7.5 ಕೋಟಿ ರೂ. ಕಾರು ಖರೀದಿಸಿದ ಟಾಲಿವುಡ್​ ನಟ ರಾಮಚರಣ್ ತೇಜಾ

1-2-1
Published on

ತೆಲುಗು ನಟ ರಾಮಚರಣ್​ ತೇಜಾ "ಆರ್​ಆರ್​ಆರ್​' ಮೂಲಕ ಪ್ಯಾನ್​ ವರ್ಲ್ಡ್​ ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ "ಆರ್​ಆರ್​ಆರ್​'ನಿಂದಲೇ ಸದ್ದು ಮಾಡುತ್ತಿದ್ದಾರೆ. ಆದರೆ, ಈ "ಆರ್​ಆರ್​ಆರ್​' ಅಂದರೆ "ರೋಲ್ಸ್​ ರಾಯ್ಸ್​ ರಾಮಚರಣ್​' ಎಂದರ್ಥ. ಅದಕ್ಕೆ ಕಾರಣ ಬರೋಬ್ಬರಿ 7.5 ಕೋಟಿ ರೂ. ಮೌಲ್ಯದ ರೋಲ್ಸ್​ ರಾಯ್ಸ್​ ಸ್ಪೆಕ್ಟರ್​ ಇವಿ ಐಶಾರಾಮಿ ಕಾರು ಖರೀದಿಸಿದ್ದಾರೆ ರಾಮ್​. ವಿಶೇಷ ಅಂದರೆ ಇದು ಹೈದರಾಬಾದ್​ನ ಮೊದಲ ಸ್ಪೆಕ್ಟರ್​ ಕಾರು ಎನ್ನಲಾಗಿದೆ.

576 ಬಿಎಚ್​ಪಿ ಸಾಮರ್ಥ್ಯವಿರುವ, 2890 ಕೆಜಿ ತೂಕದ ವಿದ್ಯುತ್​ ಚಾಲಿತ ರೋಲ್ಸ್​ ರಾಯ್ಸ್​ ಸ್ಪೆಕ್ಟರ್​ ಕೇವಲ 4.5 ಸೆಕೆಂಡುಗಳಲ್ಲಿ 0ರಿಂದ 100 ಕಿಲೋಮೀಟರ್​ ವೇಗ ಪಡೆಯಬಲ್ಲದು. ಒಮ್ಮೆ ಚಾರ್ಜ್​ ಮಾಡಿದರೆ 530 ಕಿಲೋಮೀಟರ್​ ದೂರ ಸಾಗುವ ಈ ಕಾರನ್ನು ಕೇವಲ 95 ನಿಮಿಷಗಳಲ್ಲಿ ಚಾರ್ಜ್​ ಮಾಡಬಹುದಾಗಿದೆ. ಇತ್ತೀಚೆಗಷ್ಟೆ ಅನಂತ್​ ಅಂಬಾನಿ & ರಾಧಿಕಾ ಮರ್ಚೆಂಟ್​ ಮದುವೆಯಲ್ಲಿ ಪಾಲ್ಗೊಳ್ಳಲು ಅಹಮದಾಬಾದ್​ಗೆ ಹೊರಟ ರಾಮಚರಣ್​, ಕುಟುಂಬ ಸಮೇತ ಇದೇ ರೋಲ್ಸ್​ ರಾಯ್ಸ್​ ಸ್ಪೆಕ್ಟರ್​ನಲ್ಲಿ ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಇದಲ್ಲದೇ ರಾಮಚರಣ್​ ಬಳಿ ಮರ್ಸಿಡೀಸ್​ ಮೇಬ್ಯಾಕ್​ ಜಿಎಲ್​ಎಸ್​ 600, ಆಷ್ಟನ್​ ಮಾರ್ಟಿನ್​ ವಾಂಟೇಜ್​, ೆರಾರಿ ಪೋರ್ಟೊಫೀನೊ, ಬಿಎಂಡಬ್ಲ್ಯೂ 7 ಸಿರೀಸ್​, ರೇಂಜ್​ ರೋವರ್​, ಮರ್ಸಿಡೀಸ್​ ಬೆಂಜ್​ ಜಿಎಲ್​ಇ ಸೇರಿ ಹಲವು ಕಾರುಗಳಿವೆ. ಸದ್ಯ ಅವರು ಶಂಕರ್​ ನಿರ್ದೇಶಿಸುತ್ತಿರುವ "ಗೇಮ್​ ಚೇಂಜರ್​'ನಲ್ಲಿ ನಟಿಸುತ್ತಿದ್ದು, ಸಿನಿಮಾ ಇದೇ ಸೆಪ್ಟೆಂಬರ್​ನಲ್ಲಿ ರಿಲೀಸ್​ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net