

ಬೆಂಗಳೂರು: ಕರೊನಾ ಲಾಕ್ಡೌನ್ನಿಂದ ಓವರ್ ದಿ ಟಾಪ್ಗೆ (ಓಟಿಟಿ) ಸಾಕಷ್ಟು ಬೇಡಿಕೆ ಬಂದಿದೆ..ಸಾಲು ಸಾಲು ಸಿನಿಮಾಗಳು ಮತ್ತು ವೆಬ್ಸಿರೀಸ್ಗಳು ಅನೇಕ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಇದೀಗ ಕನ್ನಡದಲ್ಲಿಯೇ ಇನ್ನೊಂದು ಹೊಸ ವೆಬ್ಸಿರೀಸ್ ಸೆಟ್ಟೇರಿದ್ದು, ಓಟಿಟಿಗಾಗಿಯೇ ತಯಾರಾಗುತ್ತಿದೆ. ಅದೇ ‘ನಿಮಗೊಂದು ಸಿಹಿಸುದ್ದಿ’.
ಪುರುಷ ಗರ್ಭಧಾರಣೆಯನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು, ಅದನ್ನೇ ವೆಬ್ಸಿರೀಸ್ ರೂಪದಲ್ಲಿ ನಿರ್ದೇಶಕ ಸುಧೀಂದ್ರ ನಾಡಿಗೇರ್ ತೆರೆಗೆ ತರುತ್ತಿದ್ದಾರೆ. ರಘು ಭಟ್ ಕಥೆ ಬರೆಯುವುದರ ಜತೆಗೆ ಮುಖ್ಯಭೂಮಿಕೆಯಲ್ಲಿಯೂ ನಟಿಸಲಿದ್ದಾರೆ. ನಾಯಕಿಯಾಗಿ ಕಾವ್ಯಾ ಶೆಟ್ಟಿ ನಟಿಸಲಿದ್ದು, ವೆಬ್ಸರಣಿಯ ಪರಿಕಲ್ಪನೆ ಕೇಳಿ ಅಚ್ಚರಿಯಲ್ಲಿಯೇ ನಟಿಸಲು ಒಪ್ಪಿಕೊಂಡಿದ್ದಾರಂತೆ.
‘ಈ ಹಿಂದೆ ವೆಬ್ಸರಣಿಯ ಹಲವು ಅವಕಾಶಗಳು ಬಂದಿದ್ದವು. ಆದರೆ, ಅದ್ಯಾವುದಕ್ಕೂ ನಾನು ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ, ಈ ಕಾನ್ಸೆಪ್ಟ್ ಕೇಳುತ್ತಿದ್ದಂತೆಯೇ ತಕ್ಷಣ ಒಪ್ಪಿಕೊಂಡೆ. ಕಥೆಯೂ ವಿಚಿತ್ರವಾಗಿದೆ. ಪುರುಷ ಗರ್ಭಧಾರಣೆ ಕುರಿತ ಕಥೆ ಆಗಿರುವುದರಿಂದ ನೋಡುಗರಿಗೂ ಸಖತ್ ಕುತೂಹಲ ಮೂಡಿಸಲಿದೆ. ಸೆಪ್ಟೆಂಬರ್ 15ರ ನಂತರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ ಕಾವ್ಯಾ.
ಅಂದಹಾಗೆ, ಒಟ್ಟು 9 ಎಪಿಸೋಡ್ಗಳಿರುವ ಈ ವೆಬ್ಸರಣಿಯಲ್ಲಿ ಪ್ರತಿ ಕಂತು 30 ನಿಮಿಷ ಇರಲಿದೆ. ಸೆಪ್ಟೆಂಬರ್ 15ರಿಂದ 30 ದಿನ ಶೂಟಿಂಗ್ ನಡೆಯಲಿದ್ದು, ವರ್ಷಾಂತ್ಯಕ್ಕೆ ಪ್ರದರ್ಶನ ಕಾಣಲಿದೆ. ವಿಶೇಷ ಏನೆಂದರೆ, ಈ ವೆಬ್ಸರಣಿ ಮುಂದಿನ ದಿನಗಳಲ್ಲಿ ಸೀಸನ್ ರೂಪದಲ್ಲಿಯೂ ತಯಾರಾಗಲಿದೆಯಂತೆ.
ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಈ ವೆಬ್ಸರಣಿಯಲ್ಲಿ ಸಣ್ಣ ಕಂಪನಿಯೊಂದರ ಸಿಇಒ ಆಗಿ ಕಾಣಿಸಿಕೊಳ್ಳಲಿದ್ದೇನೆ. ಕಥೆ ಕೇಳಿದೊಡನೆ ಇಷ್ಟವಾಯ್ತು. ಅದರಲ್ಲೂ ಮೇಲ್ ಪ್ರೆಗ್ನನ್ಸಿ ಎಂಬುದೇ ವಿಚಿತ್ರ ಆಗಿರುವುದರಿಂದ, ಹೊಸತನದಿಂದ ಕೂಡಿರಲಿದೆ. | ಕಾವ್ಯಾ ಶೆಟ್ಟಿ ನಟಿ https://www.vijayavani.net/metro-likely-to-resume-schools-to-remain-closed/