕರೊನಾ ಕಾರಣಕ್ಕೆ ಚಿತ್ರೋದ್ಯಮ ಸ್ಥಗಿತವಾಗಿದ್ದರಿಂದ 2 ವಾರಗಳ ಪೂರ್ವದಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಸೂಕ್ತ ಪರಿಹಾರ - ಚಿತ್ರ ನಿರ್ವಣಕ್ಕೆ ಏಕಗವಾಕ್ಷಿ ಪದ್ಧತಿ, ಚಿತ್ರನಗರಿ, ವ್ಯಾಟ್, ಜಿಎಸ್ಟಿ, ಮರುಪಾವತಿಗೆ ತ್ವರಿತ ಕ್ರಮ - ಚಿತ್ರಮಂದಿರ, ಸ್ಟುಡಿಯೋ, ಲ್ಯಾಬ್, ರೆಕಾರ್ಡಿಂಗ್ ಥಿಯೇಟರ್, ಎಡಿಟಿಂಗ್, ಡಿಐ ಇನ್ನಿತರ ಸಂಸ್ಥೆಗಳಿಗೆ ವಿದ್ಯುತ್, ನೀರಿನ ಶುಲ್ಕ, ಆಸ್ತಿ ತೆರಿಗೆಯ ಕನಿಷ್ಟ ತೆರಿಗೆ ಹಾಗೂ ಆದಾಯ ತೆರಿಗೆಯಲ್ಲಿ ರಿಯಾಯಿತಿ. - ಚಲನಚಿತ್ರೋದ್ಯಮವನ್ನು ’ಕೈಗಾರಿಕಾ ಉದ್ಯಮ’ವೆಂದು ಘೋಷಿಸಿ, ಪುನಶ್ಚೇತನ ನೀಡುವುದು.
ಬೆಂಗಳೂರು: ಕರೊನಾದಿಂದಾಗಿ 6 ತಿಂಗಳಿಂದ ಮುಚ್ಚಿರುವ ಚಲನ ಚಿತ್ರಮಂದಿರಗಳು ಅ.1ರಿಂದ ಪುನಾರಂಭವಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್ ತಿಳಿಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆನ್ಲೈನ್ ಮೂಲಕ ಸಭೆ ನಡೆಸಿದ್ದಾರೆ.
- ಶಿವರಾಜ್ ಕುಮಾರ್, ಹಿರಿಯ ನಟ.
ಚಲನಚಿತ್ರೋದ್ಯಮದ ಕರೊನಾ ಸಂಕಷ್ಟವನ್ನು ವಿವರಿಸಿ, ಅವಲಂಬಿತರ ಕಲಾವಿದರು, ಕಾರ್ವಿುಕರು ಸೇರಿದಂತೆ ಎಲ್ಲರಿಗೂ ನೆರವು ನೀಡಬೇಕು ಎಂದು ಮುಖ್ಯಮಂತ್ರಿಗೆ ಕೋರಲಾಗಿದ್ದು, ಚಲನಚಿತ್ರ ಮಂದಿರಗಳು ಪುನರಾರಂಭವಾದರೆ ಎಲ್ಲರಿಗೂ ಅನುಕೂಲವಾಗುತ್ತದೆ.
ಚಿತ್ರೋದ್ಯಮದ ಕಷ್ಟ-ನಷ್ಟಗಳನ್ನು ವಿವರಿಸಿ, ಟಾಕೀಸ್ಗಳ ಪುನರಾರಂಭಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಕೇಂದ್ರ ಗೃಹ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಸೆಪ್ಟಂಬರ್ 2ನೇ ವಾರ ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ) ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.
ಚಿತ್ರರಂಗ ಸಮಸ್ಯೆ ನಿವಾರಣೆಗೆ ಸಿಎಂ ಭರವಸೆ: ಚಿತ್ರೋದ್ಯಮಕ್ಕೆ ಕರೊನಾ ತಂದೊಡ್ಡಿದ ಸಂಕಷ್ಟದ ಕುರಿತು ಮುಖ್ಯಮಂತ್ರಿಗೆ ನಿವೇದಿಸಿದ್ದು, ಪರಿಹಾರ ಪ್ಯಾಕೇಜ್ ನೀಡಿ, ಅಗತ್ಯ ನೆರವಿಗೆ ಬರಬೇಕು ಎಂದು ವಿನಂತಿಸಲಾಗಿದೆ. ಸಂಬಂಧಿಸಿದ ಇಲಾಖೆಗಳೊಂದಿಗೆ ರ್ಚಚಿಸಿ ಆದ್ಯತೆ ಮೇಲೆ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಜೈರಾಜ್ ಹೇಳಿದರು.