

| ಹರ್ಷವರ್ಧನ್ ಬ್ಯಾಡನೂರು
ಪರಭಾಷಾ ಸಿನಿಮಾಗಳಿಂದ ಪ್ರಾದೇಶಿಕ ಚಿತ್ರಗಳು ಥಿಯೇಟರ್ ಸಮಸ್ಯೆ ಎದುರಿಸುತ್ತಿವೆ. ಒಟಿಟಿಗಳ ಹಾವಳಿಯಿಂದ ಜನ ಥಿಯೇಟರ್ಗಳಿಗೆ ಬರುತ್ತಿಲ್ಲ. ಸ್ಟಾರ್ ನಟರ ಸಂಭಾವನೆ ಮುಗಿಲು ಮುಟ್ಟಿದೆ... ಬಹುತೇಕ ಎಲ್ಲ ಚಿತ್ರರಂಗಗಳೂ ಎದುರಿಸುತ್ತಿರುವ ಸಮಸ್ಯೆಗಳಿವು. ಇದರಿಂದಾಗಿ ಅತಿಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವವರು ನಿರ್ಮಾಪಕರು. ಈ ನಿಟ್ಟಿನಲ್ಲಿ ಇತ್ತೀಚೆಗಷ್ಟೆ ಸಭೆ ನಡೆಸಿದ ತಮಿಳು ಸಿನಿಮಾ ನಿರ್ಮಾಪಕರ ಸಂ ಕೆಲ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಸ್ಟಾರ್ ಚಿತ್ರಗಳು ಥಿಯೇಟರ್ನಲ್ಲಿ ಬಿಡುಗಡೆಯಾದ ಎಂಟು ವಾರಗಳ ಬಳಿಕ, ಬಿ ಲಿಸ್ಟ್ನ ನಟರ ಚಿತ್ರಗಳು ಆರು ಮತ್ತು ಹೊಸಬರ ಅಥವಾ ಕಡಿಮೆ ಬಜೆಟ್ ಚಿತ್ರಗಳು ಥಿಯೇಟರ್ನಲ್ಲಿ ರಿಲೀಸ್ ಆದ ನಾಲ್ಕು ವಾರಗಳ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಬೇಕು ಎಂದು ತಿಳಿಸಿದೆ.
ಕಡಿಮೆ ಬಜೆಟ್ ಸಿನಿಮಾಗಳು ಥಿಯೇಟರ್ ಸಮಸ್ಯೆ ಎದುರಿಸುತ್ತಿರುವ ನಿಟ್ಟಿನಲ್ಲಿ ಪ್ರತಿವರ್ಷ ಅಂತಹ 250 ಚಿತ್ರಗಳಿಗೆ ಥಿಯೇಟರ್ಗಳನ್ನು ನೀಡಬೇಕು. ಅದರ ಉಸ್ತುವಾರಿಗೆ ಥಿಯೇಟರ್ ಮಾಲೀಕರು ಮತ್ತು ವಿತರಕರ ಸಂದ ಸದಸ್ಯರ ಸಮಿತಿ ರಚಿಸಬೇಕು. ಒಟಿಟಿ ವೇದಿಕೆಗಳು ಇತ್ತೀಚೆಗೆ ಥಿಯೇಟರ್ಗಳಿಗೆ ಕಂಟಕವಾಗಿದ್ದು, ಹೆಚ್ಚು ಒಟಿಟಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಸಿನಿಮಾಗಳನ್ನು ಕಡೆಗಣಿಸಿರುವ ಕಲಾವಿದರು, ನಿರ್ದೇಶಕರು ಮತ್ತು ತಂತ್ರಜ್ಞರ ಜತೆ ಕೆಲಸ ಮಾಡದಂತೆ ಸಿನಿಮಾ ಕಾರ್ಮಿಕರ ಯೂನಿಯನ್ ಬಳಿ ತಮಿಳು ನಿರ್ಮಾಪಕರು ಮನವಿ ಮಾಡಿಕೊಂಡಿದ್ದಾರೆ.
ಕಮಲ್ ಹಾಸನ್, ವಿಜಯ್, ರಜಿನಿಕಾಂತ್ರಂತಹ ಸ್ಟಾರ್ ನಟರು 100 ಕೋಟಿ ರೂ.ಗೂ ಹೆಚ್ಚು ಸಂಭಾವನೆ ಪಡೆಯತ್ತಾರೆ. ಹಾಗೇ ಅಟ್ಲೀ, ಲೋಕೇಶ್ ಕನಗರಾಜ್, ನೆಲ್ಸನ್ ಸೇರಿ ಕೆಲ ನಿರ್ದೇಶಕರು 40ರಿಂದ 60 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ. ಹೀಗಾಗಿ ಒಂದು ಸಿನಿಮಾ ಬಜೆಟ್ 250ರಿಂದ 300 ಕೋಟಿ ರೂ.ದಾಟುತ್ತಿದೆ. ಸಿನಿಮಾ ಲಾಭ ಗಳಿಸಿದರೆ ಓಕೆ, ಇಲ್ಲದಿದ್ದರೆ ನಿರ್ಮಾಪಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಥಿಯೇಟರ್ ಗಳಿಕೆ ಜತೆಗೆ ಒಟಿಟಿ ಮತ್ತು ಟಿವಿ ಹಕ್ಕುಗಳಿಂದಲೂ ಈಗ ಹೆಚ್ಚು ಆದಾಯ ಬರುತ್ತಿಲ್ಲ. ಹೀಗಾಗಿ ಸಂಭಾವನೆ ನೀಡದೇ ಲಾಭ ಹಂಚಿಕೆ ಮಾದರಿ ಅನುಸರಿಸಲು ತಮಿಳು ನಿರ್ಮಾಪಕರು ನಿರ್ಧರಿಸಿದ್ದಾರೆ. ಅರ್ಥಾತ್ ಚಿತ್ರಕ್ಕೆ ಲಾಭವಾಗಲಿ, ನಷ್ಟವಾಗಲಿ ನಿರ್ಮಾಪಕರು, ನಿರ್ದೇಶಕರು ಮತ್ತು ಸ್ಟಾರ್ಗಳು ಸಮನಾಗಿ ಹಂಚಿಕೊಳ್ಳಬೇಕು.
ಅತ್ತ ತಮಿಳು ನಿರ್ಮಾಪಕರು ಸ್ಟಾರ್ ನಟರು, ನಿರ್ದೇಶಕರಿಗೆ ಮೂಗುದಾರ ಹಾಕಲು ಸಿದ್ಧತೆ ನಡೆಸುತ್ತಿರುವುದನ್ನು ತೆಲುಗು ನಿರ್ಮಾಪಕರು ಸ್ವಾಗತಿಸಿದ್ದಾರೆ. ಅಲ್ಲು ಅರ್ಜುನ್, ಪ್ರಭಾಸ್, ಪವನ್ ಕಲ್ಯಾಣ್, ಮಹೇಶ್ ಬಾಬು, ಜೂ. ಎನ್ಟಿಆರ್, ಸುಕುಮಾರ್, ಬೋಯಪಾಟಿ ಶ್ರೀನು ಸೇರಿ ಕೆಲ ನಟರು, ನಿರ್ದೇಶಕರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದು, ಸಿನಿಮಾ ಸೋತಾಗ ತೆಲುಗು ನಿರ್ಮಾಪಕರಿಗೂ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ತಮಿಳು ನಿರ್ಮಾಪಕರ ನಿರ್ಧಾರಗಳನ್ನು ಸ್ವಾಗತಿಸಿರುವ ತೆಲುಗು ನಿರ್ಮಾಪಕರು, ಅವು ಹೇಗೆ ಕಾರ್ಯರೂಪಕ್ಕೆ ಬರುತ್ತವೆ ಎಂಬುದನ್ನು ನೋಡಿಕೊಂಡು, ಮುಂದಿನ ದಿನಗಳಲ್ಲಿ ತೆಲುಗಿನಲ್ಲೂ ಅವನ್ನು ಜಾರಿಗೆ ತರುವ ಸಾಧ್ಯತೆಯಿದೆ.
ಈ ಬಗ್ಗೆ ಕನ್ನಡ ನಿರ್ಮಾಪಕರ ಸಂದ ಅಧ್ಯಕ್ಷ ಉಮೇಶ್ ಬಣಕಾರ್, "ತಮಿಳು ನಿರ್ಮಾಪಕರ ತೀರ್ಮಾನ ಸ್ವಾಗತಾರ್ಹ. ನಿರ್ಮಾಪಕರ ದೂರಿನನ್ವಯ ಸಂ ಈ ತೀರ್ಮಾನಗಳನ್ನು ತೆಗೆದುಕೊಂಡಿದೆ. ಸ್ಟಾರ್ಗಳ ಸಂಭಾವನೆ ಬಗ್ಗೆ ಕನ್ನಡದಲ್ಲೂ ಕೂಗಿದೆ. ಆದರೆ, ತೆರೆಮರೆಯಲ್ಲಿ ಈ ಆರೋಪಗಳು ಕೇಳಿಬಂದಿವೆಯೇ ಹೊರತು, ಅಧಿಕೃತ ದೂರುಗಳು ಬಂದಿಲ್ಲ. ಇನ್ನು ಅಲ್ಲಿನ ಕಲಾವಿದರ ಸಂದವರು ನಿರ್ಮಾಪಕರ ಬೇಡಿಕೆಗಳನ್ನು ಒಪ್ಪುತ್ತಾರಾ ಗೊತ್ತಿಲ್ಲ. ಹಾಗೇನಾದರೂ ತಮಿಳು ನಿರ್ಮಾಪಕರ ಕೈಗೊಂಡಿರುವ ನಿರ್ಧಾರಗಳು ಜಾರಿಯಾದಲ್ಲಿ, ಅದು ಖುಷಿಯ ವಿಚಾರ' ಎನ್ನುತ್ತಾರೆ.