ತಮನ್ನಾ ಮದುವೆಯಂತೆ! ಅಭಿಮಾನಿಗಳಿಗೆ ಹುಡುಗನ ದರ್ಶನ ಮಾಡಿಸಿದ ನಟಿ

tamanna
Published on

ತಮನ್ನಾ ಭಾಟಿಯಾ, ತಮ್ಮ 15ನೇ ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್​ ಡೆಬ್ಯೂ ಮಾಡಿದರು. ಈಗ ಅವರಿಗೆ 32 ವರ್ಷ. ಕಳೆದ 17 ವರ್ಷಗಳ ಕರಿಯರ್​ನಲ್ಲಿ ಕನ್ನಡ, ಹಿಂದಿ, ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಅವರಿಗೆ ಕೈತುಂಬ ಆಫರ್​ಗಳಿವೆ. ಇದರ ನಡುವೆಯೇ ಕೆಲವು ದಿನಗಳಿಂದ ಅವರ ಮದುವೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹಬ್ಬಿತ್ತು. ಅದು ತಮನ್ನಾ ಗಮನಕ್ಕೆ ಬರುವಷ್ಟರಲ್ಲಿ, ರೆಕ್ಕೆಪುಕ್ಕ ಎಲ್ಲಾ ಸೃಷ್ಟಿಯಾಗಿ ಹುಡುಗನ ಬಗ್ಗೆ ಇಲ್ಲಸಲ್ಲದ ಮಾಹಿತಿಯೂ ಸೇರಿಕೊಂಡಿತ್ತು.

ತಮನ್ನಾ ಮದುವೆಯಾಗಲಿರುವ ಹುಡುಗ ಮುಂಬೈ ಮೂಲದವನಂತೆ, ಉದ್ಯಮಿಯಂತೆ, ಆತನೇ ತಮನ್ನಾ ಹಿಂದೆ ಬಿದ್ದು ಒಪ್ಪಿಸಿದ್ದಾನಂತೆ ಅಂತೆಲ್ಲ ಸುದ್ದಿಗಳು ಹಬ್ಬಿದ್ದವು. ಯಾವಾಗ ಇದೆಲ್ಲ ಮಿತಿ ಮೀರುತ್ತಿದೆ ಅಂತನ್ನಿಸಿತೋ, ನಟಿ ತಮನ್ನಾ ಮದುವೆ ರೂಮರ್​ಗೆ ತಮ್ಮದೇ ರೀತಿಯಲ್ಲಿ ಬ್ರೇಕ್​ ಹಾಕಿದ್ದಾರೆ. ತಾವೇ ಶರ್ಟ್​, ಜಾಕೆಟ್​, ಪ್ಯಾಂಟ್​ ಧರಿಸಿ, ಮೀಸೆ ಜತೆಗೆ ಹುಡುಗರಂತೆ ಕೇಶವಿನ್ಯಾಸ ಮಾಡಿಕೊಂಡು ವಿಡಿಯೋ ಮಾಡಿದ್ದಾರೆ. "ಇವರೇ ನೋಡಿ ನಾನು ಮದುವೆಯಾಗಲಿರುವ ಉದ್ಯಮಿ' ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಅವರ ಈ ವಿಡಿಯೋ ವೈರಲ್​ ಆಗಿದ್ದು, ಮದುವೆ ಸುದ್ದಿಗು ಬ್ರೇಕ್​ ಬಿದ್ದಿದೆ.

ಇನ್ನು ಈ ವರ್ಷ ತೆಲುಗಿನ "ಎ್​ 3' ಹಾಗೂ ಹಿಂದಿಯಲ್ಲಿ "ಬಬ್ಲಿ ಬೌನ್ಸರ್​' ಮತ್ತು "ಪ್ಲ್ಯಾನ್​ ಎ ಪ್ಲ್ಯಾನ್​​ ಬಿ' ಚಿತ್ರಗಳಲ್ಲಿ ನಟಿಸಿರುವ ತಮನ್ನಾ, ಸದ್ಯ ಚಿರಂಜೀವಿಗೆ ನಾಯಕಿಯಾಗಿ "ಭೋಲಾ ಶಂಕರ್​' ಚಿತ್ರದಲ್ಲಿ ನಟಿಸುತ್ತಿದ್ದು, ಅದು 2023ರ ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆ. ಜತೆಗೆ ಮತ್ತೊಂದು ತೆಲುಗು ಚಿತ್ರ "ಗುರ್ತುಂದ ಸೀತಕಾಲಂ' ಹಾಗೂ ಹಿಂದಿಯಲ್ಲಿ "ಬೋಲೆ ಚೂಡಿಯಾ' ಮತ್ತು ಮಲಯಾಳಂನಲ್ಲಿ "ಬಾಂದ್ರಾ' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net