ಸಾವರ್ಕರ್​ ಅವರನ್ನೇ ಹೋಲುತ್ತಿದೆ ರಣ್​​ ದೀಪ್ ಲುಕ್: ಚಿತ್ರದ ಫಸ್ಟ್​​ ಲುಕ್​ ರಿಲೀಸ್​

Savarkar
Published on

ಮುಂಬೈ: ಸ್ವತಂತ್ರ ಸೇನಾನಿ ವೀರ ಸಾವರ್ಕರ್​ ಜೀವನಾಧಾರಿತ ಚಿತ್ರ ಬಾಲಿವುಡ್​​ನಲ್ಲಿ ಶೀಘ್ರದಲ್ಲೇ ತೆರೆಗೆ ಬರಲಿದೆ. ಇದರ ಭಾಗವಾಗಿ ಚಿತ್ರತಂಡ ಚಿತ್ರದ ಫಸ್ಟ್​​ ಲುಕ್​​ ರಿಲೀಸ್​ ಮಾಡಿದೆ.

ಸಾವರ್ಕರ್​ ಹುಟ್ಟುಹಬ್ಬದ ಪ್ರಯುಕ್ತ ಶನಿವಾರ ಚಿತ್ರದಲ್ಲಿ ಸಾವರ್ಕರ್​ ಆಗಿ ರಣ್​​ದೀಪ್​​ ಹೂಡ ಅವರು ಕಾಣಿಸಿಕೊಂಡಿದ್ದಾರೆ.

ಸಾವರ್ಕರ್​ ಜೀವನಾಧಾರಿತ ಚಿತ್ರದಲ್ಲಿ ರಣ್​​ದೀಪ್​ ಹೂಡ ಅವರು ಸಾವರ್ಕರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಲೀಸ್​ ಆಗಿರುವ ಮೊದಲ ಲುಕ್​​ನಲ್ಲಿ ಥೇಟ್​ ಸಾವರ್ಕರ್​ ಆಗಿಯೇ ಹೂಡಾ ಕಾಣಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ತಲೆಯ ಮೇಲೆ ಟೋಪಿ, ಜುಬ್ಬಾ, ಅವರು ಧರಿಸುತ್ತಿದ್ದ ರೀತಿಯಲ್ಲೇ ಕನ್ನಡಕ ಹಾಗೂ ದಪ್ಪ ಮೀಸೆಯಲ್ಲಿ ರಣದೀಪ್​​ ಸಾವರ್ಕರ್​​​ ಚಿತ್ರ ನೋಡಿದವರನ್ನು ಗೊಂದಲವನ್ನುಂಟುಮಾಡುವಂತಿದೆ.

ಸದ್ಯ ಚಿತ್ರದ ಫಸ್ಟ್​ ಲುಕ್​​ ಬಿಡುಗಡೆಗೊಳಿಸಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದೆ. ಮಹೇಶ್​ ಮಂಜ್ರೆಕರ್​​ ನಿರ್ದೇಶನದ ಸ್ವತಂತ್ರ ವೀರ ಸಾವರ್ಕರ್​ ಚಿತ್ರ ವೀಕ್ಷಿಸಲು ಇನ್ನು ಕೆಲ ದಿನ ಕಾಯಲೇಬೇಕಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net