

ದ ಪ್ಯಾರಡೇಸ್ ಸಿನಿಮಾ ಕಳಪೆ ಎಂದ ಪ್ರೇಕ್ಷಕರು
ಜೆರ್ಸಿಯಂತಹ ಸಿನಿಮಾ ಆಯ್ಕೆ ಮಾಡಿ ದಯವಿಟ್ಟು ಎಂದು ನಾನಿಗೆ ಮನವಿ
ನಾನಿಯ ವೃತ್ತಿಜೀವನದ ಅತ್ಯಂತ ಕಳಪೆ ಸಿನಿಮಾ ಎಂದು ಕೆಲವರಿಂದ ಟೀಕೆ, ಇನ್ನು ಕೆಲವರಿಂದ ಬೆಂಬಲ
ಶ್ರೀ ಕಾಂತ್ ಒಡೆಲಾ ನಿರ್ದೇಶನದ, ರಿಯಲ್ ಸ್ಟಾರ್ ನಾನಿ ಹಾಗೂ ಕಯಾದು ಲೋಹರ್ ಮುಖ್ಯ ಭೂಮಿಕೆಯ ಪ್ಯಾನ್ ಇಂಡಿಯಾ ಆಕ್ಷನ್ ಡ್ರಾಮಾ ಸಿನಿಮಾ ದ ಪ್ಯಾರಡೇಸ್ ಸೆ.24ರಿಂದ ದೇಶದಾದ್ಯಂತ ರಿಲೀಸ್ ಆಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ 'ಎಕ್ಸ್' ನಲ್ಲಿ ಪ್ರೇಕ್ಷಕರಿಂದ ತೀವ್ರ ನೆಗೆಟಿವ್ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನಾನಿಗೆ ಒಳ್ಳೆ ಸ್ಕ್ರಿಪ್ಟ್ ಸೆಲೆಕ್ಟ್ ಮಾಡಲು ತಿಳಿಸಿ, ಅವರ ವೃತ್ತಿ ಜೀವನದಲ್ಲಿ ಇದೊಂದು ಕೆಟ್ಟ ಸಿನಿಮಾ ಎನ್ನುವ ಬೇಡಿಕೆಗಳು ಕೇಳಿಬರುತ್ತಿದೆ.
ಟಾಕ್ಸಿಕ್ ಸಿನಿಮಾವು ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಆದರೆ, ಬೆಳ್ಳಿ ತೆರೆ ಮೇಲೆ ಹಾಗೂ ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಕೊಂಡಿಲ್ಲ. ದೃಶ್ಯಗಳು, ಆಕ್ಷನ್ ಚಿತ್ರೀಕರಂ, ನಯನತಾರಾ ಹಾಗೂ ಯಶ್ ನಟನೆ ಚೆನ್ನಾಗಿದ್ದರೂ ಸಹ, ಸಿನಿಮಾದ ಕತೆ ಕಟ್ಟಿಕೊಡುವಲ್ಲಿ ನಿರ್ದೇಶಕಿ ಗೀತಾ ಮೋಹನ್ ದಾಸ್ ಅವರು ವಿಫಲರಾಗಿದ್ದಾರೆ ಎನ್ನುವ ಅಭಿಪ್ರಾಯ ಕೇಳಿಬಂದಿತ್ತು. ಸದ್ಯ ದ ಪ್ಯಾರಡೇಸ್ಗೂ ಇದೇ ಪ್ರತಿಕ್ರಿಯೆ ಕೇಳಿಬರುತ್ತಿದೆ. ಕೆಲ ಪ್ರೇಕ್ಷಕರು 2-3 ರೇಟಿಂಗ್ ನೀಡುತ್ತಿದ್ದಾರೆ.
ನಾನಿ ನಟನೆಯ ಪ್ಯಾರಡೇಸ್ ಸಿನಿಮಾವು ಅಡ್ವಾನ್ಸ್ ಬುಕ್ಕಿಂಗ್ ಮೂಲಕ 37 ಕೋಟಿಯನ್ನು ಗಳಿಸಿದೆ. ಉತ್ತರ ಅಮೆರಿಕಾದಲ್ಲಿ 10 ಕೋಟಿಯನ್ನು ಬಾಚಿಕೊಂಡಿದೆ. ಇನ್ನು ಒಟಿಟಿ ಪ್ರಸಾರ ಹಕ್ಕನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿದ್ದು, 50 ಕೋಟಿಗೆ ಸಿನಿಮಾ ದಕ್ಕಿಸಿಕೊಂಡಿದೆ. ಒಟ್ಟಾರೆಯಾಗಿ 200 ಕೋಟಿಯವರೆಗೂ ಪ್ರೀ ರಿಲೀಸ್ ಕಲೆಕ್ಷನ್ ಮಾಡಿಕೊಂಡಿದೆ ಈ ಸಿನಿಮಾ.
ಅಯ್ಯಪ್ಪನ್ ಎಂಬುವವರು ಸಿನಿಮಾ ಬಗ್ಗೆ ರಿವ್ಯೂವ್ ಕೊಟ್ಟಿದ್ದು, ಸಂಪೂರ್ಣವಾಗಿ ನಿರಾಶಾದಾಯಕವಾಗಿದೆ. ನಾನಿಯವರೇ ದಯವಿಟ್ಟು 'ಜೆರ್ಸಿ'ಯಂತಹ ಉತ್ತಮ ಕಥೆಗಳನ್ನು ಆಯ್ಕೆಮಾಡಿ. ನೀವು ನಿಮ್ಮ ಸ್ವಂತ ಸಾಮರ್ಥ್ಯವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದು ಬರೆದುಕೊಂಡಿದ್ದಾರೆ.
ವೆಂಕಿ ರಿವ್ಯೂಸ್ ಎಂಬ ಎಕ್ಸ್ ಖಾತೆಯಿಂದ TheParadise ಸಿನಿಮಾಗೆ 1.75/5 ರೇಟಿಂಗ್ ಕೊಟ್ಟಿದ್ದಾರೆ. ಇದೊಂದು ತಾಳ್ಮೆ-ಸಹನೆ ಬೇಡುವ ಸಿನಿಮಾ. ಕೃತಕವಾಗಿ ಮಾಸ್ ಎನಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಆರಂಭ ಆಸಕ್ತಿದಾಯಕವಾಗಿಎ. ಆದರೆ, ಮಧ್ಯಂತರ ಭಾಗ ಮಾತ್ರ ಮೊದಲ ಅರ್ಧದಲ್ಲಿ ಕೆಲಸ ಮಾಡುವ ಅಂಶಗಳಾಗಿವೆ.
ಎರಡನೇ ಭಾಗದ ಬರವಣಿಗೆ ಅರ್ಥಹೀನವಾಗಿದೆ. ನಿರೂಪಣೆಯಲ್ಲಿ ಭಾವನಾತ್ಮಕವೇ ಇಲ್ಲ. ಕಳಪೆ ಎಡಿಟಿಂಗ್, ಅನಿರೀಕ್ಷಿತ ಎಡಿಟಿಂಗ್ ಪ್ರೇಕ್ಷಕರನ್ನು ಗೊಂದಲಕ್ಕೆ ದೂಡುತ್ತದೆ. ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ದುರ್ಬಲವಾಗಿದೆ. ಕಳಪೆ ಸೌಂಡ್ ಮಿಕ್ಸಿಂಗ್ ಹೆವಿ ಸೌಂಡ್ನಿಂದಾಗಿ ಸಂಭಾಷಣೆ ಅರ್ಥವಾಗೋದಿಲ್ಲ. ಒಡೆಲಾ ಅವರು ಬರವಣಿಗೆ ಮತ್ತು ನಿರ್ವಹಣೆಯಲ್ಲಿ ವಿಫಲಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಆಧಿಲ್ ಎಂಬುವವರು ಟ್ವೀಟ್ ಮಾಡಿದ್ದು, ದ ಪ್ಯಾರಡೇಸ್ ಮೊದಲಿನಿಂದ ಕೊನೆಯವರೆಗೆ ಟೀಕೆಗೆ ಗುರಿಯಾಗುವಂತಹ ಸಿನಿಮಾ. ಸಂಪೂರ್ಣವಾಗಿ ಕಳಪೆಯಾಗಿದೆ. ಅಲ್ಲಲ್ಲಿ ಕೃತಕ ನಗು ತರಿಸುವ ದೃಶ್ಯಗಳಿದೆ ಎಂದು ಬರೆದುಕೊಂಡಿದ್ದಾರೆ.
ರಾಜಿ ಎಂಬುವವರು ಹೇಳಿದ್ದು ಹೀಗೆ, ಮೊದಲ 15 ನಿಮಿಷಗಳನ್ನು ಹೊರತುಪಡಿಸಿ, ಇಡೀ ಅರ್ಧಭಾಗವು ಸಂಪೂರ್ಣವಾಗಿ ಕಸದಂತಿತ್ತು. ನಂತರ ಎರಡನೇ ಅರ್ಧವು ಬಂದಾಗ, 'ಲೈಗರ್' ಎಷ್ಟು ಒಳ್ಳೆಯ ಸಿನಿಮಾ ಎನಿಸಿತು!ನಾನಿ ದಯವಿಟ್ಟು ನೀವು ಹಾಯ್ ನಾನಾದಂತಹ ಭಾವನಾತ್ಮಕ ಸಿನಿಮಾಗಳನ್ನು ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ, (ಏಜೆನ್ಸೀಸ್).