‘ಟಕೀಲಾ’ ಹಿನ್ನೆಲೆ ಸಂಗೀತ ಮುಕ್ತಾಯ. ಮುಂದಿನ ತಿಂಗಳು ಸಿನಿಮಾ ತೆರೆಗೆ

WhatsApp Image 2022-07-18 at 12.52.25 PM
Published on

‘ಜಡ್’, ‘ಹೂಂ ಅಂತೀಯಾ ಊಹೂಂ ಅಂತೀಯಾ’, ‘ಮೀಸೆ ಚಿಗುರಿದಾಗ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಕೆ. ಪ್ರವೀಣ್ ನಾಯಕ್ ಡೈರೆಕ್ಟ್ ಮಾಡುತ್ತಿರುವ ಹೊಸ ಚಿತ್ರ ‘ಟಕೀಲಾ’. ವಿಶೇಷ ಅಂದರೆ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿನ ಕೂಡ ಮಾಡಿದ್ದಾರೆ. ಸದ್ಯ ನಂದಿನಿ ಬಡಾವಣೆಯಲ್ಲಿರುವ ರೇಣು ಸ್ಟುಡಿಯೋದಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಕಾರ್ಯ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ.

ನಟಿ ನಿಖಿತಾ ಸ್ವಾಮಿ
ನಟಿ ನಿಖಿತಾ ಸ್ವಾಮಿ


‘ಟಕೀಲಾ’ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ನಾಯಕನಾಗಿದ್ದು, ಅವರಿಗೆ ನಿಖಿತಾ ಸ್ವಾಮಿ ನಾಯಕಿಯಾಗಿದ್ದಾರೆ. ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್, ಜಯರಾಜ್, ಸುಷ್ಮಿತಾ, ಪ್ರವೀಣ್ ನಾಯಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅವರು ಈ ಹಿಂದೆ ‘ವಿದ್ಯಾರ್ಥಿ’, ‘ಮುನಿಯ’ ಹಾಗೂ ‘ಜನ್ ಧನ್’ ಚಿತ್ರಗಳನ್ನು ನಿರ್ದೇಶಿಸಿದ್ದರು. ಚಿತ್ರಕ್ಕೆ ಪಿಕೆಎಚ್ ದಾಸ್ ಛಾಯಾಗ್ರಹಣ, ಟಾಪ್‌ಸ್ಟಾರ್ ರೇಣು ಸಂಗೀತ, ಗಿರೀಶ್ ಸಂಕಲನ, ಪ್ರಶಾಂತ್ ಕಲಾ ನಿರ್ದೇಶನವಿದೆ. ಉಳಿದಂತೆ ಆರ್. ತ್ಯಾಗರಾಜ್ ಸಹ ನಿರ್ಮಾಪಕರಾಗಿ ಹಾಗೂ ಗಿರೀಶ್ ಕಂಪ್ಲಾಪುರ್ ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರದಲ್ಲಿ ‘ಟಕೀಲಾ’ ಚಿತ್ರೀಕರಣ ನಡೆಸಲಾಗಿದೆ. ಎಲ್ಲವೂ ಅಂದುಕೊಂಡಂತಾದರೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ.

ನಟಿ ನಿಖಿತಾ ಸ್ವಾಮಿ
ನಟಿ ನಿಖಿತಾ ಸ್ವಾಮಿ
ನಟಿ ನಿಖಿತಾ ಸ್ವಾಮಿ
ನಟಿ ನಿಖಿತಾ ಸ್ವಾಮಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net