ತಮನ್ನಾ ಈಗ ಬೌನ್ಸರ್; ಮಧುರ್ ಭಂಡಾರ್​ಕರ್ ಚಿತ್ರಕ್ಕೆ ನಾಯಕಿ

Thamanna
Published on

ತಮನ್ನಾ ಭಾಟಿಯಾ ಈಗ ಟಾಲಿವುಡ್​ಗಿಂತ ಬಾಲಿವುಡ್​ನಲ್ಲೇ ಹೆಚ್ಚು ಬಿಜಿಯಾಗಿದ್ದಾರೆ. ‘ಬೋಲೇ ಚೂಡಿಯಾನ್’ ಮತ್ತು ‘ಪ್ಲಾನ್ ಎ ಪ್ಲಾನ್ ಬಿ’ ಎಂಬ ಎರಡು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿರುವ ತಮನ್ನಾ, ಈಗ ಮೂರನೆಯ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ ’ಬಬ್ಲಿ ಬೌನ್ಸರ್’.

ಹೆಸರೇ ಹೇಳುವಂತೆ ಬಬ್ಲಿ ಎಂಬ ಮಹಿಳಾ ಬೌನ್ಸರ್ ಕುರಿತು ಈ ಚಿತ್ರದ ಕಥೆ ಸಾಗುತ್ತದೆ. ಬೌನ್ಸರ್​ಗಳ ನಗರಿ ಎಂದೇ ಜನಪ್ರಿಯವಾಗಿರುವ ಉತ್ತರ ಭಾರತದ ಅಸೋಲಾ ಫತ್ಹೇಪುರ್​ನಲ್ಲಿ ಚಿತ್ರದ ಕಥೆ ಸಾಗುತ್ತದಂತೆ. ಈ ಚಿತ್ರವನ್ನು ‘ಹೀರೋಯಿನ್’, ‘ಫ್ಯಾಶನ್’, ‘ಪೇಜ್ 3’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಮಧುರ್ ಭಂಡಾರ್​ಕರ್ ಈ ಚಿತ್ರವನ್ನು ನಿರ್ದೇಶಿ ಸುತ್ತಿದ್ದಾರೆ. ‘ಬಬ್ಲಿ ಬೌನ್ಸರ್’ ಆಗುತ್ತಿರುವ ಕುರಿತು ಮಾತನಾಡಿ ರುವ ತಮನ್ನಾ, ‘ಈ ಕಥೆ ಕೇಳುತ್ತಿದ್ದಂತೆಯೇ ಖುಷಿಯಾಗಿ ಒಪ್ಪಿಕೊಂಡೆ.

ಮಹಿಳಾ ಪ್ರಧಾನ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಮಧುರ್ ದೊಡ್ಡ ಹೆಸರು. ಅವರು ಇಂಥದ್ದೊಂದು ಮಜವಾದ ಮತ್ತು ಅಷ್ಟೇ ಶಕ್ತಿಯುತ ಕಥೆಯೊಂದನ್ನು ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳಾ ಬೌನ್ಸರ್ ಒಬ್ಬಳ ಕುರಿತಾಗಿ ಕಥೆ ಸಾಗಲಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಾನು ಮಹಿಳಾ ಬೌನ್ಸರ್​ಗಳ ಧ್ವನಿಯಾಗುತ್ತಿದ್ದೇನೆ ಎನ್ನುವ ಖುಷಿ ಇದೆ’ ಎನ್ನುತ್ತಾರೆ ತಮನ್ನಾ. ಸೌರಭ್ ಶುಕ್ಲಾ, ಅಭಿಷೇಕ್ ಬಜಾಜ್ ಮುಂತಾದವರು ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net