ಡಿಜಿಪಿ ಮಗಳು ಸಿನಿಮಾ ನಾಯಕಿ! ಜಯಂ ರವಿಗೆ ಜೋಡಿಯಾಗಿ ಡೆಬ್ಯೂ ಮಾಡುತ್ತಿರುವ ದೌಡೀ ಜಿವಾಲ್​

asdcasdcascs
Published on

ನಿವೃತ್ತಿ ಎಸಿಪಿ ಉಮೇಶ್​ ಕುಮಾರ್​ ಪುತ್ರಿ ಸಪ್ತಮಿ ಗೌಡ, ಇನ್ಸ್​ಪೆಕ್ಟರ್​ ರಾಜೇಶ್​ ಪುತ್ರ ಜಯಸೂರ್ಯ ಸೇರಿ ಕೆಲ ಪೊಲೀಸ್​ ಅಧಿಕಾರಿಗಳ ಮಕ್ಕಳೂ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ದೌಡೀ ಎಸ್​. ಜಿವಾಲ್​. ಇವರು ತಮಿಳುನಾಡು ಡಿಜಿಪಿ ಶಂಕರ್​ ಜಿವಾಲ್​ ಪುತ್ರಿ.

ಕಳೆದ ವರ್ಷ ಖ್ಯಾತ ತಮಿಳು ನಿರ್ದೇಶಕ ಗೌತಮ್​ ವಾಸುದೇವ್​ ಮೆನನ್​ ನಿರ್ದೇಶಿಸಿದ್ದ ಮ್ಯೂಸಿಕ್​ ಆಲ್ಬಂ ಸಾಂಗ್​ನಲ್ಲಿ ನಟಿಸಿದ್ದರು. ಆಗಿನಿಂದಲೂ ಅವರು ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡುವ ಬಗ್ಗೆ ಸುದ್ದಿಯಾಗುತ್ತಿತ್ತು. ದೌಡೀ, ತಮಿಳು ನಟ ಜೀವಾಗೆ ನಾಯಕಿಯಾಗಿ ಚಿತ್ರವೊಂದರಲ್ಲಿ ನಟಿಸುವುದು ಪಕ್ಕಾ ಎನ್ನಲಾಗಿತ್ತಾದರೂ, ಆ ಸಿನಿಮಾ ಸೆಟ್ಟೇರಲಿಲ್ಲ.

ಇದೀಗ ಜಯಂ ರವಿ ನಾಯಕನಾಗಿ ನಟಿಸಲಿರುವ 34ನೇ ಚಿತ್ರಕ್ಕೆ ನಾಯಕಿಯಾಗಿ ಅವರು ಆಯ್ಕೆಯಾಗಿದ್ದಾರೆ. "ದಾದಾ' ಖ್ಯಾತಿಯ ನಿರ್ದೇಶಕ ಗಣೇಶ್​ ಕೆ. ಬಾಬು ಈ ಚಿತ್ರಕ್ಕೆ ಆ್ಯಕ್ಷನ್​&ಕಟ್​ ಹೇಳಲಿದ್ದು, ಇತ್ತೀಚೆಗಷ್ಟೆ ಮುಹೂರ್ತ ನೆರವೇರಿದೆ. &ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net