ಮತ್ತೆ ಮನ್ವಂತರದೊಂದಿಗೆ ಟಿ.ಎನ್. ಸೀತಾರಾಂ

TNS
Published on

ಬೆಂಗಳೂರು: ತಾವೊಂದು ಹೊಸ ಧಾರಾವಾಹಿ ನಿರ್ದೇಶಿಸುತ್ತಿದ್ದು, ಅದಕ್ಕೆ ಸೂಕ್ತ ಹೆಸರು ಸೂಚಿಸಿ ಎಂದು ಹಿರಿಯ ನಟ-ನಿರ್ದೇಶಕ ಟಿ.ಎನ್. ಸೀತಾರಾಂ ಇತ್ತೀಚೆಗಷ್ಟೇ ಫೇಸ್​ಬುಕ್​ನಲ್ಲಿ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಹಲವರು ಹಲವು ಹೆಸರುಗಳನ್ನು ಸೂಚಿಸಿದ್ದರು. ಇದೀಗ ಅವರು, ಕಲರ್ಸ್ ಕನ್ನಡದಲ್ಲಿ ಮುಂದಿನ ತಿಂಗಳಿನಿಂದ ಪ್ರಾರಂಭವಾಗುತ್ತಿರುವ ತಮ್ಮ ಹೊಸ ಧಾರಾವಾಹಿಗೆ ‘ಮತ್ತೆ ಮನ್ವಂತರ’ ಎಂದು ನಾಮಕರಣ ಮಾಡಿದ್ದಾರೆ.

ಈ ಧಾರಾವಾಹಿ ನಾಯಕಿಯಾಗಿ ಹಿರಣ್ಮಯಿ ಅವರನ್ನು ಪರಿಚಯಿಸುತ್ತಿದ್ದಾರೆ ಸೀತಾರಾಂ. ಹಿರಣ್ಮಯಿ, ಹಿರಿಯ ಗಾಯಕ ವಿದ್ಯಾಭೂಷಣರ ಮಗಳು. ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹಿರಣ್ಮಯಿ, ರಂಗಭೂಮಿಯಲ್ಲೂ ಸಕ್ರಿಯರಾಗಿದ್ದಾರೆ. ಜತೆಗೆ ಮಾಳವಿಕಾ, ಜಯಶ್ರೀ ರಾಜ್ ಮುಂತಾದವರು ನಟಿಸುತ್ತಿದ್ದು, ಸೀತಾರಾಂ ಅವರು ಸಿಎಸ್​ಪಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net