ಅಯ್ಯೋ... ನಟ ಸೂರ್ಯ ತಲೆಗೆ ಪೆಟ್ಟು, ಶೂಟಿಂಗ್​ ಸ್ಥಗಿತ!

Surya (8)
Published on

ಶಿವ ನಿರ್ದೇಶನದ "ಕಂಗುವ' ಚಿತ್ರದ ಶೂಟಿಂಗ್​ ಪೂರ್ಣಗೊಳಿಸಿರುವ ತಮಿಳು ನಟ ಸೂರ್ಯ, ಅದರ ಬೆನ್ನಲ್ಲೇ ಕಾರ್ತಿಕ್​ ಸುಬ್ಬರಾಜ್​ ಆ್ಯಕ್ಷನ್​- ಕಟ್​ ಹೇಳುತ್ತಿರುವ ಹೊಸ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಇದು ಸೂರ್ಯ ನಾಯಕನಾಗಿ ನಟಿಸುತ್ತಿರುವ 44ನೇ ಚಿತ್ರವಾಗಿದ್ದು, ಕಳೆದ ಜು.13ರ ಅವರ ಹುಟ್ಟುಹಬ್ಬದಂದು ಫಸ್ಟ್​ ಲುಕ್​ ಟೀಸರ್​ ರಿಲೀಸ್​ ಮಾಡಲಾಗಿತ್ತು. ಈ ಚಿತ್ರದಲ್ಲಿ ಸೂರ್ಯಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ.

ಕೆಲ ದಿನಗಳಿಂದ ಚಿತ್ರತಂಡ ಊಟಿಯಲ್ಲಿ ಬೀಡುಬಿಟ್ಟಿದ್ದು, ಶುಕ್ರವಾರ ಚಿತ್ರೀಕರಣದ ವೇಳೆ ನಾಯಕ ಸೂರ್ಯ ತಲೆಗೆ ಪೆಟ್ಟು ಬಿದ್ದಿದೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸಣ್ಣ ಪೆಟ್ಟಾಗಿರುವ ಕಾರಣ ಏನೂ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ಕೆಲ ದಿನ ರೆಸ್ಟ್​ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಾತ್ಕಾಲಿಕವಾಗಿ ಚಿತ್ರದ ಶೂಟಿಂಗ್​ ಸ್ಥಗಿತಗೊಳಿಸಲಾಗಿದೆ.

ಇನ್ನು ಸೂರ್ಯ ಮತ್ತು ಶಿವ ಕಾಂಬಿನೇಷನ್​ನ "ಕಂಗುವ' ಇದೇ ಅ. 10ರಂದು ಪ್ಯಾನ್​ ವರ್ಲ್ಡ್​ ರಿಲೀಸ್​ ಆಗಲಿದೆ. ಸದ್ಯ ಆ ಸಿನಿಮಾದ ಪೋಸ್ಟ್​&ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿದ್ದು, ಕೆಲ ದಿನಗಳಲ್ಲೇ ಪ್ರಚಾರ ಪ್ರಾರಂಭಿಸಲು ಚಿತ್ರತಂಡ ಯೋಜಿಸಿದೆ. ಅದಕ್ಕೂ ಮುನ್ನ ಕಾರ್ತಿಕ್​ ಸುಬ್ಬರಾಜ್​ ಚಿತ್ರದ ಎರಡು ಶೆಡ್ಯುಲ್​ ಚಿತ್ರೀಕರಣ ಪೂರ್ಣಗೊಳಿಸಲು ಸೂರ್ಯ ಆಲೋಚನೆ ಮಾಡಿದ್ದರು. ಆದರೆ, ಇದೀಗ ಪೆಟ್ಟಾಗಿರುವ ಕಾರಣ ಅದಕ್ಕೆ ಬ್ರೇಕ್​ ಬಿದ್ದಿದೆ. -ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net