

ಹಿರಿಯ ನಟ, ನಿರ್ದೇಶಕ ಮಹೇಶ್ ಮಂಜ್ರೇಕರ್ ಪುತ್ರಿ ಸಾಯಿ ಮಂಜ್ರೇಕರ್ 2019ರಲ್ಲಿ "ದಬಂಗ್ 3' ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅದಾಗಿ ಮೂರು ವರ್ಷಗಳ ಗ್ಯಾಪ್ ನಂತರ 2022ರಲ್ಲಿ "ನಿ' ಚಿತ್ರದ ಮೂಲಕ ಟಾಲಿವುಡ್ಗೆ ಪದಾರ್ಪಣೆ ಮಾಡಿದ್ದ ಸಾಯಿ, ಸದ್ಯ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.
ಈ ವರ್ಷ "ಕುಚ್ ಮೀಠಾ ಹೋ ಜಾಯೇ' ಮತ್ತು "ಔರೋ ಮೇ ಕಹಾ ದಮ್ ಥಾ' ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅವರು, ಸದ್ಯ ತೆಲುಗು ನಟ ನಿಖಿಲ್ ಸಿದ್ಧಾರ್ಥ್ಗೆ ನಾಯಕಿಯಾಗಿ "ದ ಇಂಡಿಯಾ ಹೌಸ್' ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. "ಭೈರವಗೀತಾ' ಖ್ಯಾತಿಯ ರಾಮ್ ವಂಶಿ ಕೃಷ್ಣ ಆ್ಯಕ್ಷನ್-ಕಟ್ ಹೇಳುತ್ತಿರುವ ಐತಿಹಾಸಿಕ ಸಿನಿಮಾ "ದ ಇಂಡಿಯಾ ಹೌಸ್'.
1905ರಲ್ಲಿ ಲಂಡನ್ನಲ್ಲಿ ನಡೆದ ಭಾರತದ ಸ್ವಾತಂತ್ರ್ಯ ಹೋರಾಟದ ಸುತ್ತ ಚಿತ್ರದ ಕಥೆ ಸಾಗುತ್ತದೆ. ಮಂಗಳವಾರ (ಡಿ. 24) 22ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಾಯಿಗೆ ಚಿತ್ರತಂಡ ಪೋಸ್ಟರ್ ಉಡುಗೊರೆ ನೀಡಿದ್ದು, ಅವರಿಲ್ಲಿ ಸತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.