ಚಿರಂಜೀವಿಗೆ ಕರೊನಾ, ಹನಿಮೂನ್​ನಲ್ಲಿ ಕಾಜಲ್; ಸಂಕಷ್ಟದಲ್ಲಿ ‘ಆಚಾರ್ಯ’

1600x960_953742-kajalchiru
Published on

ಹೈದರಾಬಾದ್​: ಬಹುಭಾಷಾ ನಟಿ ಕಾಜಲ್​ ಅಗರ್​ವಾಲ್​ ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಗೌತಮ್​ ಕಿಚ್ಲು ಜತೆಗೆ ಬಾಳಬಂಧನಕ್ಕೆ ಕಾಲಿರಿಸಿದ್ದಾರೆ. ಮುಂಬೈನಲ್ಲಿ ನಡೆದ ಕಲ್ಯಾಣ ಕಾರ್ಯದಲ್ಲಿ ಕುಟುಂಬದ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಿ ನವ ವಧು- ವರರಿಗೆ ಶುಭ ಹಾರೈಸಿದ್ದರು. ಇತ್ತೀಚೆಗಷ್ಟೇ ಇದೇ ಜೋಡಿ ಹನಿಮೂನ್​ಗೆ ಮಾಲ್ಡಿವ್ಸ್​ಗೆ ತೆರಳಿತ್ತು. ಇದೀಗ ಇನ್ನೂ ಹಲವು ದಿನಗಳನ್ನು ಮಾಲ್ಡೀವ್ಸ್​ನಲ್ಲಿಯೇ ಈ ಜೋಡಿ ಕಳೆಯುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಚಿರಂಜೀವಿ!

ಪ್ಲಾನ್​ ಪ್ರಕಾರ ಎಲ್ಲವೂ ಆಗಿದ್ದರೆ, ಇಷ್ಟೊತ್ತಿಗೆ ಆಚಾರ್ಯ ಸಿನಿಮಾ ಶೂಟಿಂಗ್​ನಲ್ಲಿ ಕಾಜಲ್ ಮತ್ತು ಚಿರಂಜೀವಿ ಭಾಗವಹಿಸಬೇಕಿತ್ತು. ಇತ್ತ ಕೆಲ ದಿನಗಳ ಹಿಂದಷ್ಟೇ ಚಿರಂಜೀವಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೂ ಕೊಕ್ಕೆ ಬಿದ್ದಿದೆ. ಹಾಗಾಗಿ ಆಚಾರ್ಯ ಚಿತ್ರಕ್ಕೆ ಒಂದಾದ ಮೇಲೊಂದರಂತೆ ವಿಘ್ನಗಳು ಎದುರಾಗುತ್ತಿವೆ. ಇದನ್ನೆ ನೆಪವಾಗಿಸಿಕೊಂಡು, ಇನ್ನಷ್ಟು ದಿನವನ್ನು ವಿದೇಶದಲ್ಲಿ ಕಳೆಯಲು ಕಾಜಲ್​ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಸದ್ಯದ ಮಾಹಿತಿ ಪ್ರಕಾರ ದೀಪಾವಳಿ ಹಬ್ಬ ಮುಗಿದ ಬಳಿಕವೇ ಕಾಜಲ್ ವಿದೇಶದಿಂದ ಮರಳಲಿದ್ದಾರೆ ಎನ್ನಲಾಗಿತ್ತು. ಇತ್ತ ಕೋವಿಡ್ ಹಿನ್ನೆಲೆಯಲ್ಲಿ ಚಿರಂಜೀವಿ ಹೋಮ್​ ಕ್ವಾರಂಟೈನ್​ ಆಗಿದ್ದಾರೆ. ಇದೆಲ್ಲದರ ನಡುವೆ ಶೂಟಿಂಗ್​ ಮುಂದೆ ಹೋಗಿರುವುದರಿಂದ ಇನ್ನಷ್ಟು ದಿನಗಳ ಕಾಲ ವಿದೇಶದಲ್ಲಿಯೇ ಪತಿ ಜತೆ ಕಾಜಲ್​ ಇರಲಿದ್ದಾರೆ ಎಂದೂ ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net