ಇಂದಿನ ಪ್ರೀತಿಯೆಲ್ಲ ಓಯೋ ರೂಮ್​... ನಿರ್ಮಾಪಕ ಅಲ್ಲು ಅರವಿಂದ್​ ಬೋಲ್ಡ್ ಹೇಳಿಕೆ ವೈರಲ್​

ನಿರ್ಮಾಪಕ ಅಲ್ಲು ಅರವಿಂದ್​
ನಿರ್ಮಾಪಕ ಅಲ್ಲು ಅರವಿಂದ್​
Published on

ಪ್ರಮುಖ ಮುಖ್ಯಾಂಶಗಳು

  • 'ದೀವಾನಾ' ಚಿತ್ರದ ಟ್ರೇಲರ್​ ಲಾಂಚ್​ ಈವೆಂಟ್​ನಲ್ಲಿ ಹೇಳಿಕೆ
  • ಇಂದಿನ ಯುವಪೀಳಿಗೆಯ ಪ್ರೇಮಕಥೆಯನ್ನು ತಮ್ಮ ಶೈಲಿಯಲ್ಲಿ ಹೇಳಿದ ಅಲ್ಲು ಅರವಿಂದ್​
ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್​ ನಿರ್ಮಾಪಕ ಹಾಗೂ ಅಲ್ಲು ಅರ್ಜುನ್​ ಅವರ ತಂದೆ ಅಲ್ಲು ಅರವಿಂದ್ ಅವರ ಇತ್ತೀಚಿಗಿನ ಬೋಲ್ಡ್​ ಹೇಳಿಕೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ಗೀತಾ ಆರ್ಟ್ಸ್‌ನ ಮುಖ್ಯಸ್ಥರಾಗಿ ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಅಲ್ಲು ಅರವಿಂದ್​, ಪ್ರಸ್ತುತ ಕಾಲಘಟ್ಟದ ಪ್ರೇಮಿಗಳು ಮತ್ತು ಅವರ ಪ್ರೀತಿ ಕುರಿತಂತೆ ನೀಡಿದ ಬೋಲ್ಡ್ ಕಾಮೆಂಟ್​ಗಳು ವೇದಿಕೆಯಲ್ಲಿದ್ದ ಸಿನಿಮಾ ನಟರು ಮತ್ತು ಇತರರನ್ನು ಒಂದು ನಿಮಿಷ ಗಪ್​ಚುಪ್​ ಮಾಡಿತು.
ಇತ್ತೀಚೆಗಷ್ಟೇ 'ದೀವಾನಾ' ಚಿತ್ರದ ಟ್ರೇಲರ್ ಲಾಂಚ್​ ಈವೆಂಟ್​ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟ ವಿಶ್ವಕ್​ ಸೇನ್​ ಅವರು ಕೇಳಿದ ಕೆಲವು ಪ್ರಶ್ನೆಗಳಿಗೆ ಹಾಸ್ಯಸ್ಪದವಾಗಿ ಉತ್ತರಿಸಿದ ಅಲ್ಲು ಅರವಿಂದ್​, "ಇಂದಿನ ಯುವ ಪ್ರೇಮಿಗಳು ಚಿತ್ರಮಂದಿರಗಳಿಗೆ ಹೋಗ್ತಾರೆ ಆದ್ರೆ, ಸಿನಿಮಾ ನೋಡೋದಿಲ್ಲ. ಯಾರ ಕಣ್ಣಿಗೂ ಬೀಳದಂತೆ ಮೂಲೆಯ ಸೀಟಿನಲ್ಲಿ ಕುಳಿತು ಎಂಜಾಯ್​ ಮಾಡುತ್ತಿರುತ್ತಾರೆ ಎಂದರು.
ಇಷ್ಟೇ ಅಲ್ಲದೇ, ಒಂದೆರಡು ಶಾಪಿಂಗ್ ಮಾಲ್​ ಸುತ್ತಾಡುತ್ತಾರೆ ಮತ್ತು ಅಲ್ಲಿಂದ ನೇರವಾಗಿ ಓಯೋ ರೂಮ್​ಗಳಿಗೆ ಹೋಗಿ ತಮ್ಮ ಪ್ರೇಮಕಥೆಗಳಿಗೆ ದಿ ಎಂಡ್​ ಬರೆಯುತ್ತಾರೆ" ಎಂದು ಬೋಲ್ಡ್​ ಕಾಮೆಂಟ್‌ಗಳನ್ನು ಮಾಡಿದರು. ಹಿರಿಯ ನಿರ್ಮಾಪಕನ ಈ ಹೇಳಿಕೆಗಳು ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net