'ತಾಂಡವ್ ರಾಮ್​​​​ ಎಲ್ಲಿದಿಯಪ್ಪಾ?'; ಬಿಗ್​ಬಾಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನೆಟ್ಟಿಗರು..BBK13

ಎಕ್ಸ್​ನಿಂದ ಸಂಗ್ರಹಿಸಿದ ಚಿತ್ರ
ಎಕ್ಸ್​ನಿಂದ ಸಂಗ್ರಹಿಸಿದ ಚಿತ್ರ
Published on: 
  • ಎರಡು ದಿನ ಕಳೆದರೂ ಬಾರದ ತಾಂಡವ್​ ರಾಮ್, ವೀಕ್ಷಕರಿಂದ ಅಸಮಾಧಾನ ವ್ಯಕ್ತ

  • ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಬಂದು, ಟಾಸ್ಕ್​ ಶುರುವಾದ್ರು ತಾಂಡವ್​ ನಾಪತ್ತೆ

  • ಸೀಕ್ರೆಟ್​ ರೂಂನಲ್ಲಿಯಾದರೂ ಇರಿಸಿ, ಯಾಕಿಷ್ಟು ಕಿರಿಕಿರಿ ಮಾಡ್ತಿದ್ದೀರಿ ಎಂದ ನೆಟ್ಟಿಗರು

Bigg Boss Kannada 13: ಸೂಪರ್​ ಸಂಡೇ ವಿತ್​ ಬಾದ್​ ಷಾ ಎಪಿಸೋಡ್​ನಲ್ಲಿ ತಾಂಡವ್​ ಮತ್ತೆ ಬಿಗ್​ಬಾಸ್​ ಮನೆಗೆ ಮರಳುತ್ತಾರೆ ಎನ್ನುವುದು ಕನ್ಫರ್ಮ್​ ಮಾಡಲಾಯಿತು. ಈಗಾಗಲೇ ಮೂವರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟು, ಹವಾ ಕ್ರಿಯೇಟ್ ಮಾಡಿದ್ದಾರೆ. ಆದರೆ, ಎರಡು ದಿನ ಕಳೆದರೂ ಸಹ ತಾಂಡವ್​ ರಾಮ್​ ಇನ್ನು ವಾಪಸ್​ ಬಂದಿಲ್ಲ ಯಾಕೆ. ಅವರನ್ನು ಸೀಕ್ರೆಟ್​ ರೂಮ್​ನಲ್ಲಾದರೂ ಇಡಿ ಎಂದು ಎಕ್ಸ್​, ಜಿಯೋ ಹಾಟ್​ಸ್ಟಾರ್​ ಹಾಗೂ ಇನ್​ಸ್ಟಾ ಮೂಲಕ ಫ್ಯಾನ್ಸ್​ ಬೇಡಿಕೆ ಇಟ್ಟಿದ್ದಾರೆ.

ತಾಂಡವ್​ ಎಲ್ಲಿ

ಗಾನವಿ, ಸೋನಿಕಾ ಗೌಡ ಹಾಗೂ ಕಾಮಿಡಿಯನ್​ ಪ್ರಶಾಂತ್​ ಗೌಡ ಅವರು ಬಿಗ್​ಬಾಸ್​ ಮನೆಗೆ ಕಾಲಿಟ್ಟಿದ್ದಾರೆ. ಒಂದೆಡೆ ಕಂಟೆಸ್ಟೆಂಟ್​ಗಳ ಆಯ್ಕೆ ಸರಿಯಿಲ್ಲ ಎನ್ನುತ್ತಿದ್ದರೆ, ಮತ್ತೊಂದು ಕಡೆ ಮೂವರು ಧೂಳೆಬ್ಬಿಸಿದ್ದಾರೆ ಎನ್ನಲಾಗುತ್ತಿದೆ. ಬಿಗ್​ಬಾಸ್​ ಮನೆಗೆ ಇವರು ಕಾಲಿಡುತ್ತಲೇ ಬದಲಾವಣೆ ಸಿಕ್ಕಿದೆ ಎನ್ನುತ್ತಿದ್ದಾರೆ. ಆದರೆ, ಪ್ರಶಾಂತ್​ ಅವರ ಕಾಮಿಡಿಗೆ ನಗು ಬರ್ತಿಲ್ಲ ಎನ್ನುವುದು ವೀಕ್ಷಕರ ವಾದ. ಇದೆಲ್ಲದರ ಮಧ್ಯೆ ಎಲ್ಲರಲ್ಲಿಯೂ ಮೂಡಿರುವ ಗೊಂದಲ ಎಂದರೆ ತಾಂಡವ್​ ಎಲ್ಲಿ ಎನ್ನುವುದು.

ತಾಂಡವ್​ಗಾಗಿ ಬೇಡಿಕೆ

ಹೌದು ಎಕ್ಸ್​ನಲ್ಲಿ ಜಿಯೋ ಹಾಟ್​ಸ್ಟಾರ್​ ಲೈವ್​ನಲ್ಲಿ, ಇನ್​ಸ್ಟಾಗ್ರಾಮ್​, ಫೇಸ್​ಬುಕ್​ನಲ್ಲಿ ತಾಂಡವ್​ ರೀ ಎಂಟ್ರಿ ಬಗ್ಗೆ ಜನರಲ್ಲಿ ಪ್ರಶ್ನೆಗಳು ಉದ್ಭವಿಸಿದೆ. ನಿನ್ನೆ ಮೂವರ ಜೊತೆಗೆ ತಾಂಡವ್​ ಎಂಟ್ರಿಯಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಕೊನೆಗೆ ನಾಮಿನೇಷನ್ ಮೂಲಕ ಎಪಿಸೋಡ್ ಎಂಡ್​ ಆಗಿತ್ತು. ಇಂದೂ ಸಹ ಮನೆ ಮಂದಿ ಮಧ್ಯೆ ಜಗಳ, ಟಾಸ್ಕ್​ ವಿಚಾರಗಳ ಪ್ರೋಮೋ ಮಾತ್ರ ಬಿಡುಗಡೆ ಮಾಡಲಾಗಿದೆ. ಆದರೆ ತಾಂಡವ್​ ಬಂದಿಲ್ಲ.

ನೆಟ್ಟಿಗರು ಏನಂದ್ರು?

ಈಗಾಗಲೇ ಟಾಸ್ಕ್​ಗಳು ಶುರುವಾಗಿದೆ. ಎರಡು ಟೀಂನಲ್ಲಿ ಏಳು ಮಂದಿ ಸರಿಯಾಗಿದ್ದಾರೆ. ಇನ್ನೂ ತಾಂಡವ್​ ಎಲ್ಲಿಂದ ಟಾಸ್ಕ್ ಆಡಲಾಗುತ್ತದೆ. ಮೋಸ್ಟಲಿ ಅವರು ಈ ವಾರ ಬರೋದಿಲ್ಲ. ಅಥವಾ ಶುಕ್ರವಾರದ ಎಪಿಸೋಡ್​ ಮೂಲಕ ಕಾಣಿಸಿಕೊಳ್ಳಬಹುದು ಎಂದು ಹಲವು ನೆಟ್ಟಿಗರು ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುತ್ತಿದ್ದಾರೆ.

'ಇನ್ನೂ ಕೆಲವರು ತಾಂಡವ್​ ಎಲ್ಲಿದ್ದಾರೆ. ಅದನ್ನು ವೀಕ್ಷಕರಿಗಾದರೂ ತಿಳಿಸಿ. ಇಲ್ಲ ಅವರನ್ನು ಸೀಕ್ರೆಟ್​ ರೂಮಿನಲ್ಲಾದರೂ ಇರಿಸಿ' ಎಂದು ಬಿಗ್​ಬಾಸ್​ಗೆ ಸಲಹೆ ಕೊಟ್ಟಿದ್ದಾರೆ. 'ತಾಂಡವ್ ರೀ ಎಂಟ್ರಿ ವಿಚಾರದಲ್ಲಿ ಬಿಗ್​ಬಾಸ್​ ವಿಳಂಬ ಕಿರಿಕಿರಿ ಮಾಡ್ತಿದೆ' ಎಂದಿದ್ದಾರೆ.

'ಮನೆಯಲ್ಲಿ ಟಾಸ್ಕ್​ ಶುರುವಾಗಿದೆ. ಈ ವಾರ ತಾಂಡವ್​ ಮನೆಗೆ ಎಂಟ್ರಿ ಕೊಡೋದಿಲ್ವಾ. ಬಿಗ್​ಬಾಸ್ ಕನಿಷ್ಠ ನಮಗೆ ತಾಂಡವ್​ ಎಲ್ಲಿದ್ದಾರೆ. ಏನು ಮಾಡುತ್ತಿದ್ದಾರೆ ಎಂದು, ನೀವು ವೀಕ್ಷಕರಿಗೆ ಹೇಳಬಾರದೇ? ಇಲ್ಲಿ ಏನು ನಡೆಯುತ್ತಿದೆ?' ಎಂದು ಅನೋನ್ಯ ಎಂಬುವವರು ಕಾಮೆಂಟ್ ಮಾಡಿದ್ದಾರೆ.

ಟಾಸ್ಕ್​ ಶುರು

ಈ ವಾರದ ಟಾಸ್ಕ್​​ನಲ್ಲಿ ಎರಡು ತಂಡ ಮಾಡಲಾಗಿದೆ. ಒಂದು ಹಸಿರು ಹಾಗೂ ಕೆಂಪು ಬಣ್ಣದ ಟೀಂ. ಪ್ರಶಾಂತ್ ನೇತೃತ್ವದ ರೆಡ್ ಟೀಮ್‌ನಲ್ಲಿ ಕಾವ್ಯ, ಆಸಿಯಾ, ಸಂಗೀತ, ಧನುಷ್ ಮತ್ತು ಜಗದೀಶ್ ಇದ್ದಾರೆ. ಗಾನವಿ ನೇತೃತ್ವದ ಗ್ರೀನ್ ಟೀಮ್‌ನಲ್ಲಿ ಗಗನ್, ಸೋನಿಕಾ, ಯಶಸ್, ಕಿರಣ್ ಶಾಸ್ತ್ರಿ, ಸೌಂದರ್ಯ ಶೆಟ್ಟಿ, ಮಂಜುನಾಥ್ ಮತ್ತು ಲಿಖಿತ್ ಇದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net