

ಓ ದೇವರೆ ಅವಳು ಎಂಥಾ ಹಾಲಿನಂತ ದೇಹ ಹೊಂದಿದ್ದಾಳೆ ಎಂದು ತಮನ್ನಾ ದೇಹದ ಕುರಿತು ಮಾತನಾಡಿದ್ದ ಅನ್ನು ಕಪೂರ್.
ಅನ್ನು ಕಪೂರ್ ವಿವಾದಾತ್ಮಕ ಹೇಳಿಕೆ ವಿರುದ್ಧ ತಮನ್ನಾ ಭಾಟಿಯಾ ಮಾತು.
ನನಗೆ ನನ್ನ ಕೆರಿಯರ್ ಮುಖ್ಯ..ಇಂಥಾ ವಿಚಾರಗಳನ್ನು ಯೋಚಿಸುತ್ತಾ ಭವಿಷ್ಯ ಹಾಳು ಮಾಡಿಕೊಳ್ಳಲ್ಲ.
Tamannaah Reacts To Annu Kapoor: 'ಸೃಜನಶೀಲ ವ್ಯಕ್ತಿಯ ಪ್ರಮುಖ ಕೆಲಸ ಎಂದರೆ ಕೇಳಿಸಿಕೊಳ್ಳುವುದು, ನಾವು ಕೇಳಿಸಿಕೊಂಡು ಯಾವುದು ಬೇಕು ಬೇಡ ಎನ್ನುವ ಫಿಲ್ಟರ್ ಹಾಕಿಕೊಳ್ಳಬೇಕು. ಒಬ್ಬ ಮಹಿಳೆ ಬೇಡದ ವಿಚಾರಕ್ಕೆ ಒತ್ತು ಕೊಡುತ್ತಾ ಹೋದರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಈ ಹಿಂದೆ ಅನ್ನು ಕಪೂರ್ ಅವರು ತಮ್ಮ ದೇಹದ ಕುರಿತು ಕೊಟ್ಟಿದ್ದ ವಿವಾದಾತ್ಮಕ ಹೇಳಿಕೆ ವಿರುದ್ಧ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮಾತನಾಡಿದ್ದು ಹೀಗೆ.
ಖಾಸಗಿ ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ತಮನ್ನಾ ಅವರಿಗೆ ಅನ್ನು ಕಪೂರ್ ಅವರು, ಓ ದೇವರೆ ಅವಳು ಎಂಥಾ ಹಾಲಿನಂತ ದೇಹ ಹೊಂದಿದ್ದಾಳೆ ಎಂದು ಹೇಳಿದ್ದರು, ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದು ಒಬ್ಬ ಮಹಿಳೆ ವಿರುದ್ಧ ಬಳಸುತ್ತಿರುವ ಅಗೌರವದ ಮತ್ತು ಅಸಭ್ಯ ಭಾಷೆ ಎಂದು ಕಿಡಿಕಾರಿದ್ದರು.
ಈ ಬಗ್ಗೆ ತಮನ್ನಾ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಮಾಧಕತೆ ಹೊರಬಂದು ಪ್ರೇಕ್ಷಕರು ತಮ್ಮನ್ನು ಬೇರೆ ರೀತಿಯಲ್ಲಿ ನೋಡಬೇಕೆಂದು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ತಮನ್ನಾ ಉತ್ತರಿಸಿದ್ದು ಹೀಗೆ, ಒಬ್ಬ ಕ್ರಿಯಾಶೀಲ ವ್ಯಕ್ತಿ ಪ್ರತಿಯೊಬ್ಬರ ಮಾತನ್ನು ಕೇಳಿಸಿಕೊಳ್ಳಬೇಕು. ಆ ನಂತರ ಅವುಗಳಲ್ಲಿ ಯಾವುದು ಬೇಕು ಅದನ್ನು ಮಾತ್ರ ಫಿಲ್ಟರ್ ಮಾಡಿಕೊಳ್ಳುವುದು ಅಗತ್ಯ ನೀವೂ ಒಬ್ಬ ಮಹಿಳೆಯಾಗಿರುವುದರಿಂದ, ನಾವು ಇಂತಹ ವಿಷಯಗಳಿಗೆ ಹೆಚ್ಚು ಮಹತ್ವ ಕೊಡುತ್ತಾ ಹೋದರೆ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಿಲ್ಲ ಎಂದು ತಮ್ಮ ಪ್ರಶ್ನೆಗೆ ಉತ್ತರಿಸುತ್ತಾ...ಸಲಹೆ ಕೊಟ್ಟರು ನಟಿ ತಮನ್ನಾ ಭಾಟಿಯಾ.
ಹೀಗಾಗಿ ಇಂತಹ ವಿಚಾರದ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ, ನಾನು ನನ್ನ ಕೆಲಸದ ಮೇಲೆ ಮಾತ್ರ ಫೋಕಸ್ ಮಾಡುತ್ತೇನೆ. ನಾನು ಏನನ್ನು ಮಾಡಲು ಬಯಸುತ್ತೇನೆಯೋ ಅದರತ್ತ ಮತ್ತು ನಟನೆಯ ವೃತ್ತಿ ಜೀವನದ ಮೇಲೆ ಗಮನಹರಿಸುತ್ತೇನೆ ಎಂದರು.
ಹಿರಿಯ ನಟ ಅನ್ನು ಕಪೂರ್ ಅವರು ಕಳೆದ ವರ್ಷ ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಸಂದರ್ಶನ ಕೊಟ್ಟಿದ್ದರು. ಈ ವೇಳೆ ಆಜ್ ಕಿ ರಾತ್ ಹಾಡನ್ನು ತಮನ್ನಾ ಮೆಚ್ಚಿಕೊಂಡ ಬಗ್ಗೆ ಹಾಗೂ ಮಕ್ಕಳು ಆ ಹಾಡನ್ನು ಕೇಳುತ್ತಾ ನಿದ್ರಿಸುವ ಬಗ್ಗೆ ಮಾತನಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅನ್ನು ಕಪೂರ್, ಮಾಶಾ ಅಲ್ಲಾಹ್ ಅವಳದ್ದು ಎಷ್ಟು ಹಾಲಿನಂತಹ ಮೈಕಟ್ಟು ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದರು. ನಮ್ಮ ಸಹೋದರಿಯು ತಮ್ಮ ಹಾಡಿನಿಂದ, ತಮ್ಮ ಮೈಕಟ್ಟಿನಿಂದ, ತಮ್ಮ ಹಾಲಿನಂತಹ ಮುಖದಿಂದ ನಮ್ಮ ಮಕ್ಕಳನ್ನು ಮಲಗಿಸುತ್ತಾರೆ.ಇದು ತುಂಬಾ ಒಳ್ಳೆಯ ವಿಷಯ.. ನಮ್ಮ ದೇಶದ ಮಕ್ಕಳು ಒಳ್ಳೆಯ ಮತ್ತು ಆರೋಗ್ಯಕರ ನಿದ್ದೆ ಮಾಡಿದರೆ ಒಳ್ಳೆಯದು ಎಂದಿದ್ದರು. ಜೊತೆಗೆ ಭಗವಂತ ಅವರಿಗೆ ಆಶೀರ್ವದಿಸಲಿ ಎಂದು ಲೇವಡಿ ಮಾಡಿದ್ದರು. ಇದರಿಂದ ನೆಟ್ಟಿಗರು ಕಿಡಿಕಾರಿದ್ದರು, (ಏಜೆನ್ಸೀಸ್).