ದಿ ಜರ್ನಲಿಸ್ಟ್ ಹೆಸರಿನಲ್ಲಿ ಹೊಸ ಸಿನಿಮಾ: ಹೊಸಬರ ಸಾಹಸಕ್ಕೆ ಬೇಕಿದೆ ಸಿನಿಪ್ರಿಯರ ಬೆಂಬಲ

Journalist
Published on

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ "ದಿ ಜರ್ಲಲಿಸ್ಟ್" ಎಂಬ ಟೈಟಲ್​ನಲ್ಲಿ ಹೊಸ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ. ಹೊಸಬರ ತಂಡವೊಂದು ಸೇರಿಕೊಂಡು ಈ ಸಾಹಸಕ್ಕೆ ಕೈ ಹಾಕಿದ್ದು, ನಾಗತಿಹಳ್ಳಿ ಚಂದ್ರಶೇಖರ್ ಅರು ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಬೆನ್ನು ತಟ್ಟಿದ್ದಾರೆ.

ಪ್ರೊಡಕ್ಷನ್ ಪಿಚ್ಚರ್ ಪ್ಯಾಲೇಸ್ ಹಾಗೂ ಕೋ ಪ್ರೊಡಕ್ಷನ್ ಹೋಂಸ್ಟೀನ್ ಸ್ಟುಡಿಯೋ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಇದನ್ನ ವೇದಾಂತ್ ಹಷ್ ನಿರ್ದೇಶನ ಮಾಡಿದ್ದಾರೆ.

ನಿರ್ಮಾಣದ ಜೊತೆ ನಟನೆಯನ್ನು ಆರ್ಯನ್ ಹರೀಶ್ ಎಂಬುವರು ಮಾಡಿದ್ದು, ನಟಿ ರಂಜಿತಾ ಮೂರ್ತಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸುದ್ದಿ ಮಾಧ್ಯಮಗಳ ಮುಖ್ಯಭಾಗವನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net