'ಮಹಂತಿ ಝಾನ್ಸಿ ರಾಣಿ'ಯಾಗಿ ಟಬು ಅಬ್ಬರ; ನಾಗಾರ್ಜುನರ 'ಕಿಂಗ್ 100' ಸಿನಿಮಾದ ಖಡಕ್ ಲುಕ್ ರಿವೀಲ್​​

'ಮಹಂತಿ ಝಾನ್ಸಿ ರಾಣಿ'ಯಾಗಿ ಟಬು ಅಬ್ಬರ; ನಾಗಾರ್ಜುನರ 'ಕಿಂಗ್ 100' ಸಿನಿಮಾದ ಖಡಕ್ ಲುಕ್ ರಿವೀಲ್​​
Published on: 
  • ಮೇಡ್​ ಇನ್ ಕೊರಿಯಾ ಖ್ಯಾತಿಯ ನಿರ್ದೇಶಕ ರ.ಕಾರ್ತಿಕ್​ ಕಿಂಗ್ 100 ಸಿನಿಮಾ.

  • 'ಕಿಂಗ್ 100' ಸಿನಿಮಾದಲ್ಲಿ ನಾಗಾರ್ಜುನ್​​, ಟಬು ಮುಖ್ಯ ಭೂಮಿಕೆಯಲ್ಲಿ ನಟನೆ.

  • 'ಈ ಬಾರಿ ಇದು ಪ್ರೇಮವಲ್ಲ' ಎಂಬ ವಾಕ್ಯದೊಂದಿಗೆ ಪ್ರಭಾವಶಾಲಿಯಾಗಿ ಟಬು ಎಂಟ್ರಿ.

Tabu first glimpse from King 100: ಆಕಾಶಂ, ಮೇಡ್​ ಇನ್ ಕೊರಿಯಾ ಖ್ಯಾತಿಯ ನಿರ್ದೇಶಕ ರ.ಕಾರ್ತಿಕ್​ ಆಕ್ಷನ್​ ಕಟ್ ಹೇಳುತ್ತಿರುವ ನಾಗಾರ್ಜುನ ಅವರ ಮಹತ್ವಾಕಾಂಕ್ಷೆಯ 100ನೇ ಚಿತ್ರವಾದ 'ಕಿಂಗ್ 100' ಸಿನಿಮಾದಲ್ಲಿ ಟಬು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ 55ನೇ ಹುಟ್ಟು ಹಬ್ಬಕ್ಕೆ ಫಸ್ಟ್ ಗ್ಲಿಂಪ್ಸ್ ರಿವೀಲ್ ಮಾಡಲಾಗಿದ್ದು, ಮಹಂತಿ ಝಾನ್ಸಿ ರಾಣಿಯಾಗಿ ಮಿಂಚಿದ್ದಾರೆ.

ಅನ್ನಪೂರ್ಣ ಸ್ಟುಡಿಯೋಸ್ ನಿರ್ಮಾಣದ 'ಕಿಂಗ್ 100' ಸಿನಿಮಾದಲ್ಲಿ ನಾಗರ್ಜುನ್​ ಅಕ್ಕಿನೇನಿ, ಟಬು, ಅಶೋಕ್​ ರಾಜೇಶ್​, ಐಶ್ವರ್ಯಾ ರಾಜೇಶ್, ಸುಶ್ಮಿತಾ ಭಟ್​ ನಟಿಸುತ್ತಿದ್ದಾರೆ. ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್​ ಅವರ ಸಂಗೀತ ಸಂಯೋಜನೆ ಇದೆ. ನವೀನ್ ನೂಲಿ ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ.

ಝಾನ್ಸಿ ರಾಣಿ ಟಬು

'ಕಿಂಗ್ 100' ಸಿನಿಮಾದಲ್ಲಿ ಟಬು ಮಹಂತಿ ಝಾನ್ಸಿ ರಾಣಿಯಾಗಿ ಮಿಂಚಿದ್ದಾರೆ. ನನಗೆ ಲಕ್​​ ಎಂದರೆ ಇಷ್ಟವಾಗೋದಿಲ್ಲ. ಇದು ಪ್ರೀತಿ ಮಾಡುವ ಸಮಯವಲ್ಲ ಎಂದು ಪ್ರಭಾವಶಾಲಿ ​​ ಆಗಿ ಕಾಣಿಸಿಕೊಂಡಿದ್ದಾರೆ. ಕೆಂಪು ಸೀರೆಯಲ್ಲಿ ಅವರ ಗತ್ತು ಹಾಗೂ ಕೈಯಲ್ಲಿ ಬಳೆಗಳನ್ನು ಧರಿಸಿ 'ಯುದ್ಧವು ಪ್ರಾರಂಭವಾಗಿದೆ' ಎಂದು ಸೂಚಿಸುವ ಪೋಸ್ಟರ್ ಭಾರೀ ಕುತೂಹಲ ಮೂಡಿಸಿದೆ.

ಸಿನಿಮಾವು ತಂದೆ-ಮಗಳು ಭಾವನೆಗಳು, ಎಲೆಕ್ಷನ್​ ಬಿಸಿ..ರಾಜಕಾರಣಿಗಳ ಓಡಾಟದ ಸುತ್ತ ಕತೆಯನ್ನು ರ ಕಾರ್ತಿಕ್​ ಹೆಣೆದಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವು 2026 ಡಿಸೆಂಬರ್ 24ರಂದು ತೆರೆಗೆ ಬರಲು ಸಜ್ಜಾಗಿದೆ. ಟಬು ಅವರ ಮೊದಲ ಗ್ಲಿಂಪ್ಸ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಸಿನಿಮಾ ರಿಲೀಸ್​​ಗಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

ಎರಡನೇ ಬಾರಿಗೆ ಒಟ್ಟಾದ ಜೋಡಿ

ನಿನ್ನೆ ಪೆಳ್ಳಾಡುತ ಸಿನಿಮಾದಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದ ನಾಗಾರ್ಜುನ ಮತ್ತು ಟಬು ಜೋಡಿ, ಈ ಬಾರಿ ಪ್ರೇಮಕಥೆಯ ಬದಲಿಗೆ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಈ ಬಾರಿ ಇದು ಪ್ರೇಮವಲ್ಲ ಎಂಬ ಸಾಲು ವಿಶೇಷವಾಗಿ ಗಮನ ಸೆಳೆದಿದೆ.

ನಿನ್ನೇ ಪೆಳ್ಳಾಡತಾ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ ಜೊತೆ ಟಬು ನಟಿಸಿದ್ದರು. ಮಹಾಲಕ್ಷ್ಮಿ' ಪಾತ್ರ ಮತ್ತು ನಾಗಾರ್ಜುನ-ಟಬು ಕೆಮಿಸ್ಟ್ರಿ ಇಂದಿಗೂ ಎವರ್‌ಗ್ರೀನ್. ಈ ಚಿತ್ರಕ್ಕಾಗಿ ಅವರಿಗೆ 'ಫಿಲ್ಮ್‌ಫೇರ್ ಅತ್ಯುತ್ತಮ ನಟಿ' ಪ್ರಶಸ್ತಿ ಲಭಿಸಿತು

ಹುಟ್ಟುಹಬ್ಬಕ್ಕೆ ನಾಗಾರ್ಜುನ್ ವಿಶಸ್

ಹುಟ್ಟುಹಬ್ಬದ ಶುಭಾಶಯಗಳು ಟಬು. ನಿಮ್ಮ ನಿನ್ನೇ ಪೆಳ್ಳಾಡುತ, ಪಂಡು ಸಿನಿಮಾವನ್ನು ಟಾಲಿವುಡ್ ಇನ್ನು ಮರೆತಿಲ್ಲ. ಈಗ ಮತ್ತೆ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲು ಮಹಂತಿ ಝಾನ್ಸಿ ರಾಣಿಯಾಗಿ ಬರುತ್ತಿದ್ದೀರಿ ಎಂದು ನಟ ನಾಗಾರ್ಜುನ್ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).