

ತಿರುವನಂತಪುರಂ: ದರ್ಶನಾ ರಾಜೇಂದ್ರನ್ ಅವರು ನಟಿಸಿದ್ದು ಕೆಲವೇ ಚಿತ್ರಗಳಾದರು ನಟಿಸಿದರು ಮಲಯಾಳಿಗಳ ನೆಚ್ಚಿನ ನಟಿ ಎನಿಸಿಕೊಂಡಿದ್ದಾರೆ. ಪ್ರಣವ್ ಮೋಹನ್ ಲಾಲ್ ಅಭಿನಯದ ಹೃದಯಂ ಚಿತ್ರದಲ್ಲಿ ದರ್ಶನಾ ರಾಜೇಂದ್ರನ್ ಅವರ ಪಾತ್ರವು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಜಯ ಜಯ ಜಯ ಜಯ ಹೇ ಚಿತ್ರದ ಮೂಲಕ ಮಲಯಾಳಿ ಪ್ರೇಕ್ಷಕರಲ್ಲಿ ದರ್ಶನಾ ಹೆಚ್ಚು ಜನಪ್ರಿಯರಾದರು. ಮಾಯಾನದಿ, ವೈರಸ್, ಪೋರ್ಟ್, ಸೀ ಯು ಸೂನ್, ಡಿಯರ್ ಫ್ರೆಂಡ್ಸ್, ವಿಜಯ್ ಸೂಪರಂ ಪೌರ್ಣಮಿಯಂ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಂದಹಾಗೆ ದರ್ಶನಾ ರಾಜೇಂದ್ರನ್ ಮಲಯಾಳಂನಲ್ಲಿ ಯಾವಾಗಲೂ ವಿಭಿನ್ನ ಪಾತ್ರಗಳೊಂದಿಗೆ ಮಿಂಚುವ ನಟಿ. ಕೇವಲ ಮಲಯಾಳಂಗೆ ಮಾತ್ರ ಸೀಮಿತವಾಗದೇ ಬೇರೆ ಭಾಷೆಗಳಲ್ಲೂ ನಟಿಸುತ್ತಿದ್ದಾರೆ. ದರ್ಶನಾ ಅವರು ನಟಿಸಿರುವ ಪ್ಯಾರಡೈಸ್ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಟ ರೋಷನ್ ಮ್ಯಾಥ್ಯೂಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಲಂಕಾದ ನಿರ್ದೇಶಕ ಪ್ರಸನ್ನ ವಿತಾನಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಭಾಗವಹಿಸಿದ ದರ್ಶನಾ ರಾಜೇಂದ್ರನ್, ಆಶಿಕ್ ಅಬು ನಿರ್ದೇಶನದ ‘ಆನುಂ ಪೆನ್ನುಂ’ ಚಿತ್ರದ ಇಂಟಿಮೇಟ್ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ಆರ್.ದರ್ಶನ್ ಅವರು ಬರೆದಿರುವ ‘ಪೆನ್ನುಂ ಚೆರುಕನುಂ’ ಎಂಬ ಸಣ್ಣ ಕಥೆಯನ್ನಾಧರಿಸಿ ಆಶಿಕ್ ಅಬು ಸಿನಿಮಾ ಮಾಡಿದ್ದಾರೆ. ಸ್ಕ್ರಿಪ್ಟ್‌ನಲ್ಲಿ ಇಂಟಿಮೇಟ್ ದೃಶ್ಯಕ್ಕೆ ಬಟ್ಟೆಯ ಬಗ್ಗೆ ಬರೆದಿಲ್ಲದಿರುವುದಿರಿಂದ ಬಟ್ಟೆ ಬೇಕು ಅಂತಾ ಹೇಳುವುದರಲ್ಲಿ ಅರ್ಥವಿಲ್ಲ. ದೃಶ್ಯಕ್ಕೆ ಏನು ಬೇಕು ಅದನ್ನು ಮಾಡುವುದೇ ನಟಿಯ ಕರ್ತವ್ಯ ಎಂದು ದರ್ಶನಾ ಹೇಳಿದ್ದಾರೆ.
ಆನುಂ ಪೆನ್ನುಂ ಚಿತ್ರದಲ್ಲಿ ನಾನು ಮೊದಲ ಬಾರಿಗೆ ಇಂಟಿಮೇಟ್ ದೃಶ್ಯದಲ್ಲಿ ನಟಿಸಿದ್ದೇನೆ. ಶೂಟ್ ಮಾಡುವುದು ಹೇಗೆ ಎಂದು ನನಗೆ ಹೇಳಿರಲಿಲ್ಲ. ಶಾಟ್ ಸ್ಟೋರಿ ಓದಿ ಆಮೇಲೆ ಕಾಲ್ ಮಾಡು ಎಂದು ಆಶಿಕ್ ನನಗೆ ಹೇಳಿದರು. ಸಣ್ಣ ಕಥೆಯನ್ನು ಓದಿದಾಗ, ಇದು ಒಳ್ಳೆಯ ಕಥೆ ಎಂದು ನಾನು ಭಾವಿಸಿದೆ. ಹೇಗಾದರೂ ಮಾಡಬೇಕು ಅನ್ನಿಸಿತು. ನನಗೆ ಬೇರೆ ಪ್ರಶ್ನೆಗಳೇ ಇರಲಿಲ್ಲ. ನಿರ್ದೇಶಕ ಆಶಿಕ್, ಛಾಯಾಗ್ರಾಹಕ ಶೈಜುಕಾ ಮತ್ತು ನನ್ನ ಸಹ ನಟ ರೋಷನ್ ಮೇಲೆ ನನಗೆ ಅಪಾರ ನಂಬಿಕೆ ಇತ್ತು. ತುಂಬಾ ಸುರಕ್ಷಿತ ಎಂದು ತೋರುವ ಜನರು, ಅದಕ್ಕಾಗಿಯೇ ನನಗೆ ಅಂತಹ ಪ್ರಶ್ನೆಗಳು ಇರಲಿಲ್ಲ. ಆ ಒಂದು ದೃಶ್ಯಕ್ಕೆ ಚಿತ್ರದ ಉಳಿದ ಸೀನ್ಗಳಿಗೆ ಮಾಡಿದ ತಯಾರಿಯನ್ನೇ ಮಾಡಿದೆ ಎಂದು ದರ್ಶನಾ ಹೇಳಿದರು.
ಆ ಇಂಟಿಮೇಟ್ ದೃಶ್ಯವನ್ನು ನಾವು ಕಾಲೇಜಿನಲ್ಲಿ ಕುಳಿತು ಮಾತನಾಡುವ ದೃಶ್ಯವನ್ನು ಹೇಗೆ ಚಿತ್ರೀಕರಿಸಿದ್ದೇವೆಯೋ ಅದೇ ರೀತಿ ಚಿತ್ರೀಕರಿಸಲಾಗಿದೆ. ಇದು ಮಾನವ ಸ್ವಭಾವದ ಭಾಗವಾಗಿದೆ. ಅದೊಂದು ದೊಡ್ಡ ಘಟನೆ ಆಗಬೇಕಿಲ್ಲ. ನನ್ನ ದೇಹ ಮತ್ತು ನನ್ನ ಧ್ವನಿ ಕೇವಲ ನನ್ನ ಸಾಧನಗಳು ಎಂದು ನಾನು ಭಾವಿಸುತ್ತೇನೆ. ನಾಟಕದಿಂದ ನನಗೆ ಆ ಕಲ್ಪನೆ ಸಿಕ್ಕಿತು. ಅದನ್ನು ಯಾವ ರೀತಿಯಲ್ಲಿ ಬಳಸಬಹುದೋ ಅದೇ ರೀತಿ ಬಳಸಿದ್ದೇನೆ ಎಂದು ದರ್ಶನಾ ತಿಳಿಸಿದರು.
ನನ್ನ ಮನಸ್ಸಿನಲ್ಲಿ ಆ ಪಾತ್ರ ಮಾತ್ರ ಇತ್ತು. ಆ ಸಮಯದಲ್ಲಿ ಪಾತ್ರವು ಈ ಸನ್ನಿವೇಶವನ್ನು ಹಾದುಹೋಗುತ್ತದೆ. ಹೀಗಿರುವಾಗ ನನಗೆ ಬಟ್ಟೆ ಬೇಕು ಎಂಬುದು ವಿಚಾರವೇ ಅಲ್ಲ. ಬಟ್ಟೆ ಬೇಕು ಅಂತ ಅನಿಸಲೇ ಇಲ್ಲ. ಏಕೆಂದರೆ, ಆ ದೃಶ್ಯವು ಕೂಡ ಬಟ್ಟೆ ಬೇಡ ಎನ್ನುತ್ತದೆ. ಹೀಗಾಗಿ ಅದರ ಬಗ್ಗೆ ಚರ್ಚೆಯ ಅವಶ್ಯಕತೆಯೇ ಇಲ್ಲ. ಆ ದೃಶ್ಯವು ಕೂಡ ಪ್ರತಿಯೊಂದು ದೃಶ್ಯದಂತೆಯೇ ಇತ್ತು ಎಂದು ದರ್ಶನಾ ಬೋಲ್ಡ್ ಹೇಳಿಕೆ ನೀಡಿದರು. (ಏಜೆನ್ಸೀಸ್)