ಬಾಲಿವುಡ್​​ v/s ದಕ್ಷಿಣ ಸಿನಿಮಾ ಅಂದ್ರೇನೆ ನನಗೆ ಕೆಟ್ಟ ಕೋಪ ಬರುತ್ತೆ: ಅಕ್ಷಯ್​ ಕುಮಾರ್​ ಹೀಗಂದಿದ್ದು ಯಾಕೆ ಗೊತ್ತಾ?

Akshya Kumar
Published on

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಬಾಲಿವುಡ್​​ ಚಿತ್ರಗಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್​ ದಕ್ಷಿಣ ಸಿನಿಮಾಗಳನ್ನು ನೋಡಿ ಸಿಡಿಮಿಡಿ ಎನ್ನುತ್ತಿವೆ.

ಇನ್ನು ದಕ್ಷಿಣ ಸಿನಿಮಾಗಳನ್ನು ಪರಿಗಣನೆಗೇ ತೆಗೆದುಕೊಳ್ಳದ ಕಾಲವೂ ಇತ್ತು. ಬಾಲಿವುಡ್​ಗಿಂತಲೂ ಅತ್ಯುತ್ತಮ ಸಿನಿಮಾಗಳನ್ನು ದಕ್ಷಿಣ ಭಾರತದ ಸಿನಿಮಾಗಳು ಹಿಂದೆಯೂ ಮಾಡಿದ್ದು, ಅತ್ಯುತ್ತಮ ನಟರನ್ನು ಬೆಳೆಸಿದೆ. ಸದ್ಯದ ಮಟ್ಟಿಗೆ ದಕ್ಷಿಣ ಭಾರತದ ಸಿನಿಮಾಗಳ ಮಾರುಕಟ್ಟೆ ದೇಶವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳೆಯುತ್ತಿರುವುದು ಬಾಲಿವುಡ್​ಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.

ಈ ನಡುವೆ ಬಾಲಿವುಡ್​​ ಹಾಗೂ ದಕ್ಷಿಣ ಸಿನಿಮಾಗಳೆಂದು ಏಕೆ ಕರೆಯುತ್ತೀರಿ. ಹೀಗೆ ಕರೆದರೆ ನನಗೆ ಕೆಟ್ಟ ಕೋಪ ಬರುತ್ತೆ ಎಂದು ಬಾಲಿವುಡ್​ ನಟ ಅಕ್ಷಯ್​ಕುಮಾರ್​ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಭಾರತದ ಸಿನಿಮಾಗಳೆಂದರೆ ಎಲ್ಲವೂ ಒಂದೇ ಅದರಲ್ಲಿ ಬಾಲಿವುಡ್​​ ಹಾಗೂ ದಕ್ಷಿಣದ್ದೂ ಎಂದು ಏಕೆ ಪರಿಗಣಿಸುತ್ತೀರಿ ಎಂದು ಮಾಧ್ಯಮಗಳ ಪ್ರಶ್ನೆಗೆ ಗರಂ ಆಗಿದ್ದಾರೆ.

ಅಕ್ಷಯ್​ ನಟಿಸುತ್ತಿರುವ ಸಿನಿಮಾ ಜೂನ್​ 3 ರಂದು ತೆರೆಗೆ ಬರುತ್ತಿದ್ದು, ಸಿನಿಮಾ ಪ್ರಮೋಷನ್​ನಲ್ಲಿ ಭಾಗಿಯಾದಾಗ ಪ್ರತ್ರಕರ್ತರ ಪ್ರಶ್ನೆ ಎದುರಾಗಿದೆ. ಇನ್ನು ಈ ಸಿನಿಮಾ ಮೇಲೆ ಅಕ್ಷಯ್​ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದು, ಕೊವಿಡ್​​ ಕಾರಣದಿಂದ ಕ್ವಾರಂಟೈನ್​ನಲ್ಲಿದ್ದರು.ಈಗ ಚೇತರಿಸಿಕೊಂಡಿರುವ ಅವರು ಚಿತ್ರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಉತ್ತರ ಭಾರತ ಇಂಡಸ್ಟ್ರಿ ಹಾಗೂ ಸೌಥ್​ ಇಂಡಸ್ಟ್ರಿ ಎಂದು ವಿಭಜಿಸಿದರೆ ನನಗೆ ಕೋಪವೇ ಬರುತ್ತೆ. ಯಾರಾದರೂ ಡಿವೈಡ್​ ಮಾಡಿ ಮಾತಾಡಿದರೆ ನನಗೆ ಕೋಪವೇ ಬರುತ್ತದೆ.ಬ್ರಿಟೀಷರು ಬಂದು ನಮ್ಮನ್ನು ವಿಭಜಿಸಿದರು, ನಮ್ಮನ್ನು ಆಳಿದರು, ನಾವು ಅವರಿಂದ ಪಾಠವನ್ನು ಕಲಿತಂತೆ ಕಾಣುತ್ತಿಲ್ಲ. ನಮಗೆ ಇನ್ನೂ ಅರ್ಥವಾಗುತ್ತಿಲ್ಲ, ನಾವೆಲ್ಲರೂ ಒಂದೇ ಎಂದು ಭಾವಿಸಿದ ದಿನ ಎಲ್ಲವೂ ಸರಿಯಾಗುತ್ತದೆ ಎಂಬುದು ನನ್ನ ಭಾವನೆ ಎಂದರು.

ನಾನೂ ಕೂಡ ರೀಮೇಕ್​ ಮಾಡುತ್ತೇನೆ. ರಿಮೇಕ್​ ಸಿನಿಮಾಗಳನ್ನು ಏಕೆ ಮಾಡುತ್ತಿದ್ದೇನೆ ಎಂದು ನನ್ನನ್ನು ಪಶ್ನಿಸಲಾಯಿತು. ನಾನೇಕೆ ರಿಮೇಕ್​​ ಮಾಡಬಾರದು ಅದರಲ್ಲಿ ಇರುವ ಸಮಸ್ಯೆ ಏನು? ನನ್ನನ ರೌಡಿ ರಾಥೋಡ್​​ ರೀಮೇಕ್​​ ಸಿನಿಮಾ, ಅದರಿಂದ ಆದ ಸಮಸ್ಯೆ ಆದರೂ ಏನು? ದಕ್ಷಿಣ ಭಾರತದಲ್ಲಿ ಉತ್ತಮ ಸಿನಿಮಾಗಳಿದ್ದರೆ ನಾವು ಅದರ ಹಕ್ಕುಗಳನ್ನು ತೆಗೆದುಕೊಂಡು ಇಲ್ಲಿ ರೀಮೆಕ್​ ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರತಿಭೆಗಳು ಇಲ್ಲ ಎಂದು ಜನರು ಹೇಳುತ್ತಿದ್ದಾರೆ. ಖಂಡಿತವಾಗಿಯೂ ನಮ್ಮಲ್ಲಿ ಪ್ರತಿಭೆಗಳಿದ್ದಾರೆ. ನಗಮೆ ಕಥೆ ಇಷ್ಟವಾದರೆ ಅದನ್ನು ಹಿಂದಿಗೆ ಏಕೆ ರೀಮೆಕ್​ ಮಾಡಬಾರದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net