'ಕೆಜಿಎಫ್​' ಚಿತ್ರತಂಡದಿಂದ ಬಂತು ಕೆಜಿಎಫ್​ ಟೈಮ್ಸ್ ಪತ್ರಿಕೆ

collage (4)
Published on

ಬೆಂಗಳೂರು: ಕೆಜಿಎಫ್​ ಚಾಪ್ಟರ್ 2 ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈಗಾಗಲೇ ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಎರಡನೇ ಭಾಗದ ಮೇಲೆ ಇಡೀ ದೇಶದ ಚಿತ್ರಪ್ರೇಮಿಗಳ ಕಣ್ಣಿದೆ. ಇನ್ನೇನು ಜ. 8ರ ಯಶ್ ಜನ್ಮದಿನಕ್ಕೆ ಟೀಸರ್​ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ವಿಶೇಷ ಪ್ರಚಾರದಲ್ಲಿ ನಿರತವಾಗಿದೆ ತಂಡ.

ಹೌದು, ಕೆಜಿಎಫ್​ ಸಿನಿಮಾ ಟೀಸರ್ ಬಿಡುಗಡೆಯ ಸನಿಹದಲ್ಲಿದೆ. ಯಶ್ ಜನ್ಮದಿನದ ನಿಮಿತ್ತ ಹೊಂಬಾಳೆ ಫಿಲಂಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಅದಕ್ಕಾಗಿಯೇ ಒಂದಷ್ಟು ಪ್ರಚಾರವನ್ನೂ ತಂಡ ಮಾಡಿಕೊಳ್ಳುತ್ತಿದೆ. ಇದೀಗ ಸದ್ದಿಲ್ಲದೆ ಸುದ್ದಿ ಪತ್ರಿಕೆಯನ್ನೇ ಹೊರತಂದಿದೆ ತಂಡ.

ಕೆಜಿಎಫ್​ ಟೈಮ್ಸ್ ಹೆಸರಿನ ಪತ್ರಿಕೆಯೊಂದನ್ನು ಪ್ರಚಾರಕ್ಕೋಸ್ಕರ ಬಳಸಿಕೊಳ್ಳಲಾಗಿದೆ. ಆ ಪತ್ರಿಕೆಯಲ್ಲಿ ಬಾಲಕ ರಾಕಿ, ರಾಕಿ ಭಾಯ್ ಆಗಿ ಬೆಳೆದ ರೀತಿಯನ್ನು ವಿವರಿಸಿದ್ದಾರೆ. ಕೆಜಿಎಫ್​ ಮೊದಲ ಭಾಗದ ಒಂದಷ್ಟು ಫೋಟೋಗಳನ್ನು ಅದರಲ್ಲಿ ಪ್ರಕಟಿಸಿ ಸುದ್ದಿ ರೂಪದಲ್ಲಿ ಅಭಿಮಾನಿಗಳಿಗೆ ನೀಡಿದ್ದಾರೆ. ಎರಡನೇ ಭಾಗದಲ್ಲಿ ಏನಾಗಬಹುದು ಎಂಬುದರ ಬಗ್ಗೆಯೂ ಸುಳಿವು ನೀಡಿದ್ದಾರೆ.

ಒಟ್ಟಿನಲ್ಲಿ ಕೆಜಿಎಫ್​ ಸಿನಿಮಾ ಪ್ರಚಾರ ಕೆಲಸ ಆರಂಭಿಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ಪಾಲಿಗೆ ಇದು ಹಬ್ಬದಂತೆ ಭಾಸವಾಗಿದೆ. ಇನ್ನೇನು ಶೀಘ್ರದಲ್ಲಿ ಸಿನಿಮಾ ಬಿಡುಗಡೆ ಬಗ್ಗೆಯೂ ಚಿತ್ರತಂಡ ಘೋಷಣೆ ಮಾಡಲಿದೆ ಎಂದು ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net