ಏಪ್ರಿಲ್​ನಲ್ಲಿ ತಾಪ್ಸೀ ರಾಕೆಟ್

thapio rocket
Published on

ಬಾಲಿವುಡ್ ಬೆಡಗಿ ತಾಪ್ಸೀ ಪನ್ನು ‘ರಶ್ಮಿ ರಾಕೆಟ್’ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಈಗಾಗಲೇ ಸುದ್ದಿಯಾಗಿತ್ತು. ಆ ಚಿತ್ರದ ಶೂಟಿಂಗ್​ನಲ್ಲಿ ಯಾವತ್ತಿನಿಂದ ತೊಡಗಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಅಭಿಮಾನಿಗಳಿದ್ದ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ. ಅಂದರೆ ಮಾ. 26ರಂದು ‘ರಶ್ಮಿ ರಾಕೆಟ್’ ಲಾಂಚ್ ಆಗಲಿದೆ. ಅರ್ಥಾತ್, ಅಂದು ಆ ಚಿತ್ರ ಸೆಟ್ಟೇರಲಿದೆ.

‘ರಶ್ಮಿ ರಾಕೆಟ್’ ಸತ್ಯಕಥೆ ಆಧಾರಿತ ಚಿತ್ರ. ವೇಗದ ಓಟಗಾರ್ತಿ ಎನಿಸಿಕೊಂಡಿರುವ ಹಳ್ಳಿಹುಡುಗಿಯ ಜೀವನವೇ ಈ ಚಿತ್ರದ ಕಥಾಹಂದರ. ಆಕೆಯನ್ನು ಹಳ್ಳಿಯವರು ಹೆಮ್ಮೆಯಿಂದ ರಾಕೆಟ್ ಎಂದು ಕರೆಯುತ್ತಿರುತ್ತಾರೆ. ಆಕೆಗೆ ತನ್ನಲ್ಲಿರುವ ಓಟದ ಶಕ್ತಿಯನ್ನು ವೃತ್ತಿಪರವಾಗಿ ತೋರಿಸುವ ಅವಕಾಶ ಸಿಕ್ಕಾಗ ಏನೇನಾಗುತ್ತದೆ ಎಂಬುದರ ಚಿತ್ರಣವೇ ಈ ‘ರಶ್ಮಿ ರಾಕೆಟ್’.

‘ಈ ಪಾತ್ರಕ್ಕಾಗಿ ಈಗಾಗಲೇ ತರಬೇತಿಯಲ್ಲಿರುವ ತಾಪ್ಸೀ ಸಾಕಷ್ಟು ತಯಾರಿ ನಡೆಸಿದ್ದಾರೆ. ಏಪ್ರಿಲ್​ನಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್ ಆರಂಭವಾಗಲಿದೆ. ರಣ್ ಆಫ್ ಕಛ್​ನಲ್ಲಿ ಹಾಡಿನ ಚಿತ್ರೀಕರಣದೊಂದಿಗೆ ಶೆಡ್ಯೂಲ್ ಶುರುವಾಗಲಿದೆ. ಬಳಿಕ ಮೇನಲ್ಲಿ ದೆಹಲಿ ಹಾಗೂ ಡೆಹ್ರಾಡೂನ್, ಜೂನ್​ನಲ್ಲಿ ಮಿಸೌರಿಯಲ್ಲಿ ಶೂಟಿಂಗ್ ನಡೆಯಲಿದೆ’ ಎಂಬ ಮಾಹಿತಿ ಹೊರಹಾಕಿದ್ದಾರೆ ನಿರ್ದೇಶಕ ಆಕಾಶ್ ಖುರಾನಾ. ರೋನಿ ಸ್ಕ್ರಿವ್ವಾಲಾ , ನೇಹಾ ಆನಂದ್ ಹಾಗೂ ಪ್ರಾಂಜನ್ ಖಂಡ್ದಿಯಾ ಜತೆಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅನಿರುದ್ಧ್ ಗುಹ ಅವರ ಚಿತ್ರಕಥೆ ಈ ಚಿತ್ರಕ್ಕಿದ್ದು, ಇದು ಮುಂದಿನ ವರ್ಷ ತೆರೆ ಕಾಣಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net