

ಮೀರಾ ನಾಯರ್ ನಿರ್ದೇಶನದ `ದಿ ಸೂಟಬಲ್ ಬಾಯ್' ಎಂಬ ಚಿತ್ರದಲ್ಲಿ ಟಬು ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊಸದನೇನಲ್ಲ. ಈಗಾಗಲೇ ಕೆಲವು ತಿಂಗಳುಗಳ ಹಿಂದೆಯೇ ಈ ಚಿತ್ರದ ಚಿತ್ರೀಕರಣವಾಗಿತ್ತು. ಈಗ ಆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಅಂದಹಾಗೆ, `ದಿ ಸೂಟಬಲ್ ಬಾಯ್' ಬಿಬಿಸಿ ಒನ್‍ಗಾಗಿ ಸಿದ್ಧವಾಗಿರುವ ಒಂದು ಮಿನಿಸೀರೀಸ್. ಇದೇ ತಿಂಗಳ 26ರಂದು ಈ ಸೀರೀಸ್‍ನ ಮೊದಲ ಕಂತು ಪ್ರಸಾರವಾಗಲಿದ್ದು, ಈ ಸರಣಿಯಲ್ಲಿ ಆರು ಎಪಿಸೋಡುಗಳು ಇರಲಿವೆ ಎನ್ನುವುದು ವಿಶೇಷ.
ಇಂದು ಬಿಡುಗಡೆಯಾಗಿರುವ ಈ ಟ್ರೇಲರ್‍ನಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳಿದ್ದು, ಒಟ್ಟಾರೆ ಈ ಸರಣಿಯಲ್ಲಿ ಟಬು ಮತ್ತು ನಾಯಕ ಇಶಾನ್ ಕಟ್ಟರ್ ನಡುವೆ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳಿವೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅನುಷ್ಕಾ ಶರ್ಮ ಮಾದಕ ಪೋಸ್ಗೆ ವಿರಾಟ್ ಕೊಹ್ಲಿ ಏನಂತಾರೆ?
ಖ್ಯಾತ ಕಾದಂಬರಿಕಾರ ವಿಕ್ರಮ್ ಸೇಠ್ ಅವರ ಅದೇ ಹೆಸರಿನ ಕಾದಂಬರಿಯನ್ನು ಈ ಸೀರೀಸ್ ಆಧರಿಸಿದ್ದು, ಆ್ಯಂಡ್ರೂ ಡೇವಿಸ್ ಅವರು ಚಿತ್ರಕಥೆ ರಚಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಖ್ಯಾತಿಯ ಭಾರತೀಯ ನಿರ್ದೇಶಕಿ ಬಹಳ ವರ್ಷಗಳ ನಂತರ ಈ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. 2019ರ ಸೆಪ್ಟೆಂಬರ್‍ನಲ್ಲಿ ಈ ಕಾರ್ಯಕ್ರಮದ ಚಿತ್ರೀಕರಣವಾಗಿದ್ದು, ಕೆಲವೇ ತಿಂಗಳಲ್ಲಿ ಮುಕ್ತಾಯವಾಗಿದೆ. ಆ ನಂತರ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲಾ ಮುಗಿಸಿರುವ ಸರಣಿ, ಇದೀಗ ಆನ್‍ಏರ್ ಬರುವುದಕ್ಕೆ ಸಜ್ಜಾಗಿದೆ.
`ದಿ ಸೂಟಬಲ್ ಬಾಯ್' ಆಗಿ ಇಶಾನ್ ಕಟ್ಟರ್ ಕಾಣಿಸಿಕೊಂಡಿದ್ದು, ಜತೆಗೆ ಟಬು, ರಸಿಕಾ ದುಗ್ಗಲ್, ತಾನ್ಯಾ, ರಾಮ್ ಕಪೂರ್ ಮುಂತಾದವರು ನಟಿಸಿದ್ದಾರೆ.