150 ಕೋಟಿ ರೂ. ಮನೆಯನ್ನು ತಂದೆ-ತಾಯಿಗೆ ಉಡುಗೊರೆಯಾಗಿ ನೀಡಿದ ನಟ ಧನುಷ್!

Dhanush
Published on

ಚೆನ್ನೈ: ಕಾಲಿವುಡ್ ನಟ ಧನುಷ್ ಬರೋಬ್ಬರಿ 150 ಕೋಟಿ ರೂ. ವೆಚ್ಚದಲ್ಲಿ ಹೊಸ ಮನೆಯೊಂದನ್ನು ಕಟ್ಟಿಸಿ, ತಂದೆ-ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಈ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ.

ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿವಾಸ ಇರುವ ಪೋಯಿಸ್ ಗಾರ್ಡನ್​ ಪ್ರದೇಶದಲ್ಲಿ ನಟ ಧನುಷ್ ಐಷಾರಾಮಿ ಮನೆ ನಿರ್ಮಾಣ ಮಾಡಿದ್ದಾರೆ. ಇದೀಗ ಮನೆಯ ಗೃಹಪ್ರವೇಶದ ಫೋಟೋವನ್ನು ನಿರ್ದೇಶಕ ಸುಬ್ರಮಣಿಯಮ್ ಶಿವ ಫೋಟೋಗಳನ್ನು ವೈರಲ್ ಮಾಡಿ, ಹೆತ್ತವರಿಗೆ ಮನೆಯನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಬರೆದುಕೊಂಡಿದ್ದಾರೆ.

ಧನುಷ್ ನಿರ್ಮಾಣ ಮಾಡಿರುವ ನೂತನ ಮನೆಯ ಬಗ್ಗೆ ಸುಬ್ರಹ್ಮಣಿಯನ್ ಟ್ವೀಟ್ ಮಾಡಿ, ನನ್ನ ಸಹೋದರ ಕಟ್ಟಿಸಿರುವ ಮನೆ ದೇವಾಲಯದಂತಿದೆ. ತಂದೆ-ತಾಯಿ ಬದುಕಿರುವಾಗಲೇ ಸ್ವರ್ಗದಲ್ಲಿ ಉಳಿಸುವವರನ್ನು ನೋಡಿದರೆ ಅಂಥವರು ದೇವರಂತೆ ಕಾಣುತ್ತಾರೆ. ಅವರಿಗೆ ಇನ್ನಷ್ಟು ಸಾಧನೆಗಳನ್ನು ಮಾಡಲಿ ಮತ್ತು ಹೆಚ್ಚಿನ ಯಶಸ್ಸನ್ನು ಗಳಿಸಲಿ. ಪಾಲಕರಿಗೆ ಮನೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಇಂದಿನ ಜನಾಂಗಕ್ಕೆ ನೀವು ಮಾದರಿಯಾಗಿದ್ದೀರಿ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net