ನಟಿ ಸುರೇಖಾ ಖಾಸಗಿ ವಿಡಿಯೋ ಲೀಕ್​! ಇನ್​ಸ್ಟಾ ಖಾತೆ ಹ್ಯಾಕ್​ ಬೆನ್ನಲ್ಲೇ ಟ್ರೋಲ್​, ನೆಟ್ಟಿಗರಿಗೆ ಖಡಕ್ ವಾರ್ನಿಂಗ್​ | Surekha Vani

Surekha Vani
ನಟಿ ಸುರೇಖಾ ಖಾಸಗಿ ವಿಡಿಯೋ ಲೀಕ್​! ಇನ್​ಸ್ಟಾ ಖಾತೆ ಹ್ಯಾಕ್​ ಬೆನ್ನಲ್ಲೇ ಟ್ರೋಲ್​, ನೆಟ್ಟಿಗರಿಗೆ ಖಡಕ್ ವಾರ್ನಿಂಗ್​ | Surekha Vani
Published on: 

ಹೈದ್ರಾಬಾದ್​: ತೆಲುಗು ನಟಿ ಸುರೇಖಾ ವಾಣಿ ಅವರ ಖಾಸಗಿ ವಿಡಿಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್​ ಆಗಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿ ದೃಶ್ಯಗಳನ್ನು ಹರಿಬಿಟ್ಟಿದ್ದಾಗಿ ನಟಿ ಅಳಲು ತೋಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದು, ನೆಟ್ಟಿಗರು ಮತ್ತು ಟ್ರೋಲಿಗರಿಗೂ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಖಾಸಗಿ ವಿಡಿಯೋಗಳನ್ನು ಯಾರೋ ಕಿಡಿಗೇಡಿಗಳು ನನ್ನ ಅನುಮತಿಯಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಯಾವುದೇ ಮೀಮ್ ಪೇಜ್​ಗಳು, ಸೋಷಿಯಲ್​ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು, ಯೂಟ್ಯೂಬ್ ಚಾನೆಲ್‌ಗಳು ಅಥವಾ ನೆಟಿಗರು ಈ ವಿಷಯವನ್ನು ರೀ-ಪೋಸ್ಟ್ ಮಾಡಬಾರದು ಅಥವಾ ಎಲ್ಲಿಯೂ ಹಂಚಿಕೊಳ್ಳಬಾರದು. ಈ ವಿಷಯವನ್ನು ವ್ಯೂವ್ಸ್​, ರೀಚ್​ ಮತ್ತು ಪ್ರಚಾರಕ್ಕಾಗಿ ಬಳಸದಂತೆ ಸುರೇಖಾ ಎಚ್ಚರಿಕೆ ನೀಡಿದ್ದಾರೆ.

ನಟಿ ಮತ್ತು ಒಬ್ಬ ಯುವಕನಿಗೆ ಸಂಬಂಧಿಸಿದ ಖಾಸಗಿ ದೃಶ್ಯಗಳು ಅವರದ್ದೇ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹರಿದಾಡಿರುವುದು ಸದ್ಯ ಅನೇಕರಲ್ಲಿ ಅನುಮಾನ, ಗೊಂದಲಗಳನ್ನು ಮೂಡಿಸಿದೆ. ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಸುರೇಖಾ ಮತ್ತು ಯುವಕನ ವಯಸ್ಸಿನ ಅಂತರದ ಬಗ್ಗೆ ವ್ಯಂಗ್ಯವಾಡಿದರೆ, ಇನ್ನೂ ಕೆಲವರು ನಟಿಗೆ ಸೈಬರ್​ ಫ್ರಾಡ್​ ಕುರಿತು ಎಚ್ಚರಿಕೆ ವಹಿಸುವಂತೆ ಸಾಥ್ ನೀಡಿದ್ದಾರೆ.

ಈ ವಿಷಯ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿ, ಟೀಕೆ, ವ್ಯಂಗ್ಯಗಳ ಸುರಿಮಳೆಗಳು ಹರಿದುಬಂದ ಬೆನ್ನಲ್ಲೇ ಎಚ್ಚೆತ್ತ ಸುರೇಖಾ, ಅದೇ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಹಾಕುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನನ್ನ ಅಕೌಂಟ್​ ಅನ್ನು ಹ್ಯಾಕ್ ಮಾಡಲಾಗಿದೆ. ಅನುಮತಿಯಿಲ್ಲದೆ ಖಾಸಗಿ ದೃಶ್ಯಗಳನ್ನು ಶೇರ್​ ಮಾಡಲಾಗಿದೆ. ಇಂತಹ ವಿಡಿಯೋಗಳನ್ನು ಯಾರೊಬ್ಬರೂ ಎಲ್ಲಿಯೂ ಹಂಚಿಕೊಳ್ಳದಂತೆ ಟ್ರೋಲ್​, ಮೀಮ್​ ಪೇಜ್‌ಗಳು, ಮಾಧ್ಯಮಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳಿಗೆ ಮನವಿ ಮಾಡಿದ್ದಾರೆ.

Also Read
ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಪ್ರತಿಭೆ... ಯುವ ಬ್ಯಾಟಿಂಗ್ ಸೆನ್ಸೇಷನ್​ ಹೆಗಲಿಗೆ ದೊಡ್ಡ ಜವಾಬ್ದಾರಿ ಕೊಟ್ಟ ಬಿಸಿಎ! | Vaibhav Sooryavanshi ​
Surekha Vani

ತಮ್ಮ ಗೌಪ್ಯತೆಯನ್ನು ಗೌರವಿಸುವಂತೆಯೂ, ಈ ವಿಷಯವನ್ನು ಹೆಚ್ಚಿನ ವೀಕ್ಷಣೆಗಳು ಮತ್ತು ಪ್ರಚಾರಕ್ಕಾಗಿ ಬಳಸಿಕೊಳ್ಳದಂತೆಯೂ ಸುರೇಖಾ ವಾಣಿ ಮನವಿ ಮಾಡಿಕೊಂಡಿದ್ದಾರೆ. ಇದೊಂದು ಅತ್ಯಂತ ಗಂಭೀರ ವಿಷಯವಾಗಿದ್ದು, ತಮ್ಮ ಖಾಸಗಿ ದೃಶ್ಯಗಳನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದರೆ, ಯಾವುದೇ ಹಿಂಜರಿಕೆಯಿಲ್ಲದೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಖಡಕ್​ ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).