ರಂಗಸ್ಥಳಂನಲ್ಲಿ ಬುದ್ಧಿವಂತನ ಕೈಚಳಕ

upii
Published on

ಬೆಂಗಳೂರು: ಶಿವಮೊಗ್ಗ ಜೈಲಿನ ಆವರಣದಲ್ಲಿದ್ದ ‘ಬುದ್ಧಿವಂತ’ ಚಿಕ್ಕಬಳ್ಳಾಪುರದ ‘ರಂಗಸ್ಥಳಂ’ ಪ್ರದೇಶದಲ್ಲಿ ಸಾಹಸ ನಡೆಸಿದ್ದಾನೆ. ಅಂದರೆ ‘ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್​ನಲ್ಲಿ ಡಾ.ಟಿ.ಆರ್.ಚಂದ್ರಶೇಖರ್ ಅವರ ಅದ್ದೂರಿ ನಿರ್ಮಾಣ ಹಾಗೂ ಜಯರಾಮ್ ಭದ್ರಾವತಿ ನಿರ್ದೇಶನದಲ್ಲಿ ‘ರಿಯಲ್ ಸ್ಟಾರ್’ ಉಪೇಂದ್ರ ಅಭಿನಯಿಸುತ್ತಿರುವ ‘ಬುದ್ಧಿವಂತ 2’ ಚಿತ್ರದ ಶೂಟಿಂಗ್ ಐದು ದಿನಗಳ ಕಾಲ ರಂಗಸ್ಥಳಂ ದೇವಸ್ಥಾನ ಪ್ರದೇಶದಲ್ಲಿ ನಡೆದಿದೆ.

‘ಚಿತ್ರದಲ್ಲಿ ಕ್ಲೈಮ್ಯಾಕ್ಸ್​ಗೂ ಮುನ್ನ ನಡೆಯುವ ಒಂದು ವಿಭಿನ್ನ ಸಾಹಸಮಯ ಸನ್ನಿವೇಶದ ಚಿತ್ರೀಕರಣ ಅಲ್ಲಿ ನಡೆದಿದೆ. ಸುಮಾರು 40 ಸಹ ಕಲಾವಿದರ ಎದುರು ಹೀರೋ ಆಗಿ ಉಪೇಂದ್ರ ಹೊಡೆದಾಡುವ ದೃಶ್ಯಾವಳಿ ಶೂಟಿಂಗ್ ಮಾಡಿಕೊಳ್ಳಲಾಗಿದೆ. ಈ ದೃಶ್ಯದಲ್ಲಿ ಉಪೇಂದ್ರ ವರನಾಗಿ ಕಾಣಿಸಿಕೊಂಡಿದ್ದು, ನಾಯಕಿ ಸೋನಲ್ ಮೊಂತೆರೊ ಹಾಗೂ ಉಗ್ರಂ ಮಂಜು ಮತ್ತಿತರರು ಭಾಗವಹಿಸಿದ್ದಾರೆ’ ಎಂದಿದ್ದಾರೆ ನಿರ್ದೇಶಕ ಜಯರಾಮ್

ಶಿವಮೊಗ್ಗ ಕಾರಾಗೃಹದ ವಿಶೇಷ ಸೆಟ್​ನಲ್ಲಿ ಉಪೇಂದ್ರ ಕೈದಿಯಾಗಿ ಕಾಣಿಸಿಕೊಂಡಿದ್ದ ದೃಶ್ಯಾವಳಿ ಚಿತ್ರೀಕರಣಕ್ಕೆ 13 ದಿನಗಳ ಕಾಲ ಅಲ್ಲಿ ತಂಗಿದ್ದ ಚಿತ್ರತಂಡ, ರಂಗಸ್ಥಳಂಗೆ ಶಿಫ್ಟ್ ಆಗಿ ಮದುವೆ ಮತ್ತಿತರ ದೃಶ್ಯಗಳ ಶೂಟಿಂಗ್ ಐದು ದಿನ ನಡೆಸಿದೆ. ಅದಾಗ್ಯೂ ಇನ್ನು ಶೇ. 50 ಚಿತ್ರೀಕರಣ ಬಾಕಿ ಇದೆ’ ಎಂದು ಅವರು ಮತ್ತಷ್ಟು ಮಾಹಿತಿ ನೀಡಿದರು. ಈಗಾಗಲೇ ವಿಭಿನ್ನವಾಗಿ ಮೂಡಿಬರುತ್ತಿರುವ ಈ ಸಿನಿಮಾ ತಂಡದಿಂದ ಇನ್ನಷ್ಟು ವಿಶೇಷ ಮಾಹಿತಿಗಳು ಸದ್ಯದಲ್ಲೇ ಹೊರಬೀಳಲಿವೆ ಎಂಬ ಸುಳಿವು ನೀಡಿದ್ದಾರೆ ಜಯರಾಮ್ ಸದ್ಯ ಈ ಚಿತ್ರದ ಶೂಟಿಂಗ್ ಮುಗಿಸಿರುವ ಉಪೇಂದ್ರ, ‘ಕಬ್ಜ’ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net