ದುರಂತ ಪ್ರೇಮಕಥೆ ಮಾಂಜ್ರಾ

manjra feb 20 2020
Published on

ಬೀದರ್ ಜಿಲ್ಲೆಯಲ್ಲಿರುವ ನದಿಯೊಂದರ ಹೆಸರು ಮಾಂಜ್ರಾ. ಬೆಳಗಾವಿ ಜಿಲ್ಲೆಯಲ್ಲಿ ನಡೆದಂಥ ನೈಜ ಪ್ರೇಮಕಥೆ ಆಧರಿಸಿ ನಿರ್ವಣವಾಗಿರುವ ಚಿತ್ರದ ಹೆಸರೂ ‘ಮಾಂಜ್ರಾ’. ವಿಶೇಷ ಏನೆಂದರೆ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಮೂಲ ವ್ಯಕ್ತಿ ಶಂಕರ್​ನನ್ನು ಚಿತ್ರತಂಡ ಕರೆತಂದಿತ್ತು. ಆತನ ಕೈಯಿಂದಲೇ ಚಿತ್ರದ ಆಡಿಯೋ ಬಿಡುಗಡೆ ಆಯಿತು.

ಕೆಲ ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದಿದ್ದ ಪ್ರೇಮ ಪ್ರಕರಣವನ್ನು ಆಧರಿಸಿ ನಿರ್ದೇಶಕ ಮುತ್ತುರಾಜ್, ‘ಮಾಂಜ್ರಾ’ ಸಿನಿಮಾ ಮಾಡಿದ್ದಾರೆ. ‘ಚಿತ್ರದ ನಾಯಕ ಹಿಂದೂ, ನಾಯಕಿ ಮರಾಠಿಯವಳು. ಇವರಿಬ್ಬರ ದುರಂತ ಪ್ರೇಮಕಥೆಯೇ ಸಿನಿಮಾ. ಕಥೆ ನಡೆದ ಊರಿನಲ್ಲಿ, ಆ ಹುಡುಗಿಯ ಮನೆಯಲ್ಲಿಯೇ ಶೂಟಿಂಗ್ ಮಾಡಿದ್ದೇವೆ. ಇನ್ನುಳಿದಂತೆ ಬೆಳಗಾವಿ, ಕಾರವಾರ, ಕೇರಳ ಮತ್ತು ಗೋವಾದಲ್ಲಿಯೂ ದೃಶ್ಯಗಳು ಸೆರೆಯಾಗಿವೆ. ರಂಜಿತ್ ಸಿಂಗ್ ನಾಯಕನಾಗಿ ನಟಿಸಿದರೆ, ಅಪೂರ್ವ ನಾಯಕಿಯಾಗಿದ್ದಾರೆ. ರಂಜನ್ ಖಳನಾಗಿ ನಟಿಸಿದ್ದು, ರವಿ ಅರ್ಜುನ್ ಪೂಜಾರ್ ನಿರ್ವಪಕರಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿನ್ಮಯ್ ಎಂ. ರಾವ್ ನಾಲ್ಕು ಹಾಡುಗಳನ್ನು ಸಂಯೋಜಿಸಿದ್ದು, ನಾಗೇಂದ್ರ ಪ್ರಸಾದ್, ಜಯಲಕ್ಷ್ಮೀ, ಲಹರಿ ವೇಲು ಅತಿಥಿಗಳಾಗಿ ಆಗಮಿಸಿ ಹಾಡುಗಳನ್ನು ಅನಾವರಣ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net