ಹಿಂದೆಂದೂ ಕಾಣದ ಹಾಟ್​ ಲುಕ್​ನಲ್ಲಿ ರಾಶಿ ಖನ್ನಾ: ಜಾಕೆಟ್​ ಸರಿಸಿ ಎದೆಸೀಳು ಪ್ರದರ್ಶನ, ವಿಡಿಯೋ ವೈರಲ್​

Rashi Khanna
Published on

ಹೈದರಾಬಾದ್​: ಬಾಲಿವುಡ್​ನಲ್ಲಿ 2013ರಲ್ಲಿ ತೆರೆಕಂಡ ‘ಮದ್ರಾಸ್ ಕೆಫೆ’ ಚಿತ್ರದೊಂದಿಗೆ ಸಿನಿಮಾ ಕೆರಿಯರ್ ಆರಂಭಿಸಿದ್ದ ರಾಶಿ ಖನ್ನಾ, ಅದಾದ ಮೇಲೆ ದಕ್ಷಿಣದ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡರು. ಈಗಲೂ ತಮಿಳು ಮತ್ತು ತೆಲುಗಿನಲ್ಲಿ ರಾಶಿ ತುಂಬಾ ಬಿಜಿಯಾಗಿದ್ದಾರೆ. ಇದರ ನಡುವೆ ಹಿಂದಿಗೂ ಕಮ್​ ಬ್ಯಾಕ್​ ಮಾಡಿರುವ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಸಿನಿಮಾ ಮಾತ್ರವಲ್ಲದೆ ರಾಶಿ ಖನ್ನಾ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುತ್ತಾರೆ. ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈಬಿಸಿಯೇರಿಸುತ್ತಾರೆ. ಹಾಟ್​ ಅವತಾರದಲ್ಲಿ ರಾಶಿ ಎಂದೂ ಕೂಡ ಹಿಂದೆ ಬಿದ್ದಿಲ್ಲ. ಇದರ ನಡುವೆ ರಾಶಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನಟಿಯ ಬೋಲ್ಡ್​ ಅವತಾರ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಡೆನಿಮ್​ ಡ್ರೆಸ್​ನಲ್ಲಿ ರಾಶಿ ಕಾಣಿಸಿಕೊಂಡಿದ್ದಾರೆ. ಉದ್ದದ ಡೆನಿಮ್​ ಸ್ಕರ್ಟ್​ ಮತ್ತು ಡೆನಿಮ್​ ಜಾಕೆಟ್​ ಧರಿಸಿ ಕ್ಯಾಮೆರಾ ಕಣ್ಣಿಗೆ ಪೋಸ್​​ ನೀಡಿದ್ದಾರೆ. ಈ ವೇಳೆ ಜಾಕೆಟ್​ ಬದಿಗೆ ಸರಿಸಿ ಎದೆ ಸೀಳು ಪ್ರದರ್ಶಿಸುವ ಮೂಲಕ ರಾಶಿ ಖನ್ನಾ, ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದಾರೆ.

artistrybuzz ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ 8 ಗಂಟೆ ಹಿಂದೆಯಷ್ಟೇ ವಿಡಿಯೋ ಪೋಸ್ಟ್​ ಮಾಡಿದ್ದು, ಈವರೆಗೂ 1 ಲಕ್ಷದ 60 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. 9 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಕೆಲವರು ರಾಶಿ ಖನ್ನಾರ ಹಾಟ್​ ಅವತಾರಕ್ಕೆ ಫಿದಾ ಆಗಿದ್ದರೆ, ಇನ್ನು ಕೆಲವರು ರಾಶಿ ತೊಡ್ಡ ಉಡುಗೆ ಭಿಕ್ಷುಕರ ಉಡುಗೆಯಂತಿದೆ ಎಂದು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net