

ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ‘ತಲೈವಿ’ ಸಿನಿಮಾ ಗಣೇಶ ಹಬ್ಬದ ಪ್ರಯುಕ್ತ ಶುಕ್ರವಾರ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಹೀಗಿರುವಾಗ ದಕ್ಷಿಣ ಭಾರತದ ಕೆಲ ಸಿನಿಮಾ ನಟಿಯರಿಗೆ ಚಿತ್ರತಂಡದಿಂದ ವಿಶೇಷ ಉಡುಗೊರೆ ರವಾನೆಯಾಗಿದೆ. ಆ ಉಡುಗೊರೆ ಏನಿರಬಹುದು? ತಮಿಳುನಾಡಿನ ಕಾಂಚೀವರಂ ಸೀರೆ. ಚಂದನವನದ ನಟಿ ರಚಿತಾ ರಾಮ್ೂ ‘ತಲೈವಿ’ ತಂಡದಿಂದ ಕಾಂಚೀವರಂ ಸೀರೆ ಮನೆ ತಲುಪಿದೆ.
ಆ ಉಡುಗೊರೆ ಕೈ ಸೇರುತ್ತಿದ್ದಂತೆ ಸಂಭ್ರಮದಲ್ಲಿಯೇ ನಲಿದಾಡಿದ್ದಾರೆ ರಚಿತಾ. ಆ ಉಡುಗೊರೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, ‘‘ತಲೈವಿ’ ಸಿನಿಮಾ ತಂಡದಿಂದ ಕಾಂಚೀವರಂ ಸೀರೆ ಗಿಫ್ಟ್ ರೂಪದಲ್ಲಿ ಸಿಕ್ಕಿದೆ. ವಿಷ್ಣು ಇಂದುರಿ ಮತ್ತು ಬೃಂದಾ ಪ್ರಸಾದ್ ಅವರಿಗೆ ಧನ್ಯವಾದ. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್’ ಎಂದಿದ್ದಾರೆ. ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿಗೂ ಕಾಂಚೀವರಂ ಸೀರೆ ತಲುಪಿದೆ.